• search

ಕಾಂಗ್ರೆಸ್ ಮತ್ತು ಬಿಜೆಪಿಗೆ ಮತ ನೀಡಬೇಡಿ: ಮಾಯಾವತಿ ಆಕ್ರೋಶ

By Sachhidananda Acharya
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಫೆಬ್ರವರಿ 17: ಇಂದು ನಗರದಲ್ಲಿ ವಿಕಾಸ ಪರ್ವದ ಹೆಸರಿನಲ್ಲಿ ಬೃಹತ್ ಸಮಾವೇಶ ನಡೆಸಿದ ಜಾತ್ಯಾತೀತ ಜನತಾದಳ ಮತ್ತು ಬಹುಜನ ಸಮಾಜವಾದಿ ಪಕ್ಷಗಳು ಕರ್ನಾಟಕ ವಿಧಾನಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿವೆ.

  ಲಕ್ಷಾಂತರ ಜನರು ನೆರೆದಿದ್ದ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಬಿಎಸ್ಪಿ ವರಿಷ್ಠೆ ಮಾಯಾವತಿ ರಾಜ್ಯದ ಕಾಂಗ್ರೆಸ್ ಸರಕಾರ ಮತ್ತು ಕೇಂದ್ರದ ಬಿಜೆಪಿ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

  ಜೆಡಿಎಸ್ 'ವಿಕಾಸ ಪರ್ವ' ಬೃಹತ್‌ ಸಮಾವೇಶ

  ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ದಲಿತರಿಗೆ ಏನೂ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು, "ಮುಂಬರುವ ಚುನಾವಣೆಯಲ್ಲಿ ಎರಡೂ ಪಕ್ಷಗಳಿಗೆ ಕರ್ನಾಟಕದ ಜನರು ಮತ ನೀಡದೆ ಬುದ್ಧಿ ಕಲಿಸಬೇಕು," ಎಂದು ಕರೆ ನೀಡಿದ್ದಾರೆ.

  Do not vote for Congress and BJP: Mayawati in Vikasa Parva

  "ದಲಿತರು, ಮುಸ್ಲಿಮರು, ರೈತರು, ಕಾರ್ಮಿಕರ ಕಲ್ಯಾಣ ಆಗಬೇಕೆಂದರೆ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕಾಗಿದೆ. ಈ ಎರಡೂ ಪಕ್ಷಗಳು ಜಾತಿವಾದಿ ಮನಸ್ಥಿತಿಯಿಂದ ಹೊರಬರುವವರೆಗೆ ಅವರ ವಿರುದ್ಧ ನಮ್ಮ ಹೋರಾಟ ನಿಲ್ಲದು," ಎಂದು ತೀವ್ರ ವಾಗ್ದಾಳಿ ನಡೆಸಿದರು.

  "ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಿಂದ ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರಿಗೆ ಸರಿಯಾದ ಗೌರವ ಸಿಕ್ಕಿಲ್ಲ, ಈಗಲೂ ಸಿಗುತ್ತಿಲ್ಲ," ಎಂದು ಬೆಹನ್ ಜೀ ಹರಿಹಾಯ್ದರು.

  ಚಿತ್ರಗಳು : ಕುಮಾರಸ್ವಾಮಿಯ ವಿಕಾಸ ವಾಹಿನಿ ಯಾತ್ರೆ

  ಮುಖ್ಯವಾಗಿ ಕರ್ನಾಟಕದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಮಾಯಾವತಿ, "ಕಾಂಗ್ರೆಸ್ ಪಕ್ಷವು ಕುತಂತ್ರದಿಂದ ಅಂಬೇಡ್ಕರ್‌ ಅವರನ್ನು ಚುನಾವಣೆಯಲ್ಲಿ ಸೋಲಿಸಿತ್ತು. ಅಂಬೇಡ್ಕರ್‌ ಅವರಿಗೆ ಭಾರತ ರತ್ನ ಗೌರವ ನೀಡಲೂ ಕಾಂಗ್ರೆಸ್ ಒಪ್ಪಲಿಲ್ಲ. ಬಿಎಸ್‌ಪಿ ಸಂಸ್ಥಾಪಕ ಕಾನ್ಶಿರಾಂ ಅವರು ತೀರಿಕೊಂಡಾಗ ಆಡಳಿತದಲ್ಲಿದ್ದ ಕಾಂಗ್ರೆಸ್ ಸರ್ಕಾರ, ರಾಷ್ಟ್ರ ಶೋಕ ಕೂಡ ಘೋಷಣೆ ಮಾಡಲಿಲ್ಲ. ಕಾಂಗ್ರೆಸ್ ಸದಾ ದಲಿತ ವಿರೋಧಿಯಾಗಿ ನಡೆದುಕೊಂಡಿದೆ," ಎಂದು ಕಿಡಿಕಾರಿದ ಮಾಯಾವತಿ ಕರ್ನಾಟಕದ ಜನರು ಕಾಂಗ್ರೆಸ್ ಗೆ ಬುದ್ಧಿ ಕಲಿಸಬೇಕು ಎಂದು ಮನವಿ ಮಾಡಿಕೊಂಡರು.

  ನಂತರ ಕೇಂದ್ರ ಸರಕಾರದ ಮೇಲೂ ಹರಿಹಾಯ್ದ ಮಾಯಾವತಿ, "ನರೇಂದ್ರ ಮೋದಿ ಅಧಿಕಾರಕ್ಕೆ ಬಂದರೆ ಕಪ್ಪು ಹಣ ವಾಪಸ್ ತರುತ್ತೇನೆ ಎಂದರು. ಆದರೆ ಬಡವರ ಮನೆಗೆ ಒಂದು ರೂಪಾಯಿಯೂ ಬಂದು ತಲುಪಲಿಲ್ಲ," ಎಂದರು. ಅಪನಗದೀಕರಣ, ಜಿಎಸ್‌ಟಿಯನ್ನು ತೆಗಳಿದ ಅವರು, "ಉದ್ಯೋಗ ಕೊಡಿ ಎಂದರೆ ಮೋದಿ ಅವರು ಪಕೋಡಿ ಮಾರಿ ಎನ್ನುತ್ತಾರೆ," ಎಂದರು ಆಕ್ರೋಶ ವ್ಯಕ್ತಪಡಿಸಿದರು.

  "ರಾಜ್ಯದ ಕಾಂಗ್ರೆಸ್‌ ಸರ್ಕಾರದ ಕೆಟ್ಟ ನಿರ್ಧಾರಗಳಿಂದ ರಾಜ್ಯದ ಅಭಿವೃದ್ಧಿ ಆಗಿಲ್ಲ. ಹಾಗಾಗಿ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಅಧಿಕಾರ ಹಿಡಿಯದಂತೆ ತಡೆಯಬೇಕಾದ ಜವಾಬ್ದಾರಿ ನಿಮ್ಮ ಮೇಲಿದೆ. ಜೆಡಿಎಸ್ ಮತ್ತು ಬಿಎಸ್‌ಪಿಯ ಮೈತ್ರಿ ಪಕ್ಷವು ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿಯುವಂತೆ ಮಾಡಿ, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಆಗಿ ರಾಜ್ಯದ ಅಭಿವೃದ್ಧಿಗೆ ಸಹಾಯ ಮಾಡಿ," ಎಂದು ನೆರೆದಿದ್ದ ಜನರಲ್ಲಿ ಮಾಯಾವತಿ ಮನವಿ ಮಾಡಿಕೊಂಡರು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Today, JD (S) and BSP parties have held a massive convention in Bengaluru. Speaking in rally, BSP supremo Mayawati attacked on Congress and BJP. "In the coming elections, people of Karnataka need to teach lessens to BJP and Congress by without voting," she appealed.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more