ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

NABARD Grameena Habba 2022 : ನಬಾರ್ಡ್ ಪ್ರಾದೇಶಿಕ ಕಚೇರಿಯಲ್ಲಿ ಗ್ರಾಮೀಣರ ಉತ್ಪನ್ನ ನೋಡ ಬನ್ನಿ!

|
Google Oneindia Kannada News

ಬೆಂಗಳೂರು, ಮಾ. 10: ಗ್ರಾಮೀಣ ಕರ ಕುಶಲಕರ್ಮಿಗಳ ಆರ್ಥಿಕ ಪ್ರಗತಿಗೆ ಪೂರಕವಾಗುವ ನಿಟ್ಟಿನಲ್ಲಿ ನಬಾರ್ಡ್ ಕರ್ನಾಟಕ ಪ್ರಾದೇಶಿಕ ಕಚೇರಿ ವತಿಯಿಂದ "ಗ್ರಾಮೀಣ ಹಬ್ಬ" ವನ್ನು ಬೆಂಗಳೂರಿನಲ್ಲಿ ಆಯೋಜಿಸಿದೆ.

ಮಂತ್ರಿ ಸ್ಕ್ವೇರ್ ಮಾಲ್, ಮಲ್ಲೇಶ್ವರಂ, ಬೆಂಗಳೂರಿನಲ್ಲಿ ಮಾರ್ಚ್ 10 ರಿಂದ 14 ಮಾರ್ಚ್ 2022 ರವರೆಗೆ ಈ ಹಬ್ಬ ನಡೆಯಲಿದೆ. ಕರಕುಶಲ ಕರ್ಮಿಗಳ ವಸ್ತು ಪ್ರದರ್ಶನ ಮತ್ತು ಮಾರಾಟಕ್ಕೆ ಈ ಗ್ರಾಮೀಣ ಹಬ್ಬದಲ್ಲಿ ಅವಕಾಶ ಮಾಡಿಕೊಡಲಾಗಿದ್ದು, ಐಎಎಸ್ ಅಧಿಕಾರಿ ಡಾ. ಶಾಲಿನಿ ರಜನೀಶ್ ಗುರುವಾರ ಚಾಲನೆ ನೀಡಿದರು.

ಗ್ರಾಮೀಣ ಕುಶಲಕರ್ಮಿಗಳಿಗೆ ಬೆಂಗಳೂರಿನಲ್ಲಿ ಕೃಷಿ ಮತ್ತು ಕರಕುಶಲ- ಕೈಮಗ್ಗ ಉತ್ಪನ್ನಗಳನ್ನು ಮಾರಾಟ ಮಾಡಲು ಈ ವಸ್ತು ಪ್ರದರ್ಶನ ಅತ್ಯುತ್ತಮ ವೇದಿಕೆಯಾಗಿ ರೂಪಾಂತರಗೊಂಡಿದೆ. ದೇಶದಾದ್ಯಂತ ಗ್ರಾಮೀಣ ಕುಶಲಕರ್ಮಿಗಳು, ನೇಕಾರರು, ರೈತರು ಮತ್ತು ಬುಡಕಟ್ಟು ಜನಾಂಗದವರು ಮತ್ತು ಕರ್ನಾಟಕದ ಹಲವಾರು ಜಿಲ್ಲೆಗಳ ಕೈಯಿಂದ ಮಾಡಿದ ಕಲೆ- ಕರಕುಶಲ ವಸ್ತುಗಳು, ಕೈಮಗ್ಗ ಸೀರೆಗಳು, ಕೈಯಿಂದ ನೇಯ್ದ ಉಡುಗೆ ವಸ್ತುಗಳು, ಗೃಹಾಲಂಕಾರಗಳು, ಬುಡಕಟ್ಟು ಉತ್ಪನ್ನಗಳು, ನೈಸರ್ಗಿಕ ಸೌಂದರ್ಯ ಉತ್ಪನ್ನಗಳು, ಸಾವಯವ ಉತ್ಪನ್ನಗಳು, ಆಭರಣಗಳು ಮತ್ತು ಪರಿಕರಗಳನ್ನು ಪ್ರದರ್ಶಿಸಲಾಗುತ್ತಿದೆ.

Dr. Shalini Rajneesh inaugurated NABARD Grameena Habba-2022 in Mantri Mall

ಗ್ರಾಮೀಣ ಹಬ್ಬ ವಸ್ತು ಪ್ರದರ್ಶನ ಮತ್ತು ಮಾರಾಟದಲ್ಲಿ ಸ್ಪರ್ಧಾತ್ಮಕ ಬೆಲೆಯಲ್ಲಿ ಭಾರತದಾದ್ಯಂತ ಸಾವಿರಾರು ವಿಶೇಷ ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತಿದೆ. ನಬಾರ್ಡ್ ಗ್ರಾಮೀಣ ಹಬ್ಬದಲ್ಲಿ ಕುಶಲಕರ್ಮಿಗಳು, ನೇಕಾರರು, ಸ್ವಸಹಾಯ ಸಂಘಗಳು ತಮ್ಮ ವಿಶಿಷ್ಟ ಉತ್ಪನ್ನಗಳನ್ನು 5 ದಿನಗಳವರೆಗೆ ಪ್ರದರ್ಶಿಸಲಿದ್ದಾರೆ.

ಈ ಉತ್ಪನ್ನಗಳ ಮಾರಾಟದಿಂದ ಗಳಿಸುವ ಆದಾಯವು ಯಾವುದೆ ಮಧ್ಯವರ್ತಿ ಚಾರ್ಜ್ ಇಲ್ಲದೆ ನೇರವಾಗಿ ಕುಶಲಕರ್ಮಿಗಳಿಗೆ ತಲುಪುತ್ತದೆ. ತೆಲಂಗಾಣ, ತಮಿಳುನಾಡು, ಕೇರಳ, ಉತ್ತರ ಪ್ರದೇಶ, ಮಧ್ಯಪ್ರದೇಶ, ಹರಿಯಾಣ, ಒಡಿಶಾ ಮತ್ತು ಛತ್ತೀಸ್‌ಗಢದ ಕುಶಲಕರ್ಮಿಗಳು ಈ ಗ್ರಾಮೀಣ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದು ಕರ್ನಾಟಕದ ವಿವಿಧ ಜಿಲ್ಲೆಗಳಿಂದ 25 ಕ್ಕೂ ಹೆಚ್ಚು ಕುಶಲಕರ್ಮಿಗಳು ಭಾಗವಹಿಸುತ್ತಿದ್ದಾರೆ.

Dr. Shalini Rajneesh inaugurated NABARD Grameena Habba-2022 in Mantri Mall

ಉಡುಪಿ ಸೀರೆಗಳು, ಕಸೂತಿ ಕೆಲಸ, ಆರಿ ಕಸೂತಿ ಬಟ್ಟೆಗಳು, ಚನ್ನಪಟ್ಟಣದ ಆಟಿಕೆಗಳು, ಮೈಸೂರಿನ ವಿಶಿಷ್ಟ ರೋಸ್ವುಡ್ ಕೆತ್ತನೆ, ಕೊಹ್ಲಾಪುರಿ ಚಪ್ಪಲ್ ಗಳು, ಗೃಹಾಲಂಕಾರಗಳು, ಸಾವಯವ ಆಹಾರ ಉತ್ಪನ್ನಗಳು ಮತ್ತು ಜೈಪುರಿ ಹೊದಿಕೆಗಳು, ಬಳೆಗಳಂತಹ ಉತ್ಪನ್ನಗಳು ಸೇರಿದಂತೆ ಕರ್ನಾಟಕದ ವಿಶೇಷ ಉತ್ಪನ್ನಗಳು. ಭೋಪಾಲ್‌ನ, ಮಧ್ಯಪ್ರದೇಶದ ಮಹೇಶ್ವರಿ ರೇಷ್ಮೆ, ತಮಿಳುನಾಡಿನ ರೇಷ್ಮೆ ಸೀರೆಗಳು ಈ ಗ್ರಾಮೀಣ ಹಬ್ಬದ ವೇದಿಕೆಯಲ್ಲಿ ಸಿಗಲಿವೆ. ತೆಲಂಗಾಣದ ಇಕಾತ್ ಸೀರೆಗಳು, ಚತ್ತೀಸ್ ಗಢದ ಕೋಸಾ ರೇಷ್ಮೆ ಸೀರೆಗಳು, ಕೇರಳದ ಮಸಾಲೆಗಳು ಮತ್ತು ದೇವಾಲಯದ ಕರಕುಶಲ ವಸ್ತುಗಳು, ಒಡಿಶಾದ ಆಭರಣಗಳು ಮತ್ತು ಉತ್ತರ ಪ್ರದೇಶದ ಬೆಡ್‌ಶೀಟ್‌ಗಳು ಇತ್ಯಾದಿಗಳು ಲಭ್ಯವಿರುತ್ತವೆ.

Dr. Shalini Rajneesh inaugurated NABARD Grameena Habba-2022 in Mantri Mall

ಈ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಯೋಜನಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ದೇಶದ ಮೂಲೆ ಮೂಲೆಗಳ ಕರಕುಶಲ ವಸ್ತುಗಳನ್ನು ಒಂದೇ ಸ್ಥಳದಲ್ಲಿ ನೀಡುತ್ತಿರುವುದು ಅತ್ಯಂತ ಸಂತೋಷದ ಸಂಗತಿಯೆಂದರು. ನಮ್ಮ ದೇಶದ, ರಾಜ್ಯದ ಗ್ರಾಮೀಣ ಪ್ರತಿಭೆಗಳ ಕಲೆಯನ್ನು ನೋಡುವದೇ ಒಂದು ಸಂಭ್ರಮ ಎಂದರು.

Recommended Video

Rohit Sharma ಬಗ್ಗೆ Ashwin ಹೇಳಿದ್ದೇನು? | Oneindia Kannada

ಈ ಸಂಧರ್ಭದಲ್ಲಿ ನಬಾರ್ಡ್ ನ ಚಿಫ್ ಜನರಲ್ ಮ್ಯಾನೇಜರ್ ನೀರಜ್ ಕುಮಾರ್ ವರ್ಮಾ, ದೀಪಾ. ಪಿಳ್ಳೈ, ಡಿ.ಜಿ.ಎಮ್ ನಬಾರ್ಡ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

English summary
Additional Chief Secretary to Govt of Karnataka Dr. Shalini Rajneesh inaugurated NABARD Grameena Habba-2022. NABARD Grameena Habba is scheduled from March 10-14 at Mantri Square Mall in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X