ಮತ್ತೆ ದಲಿತ ಮುಖ್ಯಮಂತ್ರಿ ಚರ್ಚೆ ಹುಟ್ಟು ಹಾಕಿದ ಪರಂ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 18 : ಪುನಃ ದಲಿತ ಮುಖ್ಯಮಂತ್ರಿ ಚರ್ಚೆ ಆರಂಭವಾಗಿದೆ. 'ಕೆ.ಆರ್.ನಾರಾಯಣ್ ಅವರು ರಾಷ್ಟ್ರಪತಿಯಾಗಿದ್ದರು. ಅದನ್ನು ಬಿಟ್ಟರೆ ದಲಿತರು ಪ್ರಧಾನಿಯಾಗಿಲ್ಲ. ಎರಡು ಮೂರು ರಾಜ್ಯಗಳಲ್ಲಿ ಬಿಟ್ಟರೆ ದಲಿತರು ಮುಖ್ಯಮಂತ್ರಿ ಆಗಿಲ್ಲ' ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸಿದ್ಧಾರ್ಥ ಶಿಕ್ಷಣ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಸಂಘವು ಭಾನುವಾರ ಏರ್ಪಡಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಗೃಹ ಸಚಿವ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಅವರು, 'ದುರದೃಷ್ಟವಶಾತ್ ನಾವು ಹಿಂದೂ ಧರ್ಮದಲ್ಲಿ ಹುಟ್ಟಿದ್ದೇವೆ. ಆದರೆ, ನಾನು ದಲಿತ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ' ಎಂದರು. [ಕರ್ನಾಟಕ ಜಾತಿಗಣತಿ ವರದಿ: ಮುಸ್ಲಿಮರು ನಂ. 2?]

g parameshwara

'ದೇಶಕ್ಕೆ ಸ್ವಾತಂತ್ರ್ಯ ಬಂದು 6 ದಶಕಗಳು ಕಳೆದರೂ ದಲಿತರಿಗೆ ಸಂಪೂರ್ಣವಾಗಿ ರಾಜಕೀಯ ಅಧಿಕಾರ ಸಿಕ್ಕಿಲ್ಲ. ನಿರ್ಣಯ ತೆಗೆದುಕೊಳ್ಳುವ ಸ್ಥಾನದಲ್ಲಿ ದಲಿತರು ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಪರಮೇಶ್ವರ ಅವರು, ರಾಜ್ಯದಲ್ಲಿ ದಲಿತರು ಮುಖ್ಯಮಂತ್ರಿ ಆಗಿಲ್ಲ' ಎಂದು ಹೇಳಿದರು. [ನಮ್ಮ ತಂದೆಯೇ ನನಗೆ ಕ್ಷೌರ ಮಾಡುತ್ತಿದ್ದರು: ಪರಮೇಶ್ವರ]

ಪರಮೇಶ್ವರ ಅವರು ಹೇಳಿದ್ದಿಷ್ಟು... [ದಲಿತರಿಗೆ ಮುಖ್ಯಮಂತ್ರಿ ಹುದ್ದೆ, ಮೌನ ಮುರಿದ ಸಿದ್ದರಾಮಯ್ಯ]

* 'ಹಳ್ಳಿಗಳಲ್ಲಿ ಕ್ಷೌರಿಕರು ಮನೆ ಮನೆಗೆ ಹೋಗಿ ಕ್ಷೌರ ಮಾಡುತ್ತಾರೆ. ಆದರೆ, ದಲಿತರ ಕೇರಿಗಳಿಗೆ ಹೋಗುವುದಿಲ್ಲ. ನಾನು ಚಿಕ್ಕವನಿದ್ದಾಗ ನನ್ನ ತಂದೆಯೇ ನನಗೆ ಕ್ಷೌರ ಮಾಡುತ್ತಿದ್ದರು. ಆದರೆ, ಏಕೆ ಎಂದು ನನಗೆ ಅರ್ಥವಾಗುತ್ತಿರಲಿಲ್ಲ' [ದಲಿತ ಸಿಎಂ ಚರ್ಚೆ ಹುಟ್ಟುಹಾಕಿದ ಸಂಘಟನೆಗಳು]

* 'ನಾವು ದಲಿತರು ಎಂದು ಧೈರ್ಯದಿಂದ ಹೇಳಬೇಕು. ಈ ಅವಮಾನವನ್ನು ಮುಂದಿನ ಪೀಳಿಗೆಗೆ ಬಿಟ್ಟು ಹೋಗಬಾರದು. ದೇಶ ಬಹಳ ಅಭಿವೃದ್ಧಿ ಹೊಂದುತ್ತಿದೆ. ಆದರೆ, ದಲಿತರು ಇಂದಿಗೂ ದೌರ್ಜನ್ಯ, ಅವಮಾನ ಅನುಭವಿಸುತ್ತಿದ್ದಾರೆ.' ['ದಲಿತರು ಮುಖ್ಯಮಂತ್ರಿಯಾಗಲು ಇದು ಸಕಾಲವಲ್ಲ']

* 'ದಲಿತರು ಇಂದಿಗೂ ಅವಮಾನ ಎದುರಿಸುತ್ತಿದ್ದಾರೆ ಎನ್ನುವುದಕ್ಕೆ ಬೆಂಗಳೂರು ನಗರದಿಂದ 50 ಕಿ.ಮೀ ದೂರದ ಆನೇಕಲ್ ತಾಲೂಕಿನ ಸುತ್ತಮುತ್ತಲ ಊರುಗಳ ಹೋಟೆಲ್‌ಗಳಲ್ಲಿ ದಲಿತರಿಗೆ ಪ್ರತ್ಯೇಕ ಲೋಟ ಇಟ್ಟಿರುವುದು ಸಾಕ್ಷಿ.'

* 'ದಲಿತರು ಅಳುವು ಬಿಟ್ಟು ತಮ್ಮ ಅನಿಸಿಕೆ ಹೇಳಲು ಮುಂದಾಗಬೇಕು. ಅಮೆರಿಕದಲ್ಲಿ ಕರಿಯರೊಬ್ಬರು ಅಧ್ಯಕ್ಷರಾಗುತ್ತಾರೆ. ಅವರಿಗೆ ಕೀಳರಿಮೆ ಇಲ್ಲ. ಅಂಬೇಡ್ಕರ್ ಅವರಿಗೆ ಅಳುಕಿದ್ದರೆ ದಲಿತರ ಸ್ಥಿತಿ ಏನಾಗುತ್ತಿತ್ತು?'.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Chief Minister post for Dalit resounded again. KPCC president and Home Minister Dr.G.Parameshwara on Sunday said, Dalits being denied social justice. The community has not got real political power. The country has not seen a Dalit prime minister and except for a few states where a Dalit has become chief minister.
Please Wait while comments are loading...