ಈದಿನ.ಕಾಮ್ ಸಮೀಕ್ಷೆ: ದಶಕಗಳಲ್ಲಿಯೇ ಬೊಮ್ಮಾಯಿ ಸರ್ಕಾರ ಅತ್ಯಂತ ಭ್ರಷ್ಟ ಎಂದ ಮತದಾರ!

ಬೆಂಗಳೂರು, ಏಪ್ರಿಲ್. 26: ರಾಜ್ಯ ವಿಧಾನಸಭಾ ಚುನಾವಣಾ ಬೆನ್ನಲ್ಲೇ ಕನ್ನಡದ ಈದಿನ.ಕಾಮ್ ರಾಜ್ಯದಲ್ಲಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ್ದು, 2013ರ ನಂತರ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ ಎಂದು ಮತದಾರರು ತಿಳಿಸಿದ್ದಾರೆ ಎಂದು ವರದಿ ಬಹಿರಂಗಪಡಿಸಿದೆ. ರಾಜ್ಯದ ವಿವಿಧ ಭಾಗಗಳ ಹಲವು ಸಮುದಾಯಗಳ ಜನರು ಈ ಸಮೀಕ್ಷೆಯಲ್ಲಿ ಭಾಗಿಯಾಗಿದ್ದಾರೆ.

ಸಮೀಕ್ಷೆಯ ಭಾಗವಾಗಿ, 2013ರ ನಂತರ ಯಾವ ಸರ್ಕಾರ ಅತ್ಯಂತ ಭ್ರಷ್ಟ ಎಂದು ಭಾವಿಸಿದ್ದೀರಿ ಎಂಬ ಪ್ರಶ್ನೆಯನ್ನು ಮತದಾರರಿಗೆ ಕೇಳಲಾಗಿದೆ. ಈ ಅವಧಿಯಲ್ಲಿ ಕೇವಲ ಎರಡು ಚುನಾವಣೆಗಳು ನಡೆದಿದ್ದರೂ ನಾಲ್ವರು ಮುಖ್ಯಮಂತ್ರಿಗಳಾಗಿದ್ದಾರೆ. ಇದಕ್ಕೆ ಉತ್ತರಿಸಿರುವ ಮತದಾರರಲ್ಲಿ ಶೇ.36 ರಷ್ಟು ಮಂದಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವೇ ಕಳೆದ ನಾಲ್ಕು ಸರ್ಕಾರಗಳ ಪೈಕಿ ಅತ್ಯಂತ ಹೆಚ್ಚು ಭ್ರಷ್ಟ ಸರ್ಕಾರ ಎಂದು ಉತ್ತರಿಸಿದ್ದಾರೆ.

Eedina Pre Poll Survey: Bommai’s BJP Govt Is the Decade’s Highly Corrupt Govt Says Voters in Survey

ಇತ್ತೀಚಿನ ಸರ್ಕಾರಗಳ ಪೈಕಿ ಅತ್ಯಂತ ಭ್ರಷ್ಟ ಸರ್ಕಾರ ಯಾವುದು? ಎಂಬ ಪ್ರಶ್ನೆಗೆ ಇಬ್ಬರು ಮುಖ್ಯಮಂತ್ರಿಗಳ ನೇತೃತ್ವದ ಬಿಜೆಪಿ ಸರ್ಕಾರಗಳು ಮತ್ತು ಅದರ ಹಿಂದೆ ಆಡಳಿತ ನಡೆಸಿದ್ದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮುಖ್ಯಮಂತ್ರಿಗಳ ನೇತೃತ್ವದ ಸರ್ಕಾರಗಳನ್ನು ಆಯ್ಕೆಯಲ್ಲಿ ನೀಡಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಮತದಾರರಲ್ಲಿ 36% ರಷ್ಟು ಮತದಾರರು ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವೇ ಕಳೆದ ನಾಲ್ಕು ಸರ್ಕಾರಗಳ ಪೈಕಿ ಅತ್ಯಂತ ಭ್ರಷ್ಟ ಸರ್ಕಾರ ಎಂದು ಉತ್ತರಿಸಿದ್ದಾರೆ.

ಇನ್ನು ಬಿಜೆಪಿ ಸರ್ಕಾರದ ಮತ್ತೊಬ್ಬ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ 14% ರಷ್ಟು ಭ್ರಷ್ಟಾಚಾರದ ಸರ್ಕಾರವಾಗಿತ್ತು ಎಂದು ಹೇಳಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 13% ರಷ್ಟು, ಜೆಡಿಎಸ್‌ನ ನಾಯಕ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ 8% ರಷ್ಟು ಬ್ರಷ್ಟವಾಗಿತ್ತು ಎಂದು ಉತ್ತರಿಸಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

Eedina Pre Poll Survey: Bommai’s BJP Govt Is the Decade’s Highly Corrupt Govt Says Voters in Survey

ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ 2013 ಮತ್ತು 2018 ರ ನಡುವೆ ಐದು ವರ್ಷಗಳ ಆಡಳಿತ ನಡೆಸಿದ್ದಾರೆ. ಮೇ 2018 ರ ಚುನಾವಣೆಯ ನಂತರ ಜಾತ್ಯಾತೀತ ಜನತಾ ದಳದ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ಜೊತೆಗಿನ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದರು. ಆದರೆ ಜೂನ್ 2019 ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಸುಮಾರು 20 ಶಾಸಕರು ಬಿಜೆಪಿಯ ಆಪರೇಷನ್ ಕಮಲಕ್ಕೆ ತುತ್ತಾದ ಕಾರಣ ಬಿಜೆಪಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಇದಾದ ನಂತರ ಬಿಎಸ್‌ವೈ ಅವರನ್ನು ಸಿಎಂ ಸ್ಥಾನದಿಮದ ಕೆಳಗಿಳಿಸಿ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಜುಲೈ 2021 ರಲ್ಲಿ ಸಿಎಂ ಹುದ್ದೆಗೇರಿಸಲಾಯಿತು.

ಈದಿನ.ಕಾಮ್ ಸಮೀಕ್ಷೆಯಲ್ಲಿ, ಪ್ರತಿಕ್ರಿಯಿಸಿದವರಿಗೆ, 36% ಮತದಾರರು ಬೊಮ್ಮಾಯಿ ಸರ್ಕಾರವು ಅತ್ಯಂತ ಭ್ರಷ್ಟ ಎಂದು ಹೇಳಿದ್ದಾರೆ. ಹೆಚ್ಚುವರಿಯಾಗಿ, 14% ಮತದಾರರು ಯಡಿಯೂರಪ್ಪ ನೇತೃತ್ವದ ಸರ್ಕಾರವು ಅತ್ಯಂತ ಭ್ರಷ್ಟ ಎಂದು ತಿಳಿಸಿದ್ದಾರೆ. ಅಂದರೆ ಬಿಜೆಪಿ ನೇತೃತ್ವದ ಸರ್ಕಾರಗಳು ಅತ್ಯಂತ ಭ್ರಷ್ಟ ಎಂದು ಮತದಾರರು ಅಸಮಾಧಾನ ಹೊರಹಾಕಿರುವುದು ಸಮೀಕ್ಷೆಯ ಬಹಿರಂಗಪಡಿಸಿದೆ.

ಇನ್ನು, 13% ಸಿದ್ದರಾಮಯ್ಯನವರ ಸರ್ಕಾರವು ಅತ್ಯಂತ ಭ್ರಷ್ಟ ಎಂದು ಹೇಳಿದ್ದಾರೆ ಮತ್ತು 8% ಜನರು ಕುಮಾರಸ್ವಾಮಿ ಸರ್ಕಾರವನ್ನು ಭ್ರಷ್ಟ ಎಂದಿದ್ದಾರೆ. ಉಳಿದ 29% ಮತದಾರರು "ಎಲ್ಲರೂ ಭ್ರಷ್ಟರು" ಅಥವಾ "ಯಾರೂ ಭ್ರಷ್ಟರಲ್ಲ" ಎಂಬುದನ್ನು ಆಯ್ಕೆ ಮಾಡಿದ್ದಾರೆ. ವಿಶೇಷವೆಂದರೇ ಬಸವರಾಜ ಬೊಮ್ಮಾಯಿ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ ಎಂದು ಹೇಳಿದ ಶೇ.20ರಷ್ಟು ಜನ ಬಿಜೆಪಿ ಬೆಂಬಲಿಗರು ಎಂದು ಈದಿನ ತಿಳಿಸಿದೆ.

Eedina Pre Poll Survey: Bommai’s BJP Govt Is the Decade’s Highly Corrupt Govt Says Voters in Survey

*ಬಸವರಾಜ ಬೊಮ್ಮಾಯಿ ಅಸಮರ್ಥ ಮುಖ್ಯಮಂತ್ರಿ*

ಇನ್ನು, 'ನಿಮ್ಮ ಪ್ರಕಾರ ಕರ್ನಾಟಕದ ಇತಿಹಾಸದಲ್ಲಿ ಅತ್ಯಂತ ಅಸಮರ್ಥ ಮುಖ್ಯಮಂತ್ರಿ ಯಾರು?' ಎಂಬ ಪ್ರಶ್ನೆಗೆ ಉತ್ತರಿಸಿದ ಬಹುತೇಕರು ಬಸವರಾಜ ಬೊಮ್ಮಾಯಿ ಅವರನ್ನೇ ಉತ್ತರವಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಎಂದೂ ಸಮೀಕ್ಷೆ ವರದಿ ಮಾಡಿದೆ. ಮತದಾರರಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಆಯ್ಕೆಯನ್ನು ನೀಡಿರಲಿಲ್ಲ.

ಆದರೆ, ಸಮೀಕ್ಷೆ ಹೇಳುವಂತೆ "ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧದ ಹೆಚ್ಚಿನ ಸಂಖ್ಯೆಯ ಜನರು ಅವರನ್ನು ಕರ್ನಾಟಕದ ಇತಿಹಾಸದಲ್ಲಿ ಅತ್ಯಂತ ಅಸಮರ್ಥ ಮುಖ್ಯಮಂತ್ರಿ ಎಂದು ಹೆಸರಿಸಿದ್ದಾರೆ" ಎಂದಿದೆ. ಒಟ್ಟು ಮತದಾರರಲ್ಲಿ 55% ಜನರು ಈ ಪ್ರಶ್ನೆಗೆ ಉತ್ತರಿಸಿಲ್ಲ. ಆದರೆ, ಉತ್ತರಿಸಿರುವ 45% ಜನರು ಬಸವರಾಜ ಬೊಮ್ಮಾಯಿ "ಅತ್ಯಂತ ಅಸಮರ್ಥ" ಮುಖ್ಯಮಂತ್ರಿ ಎಂದು ಹೇಳಿದ್ದಾರೆ ಎಂದು ತಿಳಿಸಿದೆ.

ಈದಿನ.ಕಾಮ್ ರಾಜ್ಯದ 183 ಕ್ಷೇತ್ರಗಳಲ್ಲಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ್ದು, ಇನ್ನೂ 28 ಕ್ಷೇತ್ರಗಳ ಸಮೀಕ್ಷೆ ನಡೆಯಬೇಕಿದೆ. ರಾಜ್ಯದ ಜನಸಂಖ್ಯೆಯನ್ನು ಪ್ರತಿನಿಧಿಸಲು ವಿವಿಧ ಸಮುದಾಯಗಳಿಂದ ಆಯ್ಕೆಯಾದ ಸುಮಾರು 40,000 ಜನರನ್ನು ಸಮೀಕ್ಷೆಗೆ ಆಯ್ಕೆ ಮಾಡಲಾಗಿದೆ. ಪ್ರತಿ ಕ್ಷೇತ್ರದಲ್ಲಿ 16 ಬೂತ್‌ಗಳ ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಸಮೀಕ್ಷೆಯಲ್ಲಿ 55% ಪುರುಷರು ಮತ್ತು 45% ಮಹಿಳೆಯರು ಭಾಗಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+