E-Khata: ಗ್ರಾಮೀಣ ಆಸ್ತಿ ಮಾಲೀಕರಿಗೆ ಭರ್ಜರಿ ಗುಡ್‌ ನ್ಯೂಸ್‌: ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ಮಹತ್ವದ ನಿರ್ಧಾರ

E-Khata: ಸರ್ಕಾರವು ಬಿ-ಖಾತಾ ನೀಡುವ ಅಭಿಯಾನ ಹಮ್ಮಿಕೊಂಡಿದೆ. ಇದೀಗ ಗ್ರಾಮೀಣ ಆಸ್ತಿ ಮಾಲೀಕರಿಗೆ ಬಿ ಖಾತಾ ನೀಡುವ ಕುರಿತು ಸರ್ಕಾರ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಈ ಮೂಲಕ ಗುಡ್‌ ನ್ಯೂಸ್‌ ಕೂಡ ಕೊಟ್ಟಿದೆ. ಹಾಗಾದ್ರೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಅನಧಿಕೃತ ಬಡಾವಣೆ, ನಿವೇಶನ, ಮನೆಗಳಲ್ಲಿ ಜೀವನ ನಡೆಸುತ್ತಿರುವ ಗ್ರಾಮೀಣ ಪ್ರದೇಶದ ಜನತೆಗೆ ಬಿ ನಮೂನೆ ಇ-ಖಾತಾ ನೀಡುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕಾಗಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್(ತಿದ್ದುಪಡಿ) ವಿಧೇಯಕ -2025ಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ.

E-Khata Good News for Property owners Important decision by Government

ಸರ್ಕಾರದ ಈ ನಿರ್ಧಾರದ ಅನ್ವಯದ ಗ್ರಾಮೀಣ ಪ್ರದೇಶದ ಅನಧಿಕೃತ ಆಸ್ತಿಗಳಿಗೆ ಶುಲ್ಕ ಪಡೆದುಕೊಂಡು ಬಿ ನಮೂನೆಯಲ್ಲಿ ಇ-ಖಾತಾ ವಿತರಿಸಲಾಗುತ್ತದೆ. ಈ ಮೂಲಕ ಅವುಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಲಾಗುವುದು. ಈ ಕ್ರಮದಿಂದ ಆಸ್ತಿ ಮಾಲೀಕರ ಆತಂಕ ದೂರ ಆದಂಯತಾಗಲಿದೆ. ಜೊತೆಗೆ ಆಯಾ ಗ್ರಾಮ ಪಂಚಾಯತಿಗಳಿಗೆ ಆದಾಯ ಹೆಚ್ಚಲಿದೆ. ಸೌಲಭ್ಯ ಕಲ್ಪಿಸಲು ಸಹ ಅನುಕೂಲ ಆಗುತ್ತದೆ.

ಗ್ರಾಮೀಣ ಪ್ರದೇಶದಲ್ಲಿ 96 ಲಕ್ಷ ಅನಧಿಕೃತ ಆಸ್ತಿಗಳಿವೆ ಎಂದು ಹೇಳಲಾಗಿದ್ದು, ಗ್ರಾಮ ಪಂಚಾಯಿತಿಗಳು ಅಗತ್ಯ ಸೌಲಭ್ಯ ಕಲ್ಪಿಸಿದ್ದರೂ ಇ- ಸ್ವತ್ತು, ಗುರುತಿನ ಸಂಖ್ಯೆ ಅಥವಾ ಬಿ -ಖಾತಾ ಇಲ್ಲದ ಕಾರಣ ತೆರಿಗೆ ವಸೂಲಿ ಮಾಡಲು ಸಮಸ್ಯೆ ಆಗಿತ್ತು. ಆಸ್ತಿಗಳನ್ನು ಹೊಂದಿದ ಮಾಲೀಕರಿಗೆ ವಹಿವಾಟು, ಬ್ಯಾಂಕ್ ಸಾಲ ಪಡೆಯಲು ತೊಂದರೆ ಆಗಿತ್ತು. ಇ-ಖಾತಾ ನೀಡುವುದರಿಂದ ಈ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಲಾಗಿದೆ.

ಬಿ ಹಾಗೂ ಇ ಖಾತಾ ಉಚಿತ: ಸರ್ಕಾರದ ಆದೇಶದ ಮೇರೆಗೆ ದಾವಣಗೆರೆ ಮಹಾನಗರ ಪಾಲಿಕೆ ಸೇರಿದಂತೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್​​, ಗ್ರಾಮ ಪಂಚಾಯತ್​ಗಳಲ್ಲಿ ಈಗಾಗಲೇ ಕಂದಾಯ ಆಸ್ತಿಗಳಿಗೆ ಬಿ ಹಾಗೂ ಇ ಖಾತಾ ಉಚಿತವಾಗಿ ನೀಡಲಾಗುತ್ತಿದೆ.

ಅದರಲ್ಲೂ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೇ ಹೆಚ್ಚು ಆಸ್ತಿಗಳಿದ್ದು, ಬಿ ಹಾಗೂ ಇ ಖಾತಾ ಪಡೆಯಲು ಹೆಚ್ಚೆಚ್ಚು ಅರ್ಜಿಗಳು ಬಂದಿವೆ. ಈಗಾಗಲೇ ಅರ್ಜಿ ಸಲ್ಲಿಸಿಕೆ ಮಾಡಿದವರಿಗೆ ಪಾಲಿಕೆಯಿಂದ ಬಿ ಹಾಗೂ ಇ ಖಾತೆ ನೀಡಲಾಗುತ್ತಿದೆ.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆಗಳಲ್ಲಿ ಆಸ್ತಿಗಳಿವೆ. ಪಾಲಿಕೆ ಅಧಿಕಾರಿಗಳು ಸರ್ಕಾರದ ಆದೇಶದ ಅನ್ವಯ ಬಿ ಹಾಗೂ ಇ ಖಾತಾಗಳನ್ನು ಹಂಚಿಕೆ ಮಾಡುತ್ತಿದ್ದಾರೆ. ಈಗಾಗಲೇ ಜಿಲ್ಲಾಧಿಕಾರಿ ಡಾ.ಗಂಗಾಧರ್​​ ಸ್ವಾಮಿ ಜಿಎಂ ಅವರು ಬಿ.ಖಾತಾ ನೀಡಲು ಜಿಲ್ಲೆಯ ಎಲ್ಲಾ ಪಿಡಿಓ, ಪುರಸಭೆ, ನಗರಸಭೆ, ಪಾಲಿಕೆಗೆ ಸೂಚಿಸಿದ್ದಾರೆ.

ಆದೇಶ ಬರುತ್ತಿದ್ದಂತೆಯೇ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 450 ಅರ್ಜಿಗಳು ಬಂದಿದ್ದು, ಇನ್ನು ಜಿಲ್ಲೆಯಾದ್ಯಂತ ಮಾಹಿತಿ ಲಭ್ಯ ಆಗಬೇಕಿದೆ. ಈ ಖಾತಾಗಳನ್ನು ನೀಡಲು 10,000 ರೂಪಾಯಿ ನಿಗದಿಪಡಿಸಲಾಗಿತ್ತು. ದಾವಣಗೆರೆ ಉಸ್ತುವಾರಿ ಸಚಿವರಾದ ಎಸ್​.ಎಸ್​​​.ಮಲ್ಲಿಕಾರ್ಜುನ್​ ಅವರ ಸೂಚನೆ ಮೇರೆಗೆ 50 ರೂಪಾಯಿ ಪಡೆದು ಖಾತಾ ನೀಡಲಾಗುತ್ತಿದೆ.

ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಗಂಗಾಧರ್​ ಸ್ವಾಮಿ .ಜಿ.ಎಂ.ಅವರು, ಬಿ ಖಾತಾ ಮಾಡಲು ಎಲ್ಲಾ ಪಿಡಿಒ, ಪುರಸಭೆ, ನಗರ ಸಭೆ, ಪಾಲಿಕೆಗೆ ಸೂಚನೆ ಕೊಟ್ಟಿದ್ದೇವೆ‌. ಬಿ ಅಥವಾ ಇ ಖಾತಾ ಮಾಡಲು ಆಂದೋಲನ ಮಾಡಿದ್ದೇವೆ ಎಂದು ಹೇಳಿದರು.

ಈಗಾಗಲೇ ದಾವಣಗೆರೆ ಪಾಲಿಕೆಗೆ 450 ಅರ್ಜಿಗಳು ಬಂದಿವೆ. ಜಿಲ್ಲೆಯಲ್ಲಿ ಎಷ್ಟು ಬಂದಿವೆ ಎಂಬ ಮಾಹಿತಿ ಲಭ್ಯವಾಗಬೇಕಿದೆ. ಅಲ್ಲದೆ 14ಕ್ಕೆ ಹರಿಹರದಲ್ಲಿ ಸಭೆ ಮಾಡುತ್ತೇವೆ. ಪಾಲಿಕೆಯಿಂದ 10,000 ರೂಪಾಯಿ ಶುಲ್ಕ ​ ನಿಗದಿ ಮಾಡಲಾಗಿತ್ತು. ಆದರೂ ಸಚಿವರ ಸೂಚನೆ ಮೇರೆಗೆ ಹಣ ಪಡೆಯುತ್ತಿಲ್ಲ. ಬದಲಿಗೆ ಉಚಿತವಾಗಿ ಬಿ ಹಾಗೂ ಇ ಖಾತೆ ಮಾಡಿಕೊಡುತ್ತೇವೆ. ಸರ್ಕಾರದ ಮಾನದಂಡದ ಮೂಲಕ ಅರ್ಜಿ ಕೊಟ್ಟರೆ ಬಿ, ಇ ಖಾತಾ ನೀಡಲಾಗುತ್ತದೆ ಎಂದರು.

ಪಾಲಿಕೆ ಆಯುಕ್ತೆ ರೇಣುಕಾ ಪ್ರತಿಕ್ರಿಯಿಸಿ ಮಹಾನಗರ ಪಾಲಿಕೆಯಿಂದ ಫೆ.20 ರಿಂದ ಬಿ ಖಾತೆ ಕೊಡಲು ಆರಂಭಿಸಿದ್ದೇವೆ. ದಾವಣಗೆರೆ ನಗರದಲ್ಲಿ ಒಟ್ಟು 20 ಸಾವಿರ ಆಸ್ತಿಗಳಿವೆ ಎಂದು ಅಂದಾಜಿಸಲಾಗಿದೆ. ನೇರವಾಗಿ ಮೂರು ವಲಯ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+