ವಾಲ್ಮೀಕಿ ಹಗರಣ: 5114 ಪುಟಗಳ ಚಾರ್ಜ್‌ಶೀಟ್‌ನಿಂದ ಕೋಟಿ ಕೋಟಿ ಲೂಟಿ ಸತ್ಯ ಬಯಲು
ಬೆಂಗಳೂರು, ಸೆಪ್ಟಂಬರ್ 11: ಅಧಿಕಾರಿಯೊಬ್ಬರ ಆತ್ಮಹತ್ಯೆಗೆ ಕಾರಣವಾದ ರಾಜ್ಯ ವಾಲ್ಮೀಕಿ ನಿಗಮದ ಹಗರಣವು ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ರಾಜ್ಯ ಮಹರ್ಷಿ ವಾಲ್ಮಿಕಿ ಅಭಿವೃದ್ಧಿ ನಿಗಮದಲ್ಲಿ ನಡೆದ 196 ಕೋಟಿ ರೂಪಾಯಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿದ್ದ ಜಾರಿ ನಿರ್ದೇಶನಾಲಯ (ED) ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಕಾಂಗ್ರೆಸ್ ಮಾಜಿ ಸಚಿವ ಬಿ. ನಾಗೇಂದ್ರ ಅವರ ಕೈವಾಡ ಇರುವುದು ಖಚಿತವಾಗಿದೆ. ಹಗರಣದ ಮಾಸ್ಟರ್ ಮೈಂಡ್ ಈ ನಾಗೇಂದ್ರ ಎಂದು ಉಲ್ಲೇಖಿಸಲಾಗಿದೆ.
ಜಾರಿ ನಿರ್ದೇಶನಾಲಯವು ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 5,114 ಪುಟಗಳಲ್ಲಿ 15 ಸಾಕ್ಷಿಗಳ ಹೇಳಿಕೆ ಸಹಿತ ಚಾರ್ಜ್‌ಶೀಟ್ ಅನ್ನು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ. ಇದರಲ್ಲಿ ಬಿ.ನಾಗೇಂದ್ರ, ಸತ್ಯನಾರಾಯಣ ವರ್ಮಾ (ಹೈದರಾಬಾದ್), ಎಟಕರಿ ಸತ್ಯನಾರಾಯಣ (ತೆಲಂಗಾಣ), ಜೆ ಜಿ ಪದ್ಮನಾಭ (ಪಾಲಿಕೆಯ ಮಾಜಿ ಎಂಡಿ) ಸೇರಿದಂತೆ 20 ಮಂದಿಯ ಹೆಸರನ್ನು ದೋಷಾರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.

ಮೊಬೈಲ್‌ನಲ್ಲಿ ಸಿಕ್ಕ ಸಾಕ್ಷ್ಯವೇನು?
ಮಾಜಿ ಸಚಿವ ಸೇರಿದಂತೆ ಈ ಮೇಲಿನ ಎಲ್ಲ ಆರೋಪಿಗಳಿಂದ ಬಹುಕೋಟಿ ಹಗರಣ ನಡೆದಿದೆ. ಈ ಪೈಕಿ ನಿಗಮದ 20 ಕೋಟಿ ಹಣವನ್ನು ಲೋಕಸಭಾ ಚುನಾವಣೆಗೆ ಬಳಕೆ ಮಾಡಲಾಗಿದೆ. ಚುನಾವಣೆ ಹೊತ್ತಲ್ಲಿ ತೆಲಂಗಾಣದಲ್ಲಿ ಮದ್ಯ ಖರೀದಿಗೆ ಇಷ್ಟೊಂದು ಹಣ ಬಳಕೆ ಆಗಿರುವುದು, ಬಿ.ನಾಗೇಂದ್ರ ಆಪ್ತ ಸಹಾಯಕ ವಿಜಯ್ ಕುಮಾರ್ ಗೌಡ ಮೊಬೈಲ್ ನಲ್ಲಿ ಸಿಕ್ಕ ಸಾಕ್ಷ್ಯಗಳಿಂದ ರುಜುವಾತಾಗಿದೆ.
ಪ್ರಕರಣದಲ್ಲಿ ಮುಖ್ಯವಾಗಿ ನಿಗಮಕ್ಕೆ ಪದ್ಮನಾಭ ಎಂಬುವವರನ್ನು ನೇಮಕ ಮಾಡುವುದರೊಂದಿಗೆ ಕೋಟಿ ಕೋಟಿ ಲೂಟಿಗೆ ಆರೋಪಿಗಳು ಸಂಚು ಮಾಡಿದ್ದಾರೆ. ಇದರಲ್ಲಿ ಮಾಜಿ ಸಚಿವ ಬಿ.ನಾಗೇಂದ್ರರು ಪ್ರಮುಖ ಪಾತ್ರ ವಹಿಸಿರುವುದುತ ತನಿಖೆಯಿಂದ ತಿಳಿದು ಬಂದಿದೆ. ಹೀಗಾಗಿ ಮಾಜಿ ಸಚಿವರನ್ನೇ ಪ್ರಧಾನ ಆರೋಪಿಯನ್ನಾಗಿ ಮಾಡಲಾಗಿದೆ.
ಬಿ.ನಾಗೇಂದ್ರ ಸಹಚರರ ಜೊತೆಗೂಡಿ ಕೆಲವು ಖಾಸಗಿ ಸಭೆಗಳನ್ನು ಮಾಡಿದ್ದರು. ಹಣ ಹೊಡೆಯಲು ಹೊಸ ಬ್ಯಾಂಕ್ ಖಾತೆಯೊಂದನ್ನು ತೆರದು ಹಣ ಜಮಾ ಮಾಡುವಂತೆ ಮೊದಲೇ ನೇಮಕವಾಗಿದ್ದ ಪದ್ಮನಾಭ ಅವರಿಗೆ ಸೂಚನೆ ಕೊಡಲಾಗಿತ್ತು ಎಂದು ದೋಷಾರೋಪಲ್ಲಿ ಮಾಹಿತಿ ನೀಡಲಾಗಿದೆ.
ಇನ್ನೂ ಮಾಜಿ ಸಚಿವ ಬಿ.ನಾಗೇಂದ್ರ ಅವರ ಕಚೇರಿ ಹಾಗೂ ನಿವಾಸದ ಮೇಲೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜುಲೈ 12ರಂದು ಅವರನ್ನು ಬಂಧಿಸಿದ್ದರು. ಈ ಪ್ರಕರಣದಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ವಿಪಕ್ಷಗಳು ಆರೋಪ ಮಾಡಿದ್ದವು. ಪ್ರಕರಣದಿಂದ ಸರ್ಕಾರ ಮುಜುಗರ ಅನುಭವಿಸಬೇಕಾಯಿತು.
ಇದೇ ವಾಲ್ಮೀಕಿ ಪ್ರಕರಣವಾಗಿ ನಿಗಮದ ಅಧಿಕಾರಿ ಪಿ. ಚಂದ್ರಶೇಖರನ್ ಅವರು ಕೋಟಿ ಕೋಟಿ ಲೂಟಿ, ಬ್ಯಾಂಕ್ ಖಾತೆಗೆ ಹಣ ವಿನಿಮಯ ಬ್ಯಾಂಕ್ ಜೊತೆಗಿನ ಆಡಿಟಿಂಗ್ ವಿಚಾರವಾಗಿ ಹೆಚ್ಚು ಒತ್ತಡ ಅನುಭವಿಸಿದ್ದರು. ಈ ಹಗರಣ ಅವರ ತಲೆಗೆ ಕಟ್ಟಲು ಪ್ರಯತ್ನ ನಡೆಸಲಾಗಿತ್ತು ಎಂಬ ಆರೋಪ ಸಹ ಕೇಳಿ ಬಂದಿದೆ. ಇದೆಲ್ಲ ಕಾರಣದಿಂದ ಅವರು ಮೇ 26ರಂದು ಶಿಮವೊಗ್ಗದ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಸಾವಿನ ಬಳಿಕ ಅಂದು ಅವರು ಬರೆದಿಟ್ಟಿದ್ದ ಡೆತ್‌ನೋಟ್ ಪೊಲೀಸರ ಕೈ ಸೇರಿತ್ತು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications