ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್ ಡೌನ್ 3.0: ಯಾವುದಕ್ಕೆ, ಎಲ್ಲೆಲ್ಲಿ ವಿನಾಯಿತಿ? ಗೊಂದಲವಿಲ್ಲದ ಮಾಹಿತಿ ಇಲ್ಲಿದೆ

|
Google Oneindia Kannada News

ಬೆಂಗಳೂರು, ಮೇ 2: ಕೊರೊನಾ ಸೋಂಕು ಹರಡದಂತೆ ದೇಶದ ಹಿತದೃಷ್ಟಿಗಾಗಿ ಲಾಕ್ ಡೌನ್ ಮುಂದುವರೆಸಲಾಗಿದೆ. ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವ ಸಂಪುಟದ ಸದಸ್ಯರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿದ ಬಳಿಕ ಮೂರನೇ ಹಂತದ ಲಾಕ್ ಡೌನ್ ಮುಂದುವರೆಸುವ ನಿರ್ಧಾರವನ್ನು ಕೇಂದ್ರ ಗೃಹ ಸಚಿವಾಲಯ ಕೈಗೊಂಡಿದೆ.

ಮಾರ್ಚ್ 23 ರಿಂದ ಏಪ್ರಿಲ್ 14 ರ ತನಕ ಮೊದಲ ಹಂತದ ಲಾಕ್ ಡೌನ್, ಬಳಿಕ ಮೇ 3 ರ ತನಕ ಎರಡನೇ ಹಂತದ ಲಾಕ್ ಡೌನ್ ವಿಸ್ತರಣೆ ಆಯಿತು. ಈಗ ಮೂರನೇ ಅವಧಿಗೆ ಮೇ 4 ರಿಂದ 17 ದಿನಗಳ ಕಾಲ ಲಾಕ್ ಡೌನ್ ಮುಂದುವರೆಯಲಿದೆ.

ಲಾಕ್ಡೌನ್ 3.0: ಯಾವ ಜೋನ್‌ನಲ್ಲಿ ಏನಿರುತ್ತೆ? ಏನಿರಲ್ಲ? ಲಾಕ್ಡೌನ್ 3.0: ಯಾವ ಜೋನ್‌ನಲ್ಲಿ ಏನಿರುತ್ತೆ? ಏನಿರಲ್ಲ?

ಮೇ.17 ರವರೆಗಿನ ಲಾಕ್ ಡೌನ್ 3.0 ಮಾರ್ಗಸೂಚಿ ಬಿಡುಗಡೆ ಆಗಿದ್ದು, ಹಲವು ಗೊಂದಲಗಳಿಗೆ ಕಾರಣವಾಗಿದೆ. ರೆಡ್ ಝೋನ್, ಆರೆಂಜ್ ಝೋನ್ ಮತ್ತು ಗ್ರೀನ್ ಝೋನ್ ಗಳಿಗೆ ಪ್ರತ್ಯೇಕ ಮಾರ್ಗಸೂಚಿ ನೀಡಲಾಗಿದ್ದು, ಕೆಲವು ವಿನಾಯಿತಿಗಳು ಹಸಿರು ಮತ್ತು ಕಿತ್ತಳೆ ವಲಯಗಳಿಗೆ ಮಾತ್ರ ಸೀಮಿತವಾಗಿದೆ.

ಯಾವ ಝೋನ್ ನಲ್ಲಿ ಯಾವುದಕ್ಕೆ ವಿನಾಯಿತಿ ಇದೆ ಎಂಬ ಗೊಂದಲ ಇದ್ದರೆ, ಸಿಂಪಲ್ ಮಾಹಿತಿ ಇಲ್ಲಿದೆ, ಓದಿರಿ...

ಟ್ವೀಟ್ ಮಾಡಿದ್ದಾರೆ ಡಾ.ಕೆ.ಸುಧಾಕರ್

ಮೂರನೇ ಹಂತದ ಲಾಕ್ ಡೌನ್ ನಲ್ಲಿ ಯಾವ ವಲಯದಲ್ಲಿ ಯಾವುದಕ್ಕೆ ವಿನಾಯತಿ ಇದೆ ಎಂಬುದರ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ಸರಳವಾಗಿರುವ ಮಾಹಿತಿಯನ್ನು ಟ್ವೀಟ್ ಮಾಡಿದ್ದಾರೆ.

ಯಾವ ವಲಯದಲ್ಲೂ ಇವುಗಳಿಗೆ ವಿನಾಯಿತಿ ಇಲ್ಲ.!

ಯಾವ ವಲಯದಲ್ಲೂ ಇವುಗಳಿಗೆ ವಿನಾಯಿತಿ ಇಲ್ಲ.!

* ವಿಮಾನ, ರೈಲು, ಮೆಟ್ರೋ

* ಅಂತರಾಜ್ಯ ರಸ್ತೆ ಸಾರಿಗೆ

* ಎಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳು

* ಶಾಪಿಂಗ್ ಮಾಲ್, ಸಿನಿಮಾ ಹಾಲ್, ಹೋಟೆಲ್

* ದೇವಸ್ಥಾನ, ಪ್ರಾರ್ಥನಾ ಮಂದಿರಗಳು, ಜಾತ್ರೆ

* ರಾತ್ರಿ 7 ರಿಂದ ಬೆಳಗ್ಗೆ 7 ರವರೆಗೆ ಸಂಚಾರಕ್ಕೆ ನಿರ್ಬಂಧ

* 65 ವರ್ಷಕ್ಕಿಂತ ಮೇಲ್ಪಟ್ಟವರು, 10 ವರ್ಷ ವಯಸ್ಸಿನೊಳಗಿನ ಮಕ್ಕಳು ಮತ್ತು ಗರ್ಭಿಣಿಯರು ಹೊರಗೆ ಬರುವಂತಿಲ್ಲ.

ಹಸಿರು ಮತ್ತು ಆರೆಂಜ್ ವಲಯದಲ್ಲಿ ಯಾವುದಕ್ಕೆ ವಿನಾಯಿತಿ?

ಹಸಿರು ಮತ್ತು ಆರೆಂಜ್ ವಲಯದಲ್ಲಿ ಯಾವುದಕ್ಕೆ ವಿನಾಯಿತಿ?

* ಸಲೂನ್, ಬ್ಯೂಟಿ ಪಾರ್ಲರ್, ಸ್ಪಾ

* ಮೆಡಿಕಲ್ ಕ್ಲಿನಿಕ್, ಒಪಿಡಿ

* ಈ-ಕಾಮರ್ಸ್

* ಸೀಮಿತ ಸಿಬ್ಬಂದಿಯೊಂದಿಗೆ ಕೃಷಿ, ಕೈಗಾರಿಕೆ

* ಬ್ಯಾಂಕ್ ಚಟುವಟಿಕೆ

* ಕೊರಿಯರ್ ಮತ್ತು ಪೋಸ್ಟ್

* ಸರಕು ಸಾಗಣೆ

ಕಂಟೇನ್ಮೆಂಟ್ ಝೋನ್ ನಲ್ಲಿ ಯಾವುದಕ್ಕೂ ವಿನಾಯಿತಿ ಇಲ್ಲ.!

ಕಂಟೇನ್ಮೆಂಟ್ ಝೋನ್ ನಲ್ಲಿ ಯಾವುದಕ್ಕೂ ವಿನಾಯಿತಿ ಇಲ್ಲ.!

ಕೋವಿಡ್-19 ಸೋಂಕಿತರನ್ನು ಹೊಂದಿರುವ ಕಂಟೇನ್ಮೆಂಟ್ ಝೋನ್ ಗಳಲ್ಲಿ ಯಾವುದೇ ಚಟುವಟಿಕೆಗಳಿಗೂ ವಿನಾಯಿತಿ ಇಲ್ಲ. ಇಲ್ಲಿ ಲಾಕ್ ಡೌನ್ ನಿಯಮಗಳು ಕಟ್ಟುನಿಟ್ಟಾಗಿ ಮುಂದುವರೆಯಲಿದೆ.

English summary
Dr K Sudhakar tweets about Lockdown restrictions ease.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X