ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರವಾರ ಕಡಲ ತೀರದಲ್ಲಿ ತೇಲಿತು ಮೂರು ಮೀಟರ್ ಉದ್ದದ ಡಾಲ್ಫಿನ್ ಕಳೇಬರ

ಕಾರವಾರ ಕಡಲ ತೀರದಲ್ಲಿ ಇಪ್ಪತ್ತು ವರ್ಷದ ಡಾಲ್ಫಿನ್ ಕಳೇಬರ ತೇಲಿದೆ. ಇದನ್ನು ಪರಿಶೀಲಿಸಿದ ತಜ್ಞರು ಸಹಜವಾದ ಸಾವು ಎಂದು ತಿಳಿಸಿದ್ದಾರೆ. ಆದರೆ ಇದನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು

By ಒನ್ಇಂಡಿಯಾ ಪ್ರತಿನಿಧಿ
|
Google Oneindia Kannada News

ಕಾರವಾರ, ಮೇ 23: ರವೀಂದ್ರ ನಾಥ ಟಾಗೋರ್ ಕಡಲ ತೀರದಲ್ಲಿ ಸೋಮವಾರ ಅಚ್ಚರಿ, ಗಾಬರಿ ಹಾಗೂ ಆತಂಕಕ್ಕೆ ಕಾರಣವಾಗುವ ಘಟನೆಯೊಂದು ಸಂಭವಿಸಿತು. ಇಂಡಿಯನ್ ಹಂಪ್ ಬ್ಯಾಕ್ ಪ್ರಭೇದಕ್ಕೆ ಸೇರಿದ ಸುಮಾರು ಇಪ್ಪತ್ತುವರ್ಷ ವಯಸ್ಸಿನ ಮೃತ ಗಂಡು ಡಾಲ್ಫಿನ್ ನ ಕಳೇಬರ ಕಡಲ ತೀರಕ್ಕೆ ತೇಲಿಬಂದಿತು.

ಅಧಿಕಾರಿಗಳು ಹಾಗೂ ತಜ್ಞರು ಸ್ಥಳಕ್ಕೆ ಭೇಟಿ ನೀಡಿ, ಕಳೇಬರವನ್ನು ಪರಿಶೀಲಿಸಿದರು. ಇನ್ನು ಸ್ಥಳದಲ್ಲಿ ಅಪಾರ ಸಂಖ್ಯೆಯ ಜನರು ಸೇರಿ, ಕುತೂಹಲದಿಂದ ವೀಕ್ಷಿಸಿದರು. ಡಾಲ್ಫಿನ್ ಗಳು ಸಸ್ತನಿ ಜಾತಿಗೆ ಸೇರಿದ್ದು, ಸರಾಸರಿ ಇಪ್ಪತ್ತು ವರ್ಷಗಳ ಕಾಲ ಬದುಕುತ್ತವೆ.[ವೈರಲ್ ವಿಡಿಯೋ: ಪುಟ್ಟ ಬಾಲಕಿ ಎಳೆದೊಯ್ದ ಕಡಲ ಸಿಂಹ]

Dolphin dead body found in Karwar beach

ಇವು ಸಾಧಾರಣವಾಗಿ ಚೀನಾ ಹಾಗೂ ಭಾರತದಲ್ಲಿ ಕಂಡುಬರುತ್ತವೆ. ಕಾರವಾರದ ಕಡಲ ತೀರದಲ್ಲಿ ಕಂಡುಬಂದಿರುವ ಡಾಲ್ಫಿನ್ ಗೆ ಯಾವುದೇ ಗಾಯಗಳಾಗಿಲ್ಲ. ಮೂರು ಮೀಟರ್ ಉದ್ದವಿದೆ. ಒಂದು ದಿನದ ಹಿಂದೆಯೇ ಮೃತಪಟ್ಟಿದೆ. ಇದು ಸಹಜ ಸಾವು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಹೂಳಲಾಗುವುದು ಎಂದು ಮೂಲಗಳು ತಿಳಿಸಿವೆ.

English summary
20 year old ale Dolphin dead body found in Karwar beach on Monday. Dolphin died naturally, Experts said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X