ದೇಶಕ್ಕಾಗಿ ಪ್ರಾಣತೆತ್ತ ಕೊಡವ ಯೋಧರೆಷ್ಟು ಗೊತ್ತಾ?

By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ನವೆಂಬರ್ 3: ಪುಟ್ಟ ಜಿಲ್ಲೆ ಕೊಡಗು ದೇಶ ರಕ್ಷಣೆಯಲ್ಲಿ ಸದಾ ಮುಂದು. ಇಲ್ಲಿನ ಸಾವಿರಾರು ಯೋಧರು ಸೇನೆಯಲ್ಲಿ ಕಾರ್ಯನಿರ್ವಹಿಸಿ, ದೇಶ ಸೇವೆ ಮಾಡಿದ್ದಾರೆ. ಮಾಡುತ್ತಲೇ ಇದ್ದಾರೆ. ಮೂಲನಿವಾಸಿಗಳಾದ ಕೊಡವರಲ್ಲಿ ಸ್ವಾತಂತ್ರ್ಯ ನಂತರ ಸುಮಾರು 45 ಮಂದಿ ಯೋಧರು ದೇಶ ಸೇವೆ ಮಾಡುವ ಸಂದರ್ಭ ಹುತಾತ್ಮರಾಗಿದ್ದಾರೆ.

ಹಾಗೆ ನೋಡಿದರೆ 4102 ಚ.ಕಿಮೀ. ವಿಸ್ತೀರ್ಣದ ಕೊಡಗು ಜಿಲ್ಲೆ ರಾಜ್ಯದ 1.92 ಲಕ್ಷ ಚ.ಕಿಮೀ. ಭೌಗೋಳಿಕ ವಿಸ್ತೀರ್ಣಕ್ಕೆ ಹೋಲಿಸಿದರೆ ಶೇ 2.14 ರಷ್ಟು ಮಾತ್ರ ಪಾಲು ಪಡೆದಿದೆ. ಆದರೆ ಈ ಪುಟ್ಟ ಜಿಲ್ಲೆಯು ದೇಶ ಸೇವೆಗಾಗಿ ಸಾವಿರಾರು ಯೋಧರನ್ನು ಕೊಡುಗೆಯಾಗಿ ನೀಡಿದೆ ಎನ್ನುವುದೇ ಹೆಮ್ಮೆಯ ವಿಚಾರವಾಗಿದೆ.

ಇಷ್ಟೊಂದು ಚಿಕ್ಕ ವಿಸ್ತೀರ್ಣದ ಜಿಲ್ಲೆಯಲ್ಲಿ ಸಾವಿರಾರು ಸೇನಾನಿಗಳು ದೇಶ ಸೇವೆಗಾಗಿ ತೊಡಗಿಸಿಕೊಂಡಿರುವುದು ಎಲ್ಲೂ ಕಂಡುಬರುವುದಿಲ್ಲ. ಎರಡನೇ ಮಹಾಯುದ್ಧದ ನಂತರ ದೇಶಕ್ಕಾಗಿ ಕೊಡವ ಜನಾಂಗದ 45 ಯೋಧರು ಹುತಾತ್ಮರಾಗಿರುವುದನ್ನು ನಾವು ಕಾಣಬಹುದು.[ಹುತಾತ್ಮ ಯೋಧನಿಗೆ ಅಂತಿಮ ನಮನ ಸಲ್ಲಿಸಿದ ಭಾರತ]

Do you know how many Kodava soldiers martyr?

ಹುತಾತ್ಮರು: ಸಿಪಾಯಿ ಮಾದಪ್ಪ (ಇಂಡೋ-ಪಾಕ್) 1948, ಜನರಲ್ ಎಂ.ಬಿ.ದೇವಯ್ಯ (ಇಂಡೋ-ಪಾಕ್) 1962, ಸ್ವಾ.ಲಿ. ಎ.ಬಿ.ದೇವಯ್ಯ (ಇಂಡೋ-ಪಾಕ್) 1965, ಸಿ.ಎನ್.ಐಯ್ಯಣ್ಣ (ಇಂಡೋ-ಪಾಕ್) 1965, ದಫೇದಾರ್ ಎಂ.ಎಂ.ಪೂವಯ್ಯ (ಇಂಡೋ-ಪಾಕ್) 1965, ಶಾವರ್ ಎನ್.ಎಸ್. ಕಾರ್ಯಪ್ಪ (ಇಂಡೋ-ಪಾಕ್) 1965, ನಾಯಕ್ ಕೆ.ಎನ್. ಪೊನ್ನಪ್ಪ, (ಇಂಡೋ-ಪಾಕ್) 1965, ಸುಬೇದಾರ್ ಬಿ.ಎಂ. ಕಾವೇರಪ್ಪ, (ಕ್ಯಾಕ್‍ಟಸ್ ಲೈಲಿ) 1971, ಸಿಪಾಯಿ ಎಂ.ಎಸ್. ಮುತ್ತಣ್ಣ (ಕ್ಯಾಕ್‍ಟಸ್ ಲೈಲಿ) 1971, ಸಿ.ಎಫ್.ಎನ್. ಎಂ.ಎಸ್. ಪೊನ್ನಣ್ಣ (ಕ್ಯಾಕ್‍ಟಸ್ ಲೈಲಿ) 1971, ಸಿಪಾಯಿ ಎನ್.ಎಂ.ಅಪ್ಪಚ್ಚು (ಕ್ಯಾಕ್‍ಟಸ್ ಲೈಲಿ) 1971,

ಗನ್ನರ್ ಎಸ್.ಆರ್. ಪಳಂಗಪ್ಪ (ಕ್ಯಾಕ್‍ಟಸ್ ಲೈಲಿ) 1971, ಗನ್ನರ್ ಪಿ.ಎಸ್.ರಾಮು (ಆಪರೇಷನ್ ಮೇಘದೂತ್) 1984, ಮೇಜರ್ ಪಿ.ಎ. ದೇವಯ್ಯ (ಆಪರೇಷನ್ ಮೇಘದೂತ್) 1987, ಮೇಜರ್ ಕೆ.ಎ.ಸೋಮಯ್ಯ, (ಆಪರೇಷನ್ ಪವನ್) 1987, ಗನ್ನರ್ ಎಂ.ಬಿ.ಕುಶಾಲಪ್ಪ, (ಆಪರೇಷನ್ ಮೇಘದೂತ್) 1987, ಗನ್ನರ್ ಎಂ.ಪಿ.ಬೋಪಯ್ಯ (ಆಪರೇಷನ್ ಪವನ್) 1987, ಮೇಜರ್ ರಂಜಿತ್ ಮುತ್ತಣ್ಣ (ಆಪರೇಷನ್ ಪವನ್) 1987, ಸಿಪಾಯಿ ಎಚ್.ವೈ.ವೆಂಕಟೇಶ್, (ಆಪರೇಷನ್ ಪವನ್) 1988, ಸಿಪಾಯಿ ಕೆ.ಎ.ರಾಮಕೃಷ್ಣ (ಆಪರೇಷನ್ ಪವನ್) 1988, ನಾಯಕ್ ಪಿ.ಎ. ಶಂಭು (ಆಪರೇಷನ್ ರಕ್ಷಕ್)1991,[ಸಂದೀಪ್ ಉನ್ನಿಕೃಷ್ಣನ್ ಸ್ಮರಣೆ ಪ್ರತಿದಿನದ ಕೆಲಸವಾಗಲಿ]

ಹವಾಲ್ದಾರ್ ಪಿ.ಬಿ.ಕುಟ್ಟಪ್ಪ (ಆಪರೇಷನ್ ರಿನೋ) 1993, ಎಲ್. ನಾಯಕ್ ಸಿ.ಎಂ. ಸೋಮಯ್ಯ (ಆಪರೇಷನ್ ರಕ್ಷಕ್) 1994, ಲೆ.ಕ. ಕೆ.ಬಿ.ಪೂಣಚ್ಚ (ಆಪರೇಷನ್ ಆರ್ಚಿಡ್) 1994, ಮೇಜರ್ ಗಣೇಶ್ ಮಾದಪ್ಪ (ಆಪರೇಷನ್ ರಕ್ಷಕ್) 1995, ಎಲ್.ನಾಯಕ್ ಸಿ.ಆರ್.ಚಂದ್ರ (ಆಪರೇಷನ್ ರಕ್ಷಕ್) 1995, ಎನ್.ಬಿ. ಸಬ್. ಜಿ. ಇ. ಉತ್ತಯ್ಯ (ಆಪರೇಷನ್ ಆರ್ಚಿಡ್) 1996, ಸಬ್. ಎಸ್. ಕೆ. ಮೇದಪ್ಪ, (ಆಪರೇಷನ್ ವಿಜಯ್) 1999, ನಾಯಕ್ ಪಿ.ಡಿ. ಕಾವೇರಪ್ಪ (ಆಪರೇಷನ್ ವಿಜಯ್) 1999, ಮೇಜರ್ ಎಂ.ಸಿ.ಮುತ್ತಣ್ಣ (ಆಪರೇಷನ್ ರಕ್ಷಕ್) 2000, ಎನ್.ಬಿ.ಸಬ್. ಎಸ್.ಎಸ್. ಈರಪ್ಪ (ಆಪರೇಷನ್ ಫಾಲ್ಕಾನ್) 2000,

ಎಲ್. ನಾಯಕ್. ಕೆ.ಎ ಸವೀನ (ಆಪರೇಷನ್ ರಕ್ಷಕ್) 2000, ಸಿಪಾಯಿ ಬಿ.ಎಂ ದೇವಪ್ಪ (ಆಪರೇಷನ್ ರಕ್ಷಕ್) 2001, ಸಬ್. ಕೆ.ಪಿ. ಬೆಳ್ಯಪ್ಪ (ಆಪರೇಷನ್ ಫಾಲ್ಕಾನ್) 2002, ಹವಾಲ್ದಾರ್ ಬಿ.ಎಸ್. ದೇವಯ್ಯ (ಆಪರೇಷನ್ ಪರಾಕ್ರಮ್, 2002, ಸಿಪಾಯಿ ಸಿ.ಪಿ. ಅರುಣ್ (ಆಪರೇಷನ್ ಆಫ್ ಜಮ್ಮು ಕಾಶ್ಮೀರ್) 2003, ಎಲ್. ನಾಯಕ್. ಎ,ಯು. ಬಿದ್ದಪ್ಪ, (ಆಪರೇಷನ್ ಮೇಘದೂತ್) 2003, ನಾಯಕ್. ಎಚ್,ಜಿ ಸುಂದರೇಶ್, (ಆಪರೇಷನ್ ಪರಾಕ್ರಮ್) 2003, ಸಿಪಾಯಿ ಎ.ಪಿ.ಪ್ರಶಾಂತ್ (ಆಪರೇಷನ್ ರಕ್ಷಕ್) 2003,[ಹುತಾತ್ಮ ಯೋಧರಿಗೆ ಅಂತಿಮ ನಮನ ಸಲ್ಲಿಕೆ]

ನಾಯಕ್ ಕೆ.ಕೆ.ತಿಮ್ಮಯ್ಯ (ಆಪರೇಷನ್ ರಕ್ಷಕ್) 2007, ಎಲ್. ನಾಯಕ್. ಕೆ.ಸಿ.ತಿಲಕ್ (ಆಪರೇಷನ್ ರಕ್ಷಕ್) 2008, ಮೇಜರ್ ಸುನೀಲ್ ಗಣಪತಿ (ಆಪರೇಷನ್ ರಕ್ಷಕ್) 2008, ನಾಯಕ್ ಎ. ತಂಗಪ್ಪ, ರಾಧಾಕೃಷ್ಣ (ಆಪರೇಷನ್ ರಕ್ಷಕ್) 2009, ಸಿಪಾಯಿ ಕೆ.ಎಸ್.ರವೀಂದ್ರ (ಆಪರೇಷನ್ ರಕ್ಷಕ್) 2009, ಲೆ.ಕ ಸಿ.ಎನ್. ನಂಜಪ್ಪ (ಆಪರೇಷನ್ ಫಾಲ್ಕಾನ್) 2011.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kodagu, a small district in Karnataka. But, number of soldiers who sacrifised their life to nation are more. 45 people martyr after indepence of India.
Please Wait while comments are loading...