ಮೇಕೆದಾಟು ಪಾದಯಾತ್ರೆಯಲ್ಲಿ ಡಿಕೆಶಿ ಕುಡಿದು ತೂರಾಡಿದ್ರು- ಎಚ್‌ಡಿಕೆ ಲೇವಡಿ
ಬೆಂಗಳೂರು ಏಪ್ರಿಲ್ 10: ಮೇಕೆದಾಟು ಪಾದಯಾತ್ರೆಯಲ್ಲಿ ಡಿಕೆ ಶಿವಕುಮಾರ್ ಅವರು ಕುಡಿದು ತೂರಾಡಿದ್ರಲ್ಲಾ ಆ ರೀತಿ ನಾವೇನ್ ತೂರಾಡಿಲ್ಲ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದಾರೆ.
ಲೋಕಸಭಾ ಚುನಾವಣೆಗೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಎಣ್ಣೆ, ಹಣ, ಬಟ್ಟೆ ಎಲ್ಲವೂ ಹರಿದಾಡತೊಗಿವೆ. ಈ ನಡುವೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ತೋಟದ ಮನೆಯಲ್ಲಿ ಮದ್ಯ ಹಾಗೂ ಬಾಡೂಟದ ವಾಸನೆ ಬರುತ್ತಿದೆ ಎಂದು ಕಾಂಗ್ರೆಸ್ ಎಕ್ಸ್ ಮೂಲಕ ಕಾಲೆಳೆದಿದೆ. ಇದಕ್ಕೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಮೇಕೆದಾಟು ಪಾದಯಾತ್ರೆಯಲ್ಲಿ ಡಿಕೆ ಶಿವಕುಮಾರ್ ಕುಡಿದು ತೂರಾಡಿದ್ರು ನಾವೇನು ಅವರ ರೀತಿ ತೂರಾಡಿಲ್ಲ ಅಂತ ಎಚ್‌ಡಿ ಕುಮಾರಸ್ವಾಮಿ ಲೇವಾಡಿ ಮಾಡಿದ್ದಾರೆ. ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್‌ಡಿ ಕುಮಾರಸ್ವಾಮಿ, 'ಮೇಕೆದಾಟು ಪಾದಯಾತ್ರೆ ಸಮಯದಲ್ಲಿ ಏನಾಯಿತು ಅಂತ ಗೊತ್ತಿದೆ. ನಾನೇನು ಆ ರೀತಿ ತೂರಾಡಿಲ್ಲ. ನಾನು ನನ್ನ ತೋಟದಲ್ಲಿ ಊಟ ಹಾಕಿದರೆ ಇವರಿಗೇನು? ರಾಜ್ಯಕ್ಕೆ ಎರಡು ಕೋಟಿ ಬರ ಪರಿಹಾರ ಬಿಡುಗಡೆ ಮಾಡಿದೆ. ರಾಜ್ಯದ ಜನರನ್ನು ಕಾಂಗ್ರೆಸ್ ದಾರಿ ತಪ್ಪಿಸುತ್ತಿದೆ'' ಅಂತ ಗುಡುಗಿದ್ದಾರೆ.
ಕುಮಾರಸ್ವಾಮಿ ಮಾತಿಗೆ ತಿರುಗೇಟು ನೀಡಿ, ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, 'ನಾನು 500 ಜನಕ್ಕೆ ಊಟ ಹಾಕಿಸಲು ಪರ್ಮಿಷನ್ ತೆಗೆದುಕೊಂಡಿದ್ದೆ. ಆಗ ಇವರು ಮಾತನಾಡಿದ್ದರು. ಈಗ ಅವರೇ ಊಟ ಹಾಕಿಸುತ್ತಿದ್ದಾರೆ. ಇದೆಲ್ಲಾ ಯಾಕೆ ನಾವು ಮುಂದೆ ಮಾತನಾಡೋಣ ಬಿಡಿ' ಎಂದರು.
'ನಾನೇನು ಕುಡಿದು ತೂರಾಡಿಲ್ಲ. ನಾನು ಸುಸ್ತಾಗಿ ತೂರಾಡಿದೆ. ಪಾದಯಾತ್ರೆ ಮಾಡಿದ್ವಿ ತಾನೇ. ಅವರೇನು ಮೇಕೆದಾಟು ಪಾದಯಾತ್ರೆ ಮಾಡಿದ್ರಾ? ನಾನು ಮಾಡಿದೆ ಅಷ್ಟು ಸಾಕು ನನಗೆ' ಎಂದು ಡಿಕೆ ಶಿವಕುಮಾರ್ ಎಚ್‌ಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿದರು.
'ಶೊಭಾಕ್ಕ, ನಿರ್ಮಲಾ ಸೀತಾರಾಮನ್ ಏನ್ ಮಾಡಿದ್ರು ಬರಗಾಲಕ್ಕೆ? ಏನು ಮಾಡಿಲ್ಲ? ಒಂದು ದಿನಕ್ಕೆ ಅವರು ಈ ಬಗ್ಗೆ ಮಾತನಾಡಿಲ್ಲ. ಬರಗಾಲಕ್ಕೆ ಶೋಬಕ್ಕೆ ಏನ್ ಮಾಡಿದ್ರು? ಮಹದಾಯಿ ಮೇಕೇದಾಟಿಗೆ ಪರ್ಮಿಷನ್ ಕೊಡಿಸಲಿ' ಎಂದು ಇದೇ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಗುಡುಗಿದರು.











Click it and Unblock the Notifications