Get Updates
Get notified of breaking news, exclusive insights, and must-see stories!

Earthquake: ದಾವಣಗೆರೆ, ವಿಜಯನಗರ ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿ ಭೂಕಂಪದ ಅನುಭವ: ಬೆದರಿದ ಜನ

Earthquake: ರಾಜ್ಯದಲ್ಲಿ ಅತೀ ಹೆಚ್ಚು ಭೂಕಂನಕ್ಕೆ ಒಳಗಾಗಿರುವ ಜಿಲ್ಲೆ ಅಂದ್ರೆ ಅದು ವಿಜಯಪುರ. ಆದರೆ, ಇದೀಗ ಡಿಸೆಂಬರ್ 13ರ ಶನಿವಾರ ಸಂಜೆ ವಿಜಯನಗರ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಹಲವೆಡೆ ಭೂಕಂಪನದ ಅನುಭವ ಆಗಿರುವ ಘಟನೆ ನಡೆದಿದೆ. ಹಾಗಾದ್ರೆ, ಯಾವ್ಯಾವ ಭಾಗಗಳಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ದಾವಣಗೆರೆ ಜಿಲ್ಲೆಯ ಜಗಳೂರ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ನಿನ್ನೆ ಸಂಜೆ 7.30ರ ವೇಳೆ ಭಾರೀ ಸದ್ದಿನೊಂದಿಗೆ ಭೂ ಕಂಪನದ ಅನುಭವ ಆಗಿದೆ. ಪಡಿಣಾಮ ಮನೆಗಳಲ್ಲಿನ ವಸ್ತುಗಳು ಅಲ್ಲಾಡಿ ನೆಲಕ್ಕುರುಳಿದ್ದು, ಈ ವೇಳೆ ಜನರು ಭಯಗೊಂಡು ಮನೆಯಿಂದ ಹೊರಗೆ ಓಡಿ ಬಂದ ಘಟನೆ ನಡೆದಿದೆ.

Earthquake Tremors Felt in Vijayanagara Davanagere and Chitradurga Districts of Karnataka

ಜಗಳೂರು ತಾಲೂಕಿನ ಚಿಕ್ಕಮಲ್ಲನ ಹೊಳೆ ಚಿರಂಜೀವಿ ಸೇರಿದಂತೆ ಹಲವೆಡೆ ಭೂಮಿ ಕಂಪಿಸಿದ ಅನುಭವ ಆಗಿದೆ. ಜಗಳೂರು ತಹಶೀಲ್ದಾರರಿಗೆ ಗ್ರಾಮಸ್ಥರು ಈ ವಿಷಯ ತಿಳಿಸಿದ್ದು, ಅವರು ಸ್ಥಳಕ್ಕೆ ಬರುವುದಾಗಿ ತಿಳಿಸಿದ್ದಾರೆ. ಬಳಿಕ ಭೂಕಂಪನ ಹಾಗೂ ಕೇಳಿಬಂದ ಭಯಂಕರ ಶಬ್ಧಕ್ಕೆ ಕಾರಣ ಪತ್ತೆ ಹಚ್ಚಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.

ಅಲ್ಲದೆ, ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಕಲ್ಲಹಳ್ಳಿ, ಚಿತ್ರದುರ್ಗ ತಾಲ್ಲೂಕಿನ ಕೋಲನ್ಮಳ್ಳಿ ಗ್ರಾಮಗಳಲ್ಲಿಯೂ ಇದೇ ರೀತಿಯ ಅನುಭವ ಆಗಿದ್ದು, ಪರಿಣಾಮ ಜನರು ಮನೆಯಿಂದ ಹೊರಗಡೆ ಓಡಿಬಂದ ಘಟನೆ ನಡೆದಿದೆ. ವಿಜಯನಗರ ಜಿಲ್ಲೆಯ ಗಡಿಭಾಗದಲ್ಲಿ ಶನಿವಾರ ಸಂಜೆ 7:10ರ ಸುಮಾರಿಗೆ ಗಡಿ ಗ್ರಾಮ ಟಿ.ಕಲ್ಲಹಳ್ಳಿ, ಚಳ್ಳಕೆರೆ ತಾಲ್ಲೂಕಿನ ಟಿ.ಕೋಲಮ್ಮನಹಳ್ಳಿಯಲ್ಲಿ ಭಾರೀ ಶಬ್ಧದೊಂದಿಗೆ ಭೂಮಿ ಗಢಗಢ ನಡುಗಿದ ಅನಭವ ಜನರಿಗೆ ಆಗಿದೆ. ಈಗಲೂ ಕೂಡ ಈ ಭಾಗಗಳಲ್ಲಿ ಜನರು ಅದೇ ಆತಂಕದಲಿದ್ದಾರೆ.

ಭೂಕಂನದಿಂದ ಬೆಚ್ಚಿದ ಜನ: ಇನ್ನೂ ದೇಶದಗಳ ವಿಚಾರಕ್ಕೆ ಬಂದರೆ ಅತೀ ಹೆಚ್ಚು ಭೂಕಂಪನಕ್ಕೆ ಒಳಗಾಗಿರುವ ದೇಶ ಜಪಾನ್‌ ಆಗಿದೆ.ಇತ್ತೀಚೆಗಷ್ಟೇ ಜಪಾನ್​ನಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.7ರಷ್ಟು ದಾಖಲಾಗಿದೆ.

ಒಂದೇ ದಿನದಲ್ಲಿ 5 ಬಾರಿ ಭೂಮಿ ಕಂಪಿಸಿದ್ದು, ಪರಿಣಾಮ 33 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಭದ್ರತಾ ಸಂಸ್ಥೆಗಳು ದತ್ತಾಂಶ ಸಂಗ್ರಹಿಸಿವೆ. ಆದರೆ, ವಿವರವಾದ ಮಾಹಿತಿಯನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಬಂದಿದೆ.

ಭೂಕಂಪದ ಕೇಂದ್ರಬಿಂದು ಮೇಲ್ಮೈಯಿಂದ ಕೇವಲ 10 ಕಿಲೋ ಮೀಟರ್ ಆಳದಲ್ಲಿ ಇತ್ತು. ಜಪಾನ್‌ನಲ್ಲಿ ಸಂಭವಿಸಿದ 5ನೇ ಭೂಕಂಪ ಇದಾಗಿದೆ. ಜಪಾನ್ ಹವಾಮಾನ ಸಂಸ್ಥೆ ಪ್ರಕಾರ, ಶುಕ್ರವಾರ ಈಶಾನ್ಯ ಜಪಾನ್​ನಲ್ಲಿ 6.7 ತೀವ್ರತೆಯ ಭೂಕಂಪ ಸಂಭವಿಸಿದೆ. ಸುನಾಮಿ ಎಚ್ಚರಿಕೆಯನ್ನು ಸಹ ನೀಡಲಾಗಿದೆ. ಈ ಹಿನ್ನೆಲೆ ಈ ಭಾಗಗಳ ಜನರು ಆತಂಕದಲ್ಲಿದ್ದಾರೆ.

ಈ ವಾರದ ಆರಂಭದಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ಪೆಸಿಫಿಕ್ ಮಹಾಸಾಗರದ ಕರಾವಳಿಯಲ್ಲಿ ಬಿರುಕುಗಳು, ಸಣ್ಣ ಹಾನಿ ಮತ್ತು ಸುನಾಮಿಯನ್ನು ಉಂಟುಮಾಡಿತ್ತು. ಜಪಾನ್‌ನ ಪ್ರಮುಖ ದ್ವೀಪವಾದ ಹೊನ್ಶುವಿನ ಉತ್ತರದ ತುದಿಯಲ್ಲಿರುವ ಅಮೋರಿ ಕರಾವಳಿಯಲ್ಲಿ ಸೋಮವಾರ ಸಂಭವಿಸಿದ ಭೂಕಂಪದಲ್ಲಿ ಕನಿಷ್ಠ 34 ಜನರು ಗಾಯಗೊಂಡಿದ್ದಾರೆ.

ಭೂಕಂಪದ ನಂತರ ಜಪಾನ್ ಹವಾಮಾನ ಸಂಸ್ಥೆಯು 1 ಮೀಟರ್ ಎತ್ತರದ ಅಲೆಗಳು ಏಳಬಹುದು ಎಂದು ಎಚ್ಚರಿಕೆ ನೀಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಹಲವಾರು ಕರಾವಳಿ ಪ್ರದೇಶಗಳಲ್ಲಿ ಎಚ್ಚರಿಕೆಯಿಂದ ಇರುವಂತೆ ಸಂದೇಶ ಕಳುಹಿಸಲಾಗಿದೆ.

ಇನ್ನೂ ಭೂಕಂಪದ ನಂತರ ಮುಂಜಾಗ್ರತಾ ಕ್ರಮವಾಗಿ ಈ ಭಾಗಗಳಲ್ಲಿ ಹಲವಾರು ರೈಲುಗಳನ್ನು ಸ್ಥಗಿತಗೊಳಿಸಲಾಯಿತು ಮತ್ತು ಕರಾವಳಿ ಭಾಗದ ಹೆದ್ದಾರಿಗಳನ್ನು ಮುಚ್ಚಲಾಯಿತು. ಈಗಲೂ ಸಹ ಈ ಭಾಗಗಳ ಜನರು ಮತ್ತೆ ಎಲ್ಲಿ ಭೂಕಂಪ ಸಂಭವಿಸುತ್ತದೆಯೋ ಎನ್ನುವ ಭಯದಲ್ಲೇ ಜೀವನ ನಡೆಸುತ್ತಿದ್ದಾರೆ ಎನ್ನುವ ಮಾಹಿತಿಯಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+