ಡಾ. ಕೆ. ಸುಧಾಕರ್ ಗೆಲುವಿಗೆ ಬೆಂಬಲವಾಗಿ ನಿಂತ ಬಿಜೆಪಿ & ಜೆಡಿಎಸ್ ನಾಯಕರು!
2024ರ ಲೋಕಸಭೆ ಚುನಾವಣೆಯಲ್ಲಿ ಡಾ.ಕೆ. ಸುಧಾಕರ್ ಅವರು ಗೆಲುವಿಗೆ ಹತ್ತಿರವಾಗುತ್ತಿದ್ದು ಭರ್ಜರಿ ಬೆಂಬಲ ಪಡೆಯುತ್ತಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ & ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಡಾ. ಕೆ. ಸುಧಾಕರ್ ಅವರು ಸ್ಪರ್ಧೆ ಮಾಡಿದ್ದಾರೆ. ಭರ್ಜರಿಯಾಗೇ ಪ್ರಚಾರ ಆರಂಭಿಸಿರುವ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ಅವರಿಗೆ ಅಬ್ಬರದ ಬೆಂಬಲ ಸಿಗುತ್ತಿದ್ದು, ಗೆಲುವಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ.
ಡಾ. ಕೆ. ಸುಧಾಕರ್ ಅವರು ಅಭಿವೃದ್ಧಿ ಪ್ರತಿಪಾದನೆ ಮಾಡುತ್ತಾ ಮತಯಾಚನೆ ಮಾಡ್ತಾ ಇದ್ದಾರೆ. ಹೀಗಾಗಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮತದಾರರಿಂದ ಕೂಡ ಭರ್ಜರಿಯಾಗಿ ಬೆಂಬಲ ಸಿಗುತ್ತಿದೆ. ಇನ್ನು ಸ್ಥಳೀಯ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಡಾ. ಸುಧಾಕರ್ ಅವರ ಗೆಲುವಿಗಾಗಿ ಹಗಲು & ರಾತ್ರಿ ಲೆಕ್ಕಿಸದೆ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಹೀಗಾಗಿ, ಡಾ. ಕೆ. ಸುಧಾಕರ್ ಅವರಿಗೆ ಹೆಚ್ಚಿನ ಬಲ ಸಿಕ್ಕಂತಾಗಿದೆ. ಅಲ್ಲದೆ ಸ್ಥಳೀಯವಾಗಿ ಬಿಜೆಪಿಗು ಸಾಕಷ್ಟು ಬೆಂಬಲ & ಬಲ ಸಿಗುತ್ತಿದ್ದು, ಡಾ. ಕೆ. ಸುಧಾಕರ್ ಅವರು ಗೆಲುವಿನ ರೇಸ್‌ನಲ್ಲಿ ಮುಂದಿದ್ದಾರೆ.

ಚಿಕ್ಕಬಳ್ಳಾಪುರ ಅಭಿವೃದ್ಧಿ ವಿಚಾರಗಳ ಪ್ರಸ್ತಾಪ
ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿದ್ದ ಡಾ. ಕೆ. ಸುಧಾಕರ್ ಅವರು, ಚಿಕ್ಕಬಳ್ಳಾಪುರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದಾರೆ. ಹೀಗಾಗಿ ಅದೇ ಅಭಿವೃದ್ಧಿ ಕಾರ್ಯದ ಆಧಾರದಲ್ಲಿ ಮತಯಾಚನೆ ಮಾಡುತ್ತಿದ್ದಾರೆ. ಹೀಗಾಗಿ ಸ್ಥಳೀಯ ಮಟ್ಟದಲ್ಲಿ ಮತದಾರರು ಕೂಡ ಬೆಂಬಲ ವ್ಯಕ್ತಪಡಿಸುತ್ತಿದ್ದು, ಪ್ರಧಾನಿ ಮೋದಿ ಅವರ ಅಭಿವೃದ್ಧಿ ಚಿಂತನೆ ಪ್ರಸ್ತಾಪ ಮಾಡುತ್ತಾ ಗೆಲುವಿಗೆ ಮತ್ತಷ್ಟು ಹತ್ತಿರ ಆಗುತ್ತಿದ್ದಾರೆ ಡಾ. ಕೆ. ಸುಧಾಕರ್. ಚಿಕ್ಕಬಳ್ಳಾಪುರ ಜನರಿಗಾಗಿ ನಿರಾವರಿ ಯೋಜನೆ ತಂದ ಬಗ್ಗೆ ಕೂಡ, ಡಾ. ಕೆ. ಸುಧಾಕರ್ ಅವರು ಪ್ರಸ್ತಾಪ ಮಾಡುತ್ತಿದ್ದಾರೆ.
ಕುಮಾರಸ್ವಾಮಿ ಅವರಿಂದಲೂ ಪ್ರಚಾರ
ಇನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕೂಡ ಡಾ. ಸುಧಾಕರ್ ಅವರ ಪರವಾಗಿ ಈಗಾಗಲೇ ಪ್ರಚಾರ ನಡೆಸಿದ್ದಾರೆ. ಅಲ್ಲದೆ ಜೆಡಿಎಸ್ ಪಕ್ಷದ ಚಿಕ್ಕಬಳ್ಳಾಪುರ ಮುಖಂಡರು ಡಾ. ಕೆ. ಸುಧಾಕರ್ ಅವರ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಇದರ ಜೊತೆಯಲ್ಲಿ ಜೆಡಿಎಸ್ ವರಿಷ್ಠರಾದ, ಎಚ್.ಡಿ. ಕುಮಾರಸ್ವಾಮಿ ಅವರು & ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಆಶೀರ್ವಾದ ಕೂಡ ಡಾ. ಕೆ. ಸುಧಾಕರ್ ಅವರಿಗೆ ಇದೆ. ಹೀಗಾಗಿ 2024 ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಡಾ.ಕೆ. ಸುಧಾಕರ್ ಅವರು ಗೆಲುವಿಗೆ ಹತ್ತಿರವಾಗುತ್ತಿದ್ದಾರೆ.
ಒಟ್ನಲ್ಲಿ ಡಾ. ಕೆ. ಸುಧಾಕರ್ ಅವರು ಭರ್ಜರಿ ಗೆಲುವಿಗಾಗಿ ಸಿದ್ಧರಾಗಿದ್ದಾರೆ. ಅಲ್ಲದೆ ಹಿಂದೆ ತಾವು ಸಚಿವರಾಗಿದ್ದ ಸಮಯದಲ್ಲಿ ಹಾಗೂ ಶಾಸಕರಾಗಿದ್ದ ಸಮಯದಲ್ಲಿ ಚಿಕ್ಕಬಳ್ಳಾಪುರದ ಅಭಿವೃದ್ಧಿಗೆ ಶ್ರಮಿಸಿದ್ದ ವಿಚಾರಗಳನ್ನು ಮುಂದಿಟ್ಟು, ಅಭಿವೃದ್ಧಿ ಪರ ಮತ ಹಾಕುವಂತೆ ಮತಯಾಚನೆ ಮಾಡುತ್ತಿದ್ದಾರೆ. ಹೀಗೆ 2024ರ ಲೋಕಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಭಾರಿ ಗಮನ ಸೆಳೆದಿದೆ.











Click it and Unblock the Notifications