ಸಿಬಿಐ​ ತನಿಖೆಗೆ ಕೋರ್ಟ್ ಅಸ್ತು; ಬರೆದಿಟ್ಟುಕೊಳ್ಳಿ ಡಿಕೆ ಶಿವಕುಮಾರ್ ಮತ್ತೆ ಜೈಲಿಗೆ ಹೋಗ್ತಾರೆ: ಕೆ ಎಸ್‌ ಈಶ್ವರಪ್ಪ

ಶಿವಮೊಗ್ಗ, ಅಕ್ಟೋಬರ್‌ 19: ಅಕ್ರಮ ಅಸ್ತಿ ಗಳಿಕೆ ಹಿನ್ನಲೆ ಸಿಬಿಐ ತನಿಖೆಗೆ ಹೈಕೋರ್ಟ್‌ ಆದೇಶ ನೀಡಿದೆ. ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪ ನಡುವೆ ಆರೋಪ ಪ್ರತ್ಯಾರೋಪ ನಡೆಯುತ್ತಿದ್ದು, ಮಾಜಿ ಸಚಿವ ಕೆ ಎಸ್‌ ಈಶ್ವರಪ್ಪ ಅವರು ಮತ್ತೆ ಡಿ ಕೆ ಶಿವಕುಮಾರ್‌ ಜೈಲಿಗೆ ಹೋಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಹೌದು, ಈ ಕುರಿತು ಗುರುವಾರ ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿ, ಬರೆದಿಟ್ಟುಕೊಳ್ಳಿ ಇವತ್ತಲ್ಲ, ನಾಳೆ ಡಿಕೆ ಶಿವಕುಮಾರ್ ಮತ್ತೆ ಜೈಲಿಗೆ ಹೋಗಲಿದ್ದಾರೆ. ಕೇಸಿನಿಂದಲೇ ಖುಲಾಸೆಯಾದಂತೆ ಜೈಲಿನಿಂದ ಹೊರ ಬಂದಾಗ ವರ್ತಿಸಿದ್ದರು. ಡಿ ಕೆ ಶಿವಕುಮಾರ್‌ ಭಂಡತನದಿಂದ ವರ್ತಿಸುತ್ತಿದ್ದಾರೆ. ಉತ್ತರ ಕೊಡುವಾಗ ಸಹ ಗುಂಡಾಗಿರಿ ಮಾಡುತ್ತಾರೆ ಎಂದು ಡಿ ಕೆ ಶಿವಕುಮಾರ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

dk-shivakumar-will-go-to-jail

ನನ್ನ ಕೇಸು ಕೋರ್ಟಿನಲ್ಲಿದೆ ಎಂದು ಸೌಜನ್ಯದಿಂದ ಇರಲು ಬರುವುದಿಲ್ಲವಾ.? ಜೈಲಿನಿಂದ ಹೊರಬಂದಾಗ ವಿರೋಚಿತವಾಗಿ ಮೆರವಣಿಗೆ ನಡೆಸಿದ್ದರು. ಈಗ ಸಿಬಿಐ ಮತ್ತೆ ತನಿಖೆ ನಡೆಸಲಿದೆ.
ಡಿ.ಕೆ. ಶಿವಕುಮಾರ್ ಭಂಡತನದಿಂದ ವರ್ತಿಸುತ್ತಿದ್ದಾರೆ, ಅಕ್ರಮ ಹಣ ಸಿಕ್ಕಾಗ ತನಿಖೆ ಮಾಡುತ್ತೆವೆಂದು ಹೇಳಬೇಕು. ಆದರೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಏನು ಬೇಕಾದರೂ ಉತ್ತರ ಕೊಡುತ್ತಾರೆ ಎಂದು ಹೇಳಿದರು.

ಎಂ ಪಿ ರೇಣುಕಾಚಾರ್ಯನಿಗೆ ಈಗಾಗಲೇ ಪಕ್ಷದಿಂದ ನೋಟೀಸ್ ಕೊಟ್ಟಿದ್ದಾರೆ. ನೋಟೀಸ್ ಕೊಟ್ಟ ವ್ಯಕ್ತಿ ಬಗ್ಗೆ ನಾನು ಮಾತಾಡಲ್ಲ. ಆಯನೂರು ಮಂಜುನಾಥ್ ತಲೆಕೆಟ್ಟ ವ್ಯಕ್ತಿ ಅಂತವರ ಪ್ರಶ್ನೆಗಳಿಗೆ ಉತ್ತರ ನೀಡಲ್ಲ ಎಂದು ಹೇಳಿದರು.

dk-shivakumar-will-go-to-jail

ಪಾರಂಪರಿಕ ಕಟ್ಟಡಗಳಲ್ಲಿ ಆಯುಧ ಪೂಜೆ ಸಂದರ್ಭದಲ್ಲಿ ಅರಿಶಿಣ-ಕುಂಕುಮ ಬಳಸಬಾರದು ಎಂದ ರಾಜ್ಯ ಸರ್ಕಾರ ಸುತ್ತೋಲೆ ವಿಚಾರವಾಗಿ ಮಾತನಾಡಿ, ರಾಸಾಯನಿಕ ಪದಾರ್ಥ ಇರುವ ಅರಿಶಿಣ - ಕುಂಕುಮ ಬಳಸಬಾರದು ಎಂದು ಸುತ್ತೋಲೆ ಹೊರಡಿಸಿದೆ. ರಾಜ್ಯ ಸರ್ಕಾರ ಬಹಳ ಜಾಣತನದಿಂದ ಸುತ್ತೋಲೆ ಹೊರಡಿಸಿದೆ, ರಾಜ್ಯ ಸರ್ಕಾರ ಹಿಂದೂಗಳ ವಿರುದ್ಧ ಏನೇನು ಮಾಡಬೇಕೋ ಅವೆಲ್ಲವೂ ಮಾಡುತ್ತಿದೆ ಎಂದರು.

ಸರ್ಕಾರ ಬೀಳಿಸುವ ಬಿಜೆಪಿ ಪ್ರಯತ್ನ ಮಾಡುತ್ತಿದೆ ಎಂದು ಡಿ ಕೆ ಶಿವಕುಮಾರ್‌ ಹೇಳಿಕೆ ವಿಚಾರವಾಗಿ ಮಾತನಾಡಿ, ಯಾಕೆ ಕಾಂಗ್ರೆಸ್ ಸರ್ಕಾರ ಬೀಳಿಸಬಾರದು.?ಬಿಜೆಪಿ ಸರ್ಕಾರ ಯಾಕೆ ಬರಬಾರದು !? ಡಿಕೆ ಶಿವಕುಮಾರ್ ಬೆಳಗಾವಿಗೆ ಹೋದರೆ ಇಬ್ಬ ಶಾಸಕ ಇಲ್ಲ ಎಂದಾದರೆ ಏನು ಮೆಸೆಜ್ ಹೋಗುತ್ತೆ. ಕಾಂಗ್ರೆಸ್ ಸರ್ಕಾರ ಬೇಡ ಎಂದು ಅವರ ಶಾಸಕರೇ ತೀರ್ಮಾನ ಮಾಡಿದ್ದಾರೆ. ರಾಜ್ಯದ ಜನರು ಕಾಂಗ್ರೆಸ್ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಸತೀಶ್ ಜಾರಕಿಹೊಳಿ ಶಾಸಕರನ್ನು ಫಾರೀನ್ ಗಾದರೂ ಕರೆದುಕೊಂಡು ಹೋಗಲಿ, ಎಲ್ಲಿಗಾದರೂ ಕರೆದುಕೊಂಡು ಹೋಗಲಿ.

ಒಟ್ಟಾರೆ ಅವರೆಲ್ಲರೂ ಈ ಸರ್ಕಾರದ ವಿರುದ್ಧ ತಿರುಗಿ ಬಿದ್ದಿರುವುದು ನಿಜ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+