ಡಿ ಕೆ ಶಿವಕುಮಾರ್ ಸಿಎಂ ಆಗ್ತಾರೆ : ಡಿ ಕೆ ಸುರೇಶ್ ಭವಿಷ್ಯ
ಬೆಂಗಳೂರು, ಫೆಬ್ರವರಿ 22: ರಾಜ್ಯದಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ಬಹುಮತ ಪಡೆದು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಸರ್ಕಾರ ನಡೆಸುತ್ತಿದ್ದಾರೆ. ಆದರೆ, ಕಾಂಗ್ರೆಸ್ ಪಾಳಯದಲ್ಲಿ ಪದೇ ಪದೇ ಮುಖ್ಯಮಂತ್ರಿ ವಿಚಾರ ಚರ್ಚೆಯಲ್ಲಿರುತ್ತದ್ದು, ಮುಂದೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಾರೆ ಎನ್ನುವ ಚರ್ಚೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.
ಹೌದು, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿಯಾಗಿರುವ ಡಿ ಕೆ ಶಿವಕುಮಾರ್ ಅವರು 2.5 ವರ್ಷದ ಬಳಿಕ ಮುಖ್ಯಮಂತ್ರಿ ಆಗ್ತಾರೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ, ಸಹೋದರ ಡಿ.ಕೆ. ಸುರೇಶ್ ಭವಿಷ್ಯ ನುಡಿದಿದ್ದಾರೆ.

ಕಾಂಗ್ರೆಸ್ ರಾಜಕಾರಣದಲ್ಲಿ ಮುಂದಿನ ಸಿಎಂ ಬಗ್ಗೆ ಚರ್ಚೆಯಾಗುತ್ತಲೇ ಇದೆ. ಕೆಲವರು ಡಿ.ಕೆ ಶಿವಕುಮಾರ್ ಅವರು ಸಿಎಂ ಆಗುತ್ತಾರೆ ಎಂದು ಭವಿಷ್ಯ ನುಡಿದರೆ, ಕೆಲವರು ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿಯಾಗಿದ್ದಾರೆ. ಮುಖ್ಯಮಂತ್ರಿಗಳ ಕುರ್ಚಿ ಖಾಲಿ ಇಲ್ಲ ಎನ್ನುವ ಮಾತು ಸಿದ್ದರಾಮಯ್ಯ ಸಚಿವ ಸಂಪುಟದ ನಾಯಕರಲ್ಲಿ ಕೇಳಿ ಬಂದಿದ್ದು, ಇದೀಗ ಡಿ ಕೆ ಶಿವಕುಮಾರ್ ಅವರ ಸಹೋದರ ಡಿ ಕೆ ಸುರೇಶ್ ಹೇಳಿಕೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ.
ಇನ್ನೂ ಕಾಲ ಬರುವವರೆಗೂ ನಾವು ಕಾಯಬೇಕು. ಲೋಕಸಭಾ ಚುನಾವಣೆಗಾಗಿ ನಾವು ತಯಾರಿ ನಡೆಸುತ್ತಿದ್ದೇವೆ. ಲೋಕಸಭೆಯಲ್ಲಿ ಕಾಂಗ್ರೆಸ್ ಕನಿಷ್ಠ 20 ಸೀಟುಗಳನ್ನು ಗೆಲ್ಲಬೇಕಾದರೆ ಹೆಚ್ಚುವರಿಯಾಗಿ ಮೂರು ಡಿಸಿಎಂ ಹುದ್ದೆ ಸೃಷ್ಟಿಯಾಗಬೇಕು ಎಂದು ಸಚಿವರೊಬ್ಬರು ಹೈಕಮಾಂಡ್ ನಾಯಕರ ಮುಂದೆ ಬೇಡಿಕೆಯನ್ನು ಇಟ್ಟಿದ್ದರು. ಈ ವಿಚಾರ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಯಾಗಿತ್ತು.
ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು, ದಿನ ಬೆಳಗಾದರೆ ಅನೇಕರು ಪೋಷಕರು ತಮ್ಮ ಮಕ್ಕಳಿಗೆ ಉದ್ಯೋಗ ಕೊಡಿಸಿ ಎಂದು ಮನವಿ ತೆಗೆದುಕೊಂಡು ಬರುತ್ತಿದ್ದಾರೆ. ನಿರುದ್ಯೋಗಿಗಳ ಮತ್ತು ಪೋಷಕರ ಪ್ರಶ್ನೆಗಳಿಗೆ ಉತ್ತರಿಸುವುದೇ ದೊಡ್ಡ ಸವಾಲಾಗಿದೆ. ಇಂದು ಉದ್ಯೋಗ ಕೇವಲ ವಿದ್ಯೆಯಿಂದ ಮಾತ್ರ ಸಿಗುವುದಿಲ್ಲ. ಕೌಶಲ್ಯದಿಂದ, ಬದ್ದತೆಯಿಂದ, ಓದಿನ ವಿಸ್ತರಣೆ ಇದ್ದರೆ ಮಾತ್ರ ಸ್ಪರ್ಧಾತ್ಮಕ ಯುಗದಲ್ಲಿ ಕೆಲಸ ಗಿಟ್ಟಿಸಿಕೊಳ್ಳಬಹುದು.
ಇಂದಿನ ದಿನಗಳಲ್ಲಿ ಸರ್ಕಾರಿ ಉದ್ಯೋಗಳಲ್ಲಿ ಮಾತ್ರ ಪಾರದರ್ಶಕತೆ ಇಲ್ಲ. ಖಾಸಗಿ ಸಂಸ್ಥೆಗಳು ಸಹ ಒಂದಷ್ಟು ನೀತಿಗಳನ್ನು ರೂಪಿಸಿಕೊಂಡು ಪಾರದರ್ಶಕವಾಗಿ ಉದ್ಯೋಗ ನೀಡುವ ಕೆಲಸ ಮಾಡುತ್ತಿವೆ.
ಇಡೀ ವಿಶ್ವವೇ ನಿಮ್ಮ ಅಂಗೈಯಲ್ಲಿದೆ. ಪ್ರತಿ ವಿದ್ಯಾರ್ಥಿ ದಿನನಿತ್ಯ 5-6 ತಾಸು ಮೊಬೈಲ್ ನಲ್ಲಿ ಕಳೆಯುತ್ತಾರೆ. ನೀವು ನಿಮ್ಮ ಭವಿಷ್ಯದ ಬಗ್ಗೆ ಗಂಭೀರವಾಗಿ ಪರಿಗಣಿಸಿ ಕೌಶಲ್ಯ, ವ್ಯಕ್ತಿತ್ವ ರೂಪಿಸಿಕೊಂಡರೆ ನಿಮಗೆ ಕೆಲಸ ಸಿಗುತ್ತದೆ. ಇಲ್ಲದಿದ್ದರೆ ಸಿಗುವುದಿಲ್ಲ. ರೀಲ್ಸ್ ಮಾಡಿ ಮನರಂಜನೆ ಪಡೆಯುವ ಬದಲು, ಉಪಯುಕ್ತ ಮಾಹಿತಿ ಪಡೆಯಬೇಕು. ನಿಮ್ಮ ಭವಿಷ್ಯ ರೂಪಿಸಿಕೊಳ್ಳಲು ಪ್ರತಿನಿತ್ಯ ಒಂದು ಗಂಟೆಯಾದರೂ ನೀವು ಚಿಂತನೆ, ಶ್ರಮ ವಹಿಸಬೇಕು.
ರಾಜ್ಯದ ತೆರಿಗೆ ಹಣ ರಾಜ್ಯಕ್ಕೆ ಸಿಗಬೇಕು ಎಂದು ದನಿ ಎತ್ತಿದ್ದೇನೆ. ನಮ್ಮ ಮುಂದಿನ ಪೀಳಿಗೆಗಳ ಭವಿಷ್ಯ ರಕ್ಷಣೆಗೆ. ಉತ್ತರದ ರಾಜ್ಯಗಳು ಕರ್ನಾಟಕವನ್ನು ತುಳಿದು ಮೇಲೆ ಬರುವುದನ್ನು ತಪ್ಪಿಸಲು ದನಿ ಎತ್ತಿದ್ದೇನೆ. ಎಲ್ಲಾ ಉದ್ಯಮಗಳನ್ನು ಗುಜರಾತ್ ಹಾಗೂ ಉತ್ತರಪ್ರದೇಶದಲ್ಲಿ ಆರಂಭಿಸಲು ಸೂಚಿಸಲಾಗುತ್ತಿದೆ. ಕನ್ನಡಿಗರು ಗುಜರಾತ್ ಹಾಗೂ ಉತ್ತರ ಪ್ರದೇಶಕ್ಕೆ ಹೋಗಿ ಉದ್ಯೋಗ ಪಡೆಯಲು ಸಾಧ್ಯವಿಲ್ಲ. ಆದ ಕಾರಣ ನಮ್ಮ ನೆಲದ ಮಕ್ಕಳಿಗೆ ನಮ್ಮಲ್ಲಿಯೇ ಉದ್ಯೋಗ ದೊಕಿಸಿಕೊಡಬೇಕು ಎನ್ನುವುದು ನಮ್ಮ ಕನಸು ಎಂದು ಹೇಳಿದರು.












Click it and Unblock the Notifications