ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮೋತ್ಸವದಲ್ಲಿ ಡಿಕೆಶಿ ಮಾಡಬೇಕಿದ್ದ ಭಾಷಣ ಲೀಕ್?

|
Google Oneindia Kannada News

ಬೆಂಗಳೂರು, ಆಗಸ್ಟ್ 2: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75ನೇ ಹುಟ್ಟು ಹಬ್ಬದ ಪ್ರಯುಕ್ತ ದಾವಣಗೆರೆಯಲ್ಲಿ ಆಯೋಜಿಸಲಾಗುತ್ತಿರುವ ಅಮೃತ ಮಹೋತ್ಸವಕ್ಕೆ ಭರದ ಸಿದ್ದತೆ ನಡೆಯುತ್ತಿದೆ. ಸುಮಾರು 5-6 ಆರು ಲಕ್ಷ ಜನ ಇದರಲ್ಲಿ ಭಾಗವಹಿಸುವ ಅಂದಾಜಿದೆ.

ಅಮೃತ ಮಹೋತ್ಸವ ಸಮಿತಿ ಕನ್ನಡ ದೈನಿಕಗಳಲ್ಲಿ ಪುಟಗಟ್ಟಲೇ ಜಾಹೀರಾತು ನೀಡಿ ಸಿದ್ದರಾಮಯ್ಯನವರ ಸಾಧನೆಯನ್ನು ಪ್ರಕಟಿಸಿದೆ. ಈ ಕಾರ್ಯಕ್ರಮ ಕಾಂಗ್ರೆಸ್ ಪಕ್ಷಕ್ಕೆ ಹೊಸ ಚೈತನ್ಯ ತಂದು ಕೊಡಲಿದೆ ಎಂದು ಕಾರ್ಯಕ್ರಮದ ಉಸ್ತುವಾರಿಯಲ್ಲೊಬ್ಬರಾದ ಎಸ್. ಎಸ್. ಮಲ್ಲಿಕಾರ್ಜುನ್ ವಿಶ್ವಾಸದ ಮಾತನ್ನಾಡಿದ್ದಾರೆ.

ತಮಿಳುನಾಡಿನಲ್ಲಿ ಸಿದ್ದರಾಮಯ್ಯ ಅಬ್ಬರ ಮತ್ತು ರಾಜ್ಯಕ್ಕೆ ನೀಡಿದ ಸಂದೇಶತಮಿಳುನಾಡಿನಲ್ಲಿ ಸಿದ್ದರಾಮಯ್ಯ ಅಬ್ಬರ ಮತ್ತು ರಾಜ್ಯಕ್ಕೆ ನೀಡಿದ ಸಂದೇಶ

ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಹುಲ್ ಗಾಂಧಿ ಇಂದು (ಆ 2) ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಇವರ ಜೊತೆಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ. ಸಿ. ವೇಣುಗೋಪಾಲ್, ರಣದೀಪ್ ಸುರ್ಜೇವಾಲ ಕೂಡಾ ಸಾಥ್ ನೀಡಲಿದ್ದಾರೆ.

ಇವೆಲ್ಲದರ ನಡುವೆ ಕಾರ್ಯಕ್ರಮದಲ್ಲಿ ಭಾಗವಹಿಸುವ ನಾಯಕರುಗಳ ಭಾಷಣದ ರಿಹರ್ಸಲ್ ವಾಟ್ಸಾಪ್ ನಲ್ಲಿ ಲೀಕ್ ಆಗಿದೆ ಎಂದು ಕೆಲವೊಂದು ಮಾಧ್ಯಮಗಳು ವರದಿ ಮಾಡಿವೆ. ಅದರಲ್ಲಿ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರ ಭಾಷಣವೂ ಇದೆ.

 ವೇದಿಕೆಯಲ್ಲಿ ಸುಮಾರು ಎಂಬತ್ತರಿಂದ ನೂರು ಗಣ್ಯರು ಆಸೀನರಾಗಲು ವ್ಯವಸ್ಥೆ

ವೇದಿಕೆಯಲ್ಲಿ ಸುಮಾರು ಎಂಬತ್ತರಿಂದ ನೂರು ಗಣ್ಯರು ಆಸೀನರಾಗಲು ವ್ಯವಸ್ಥೆ

ಸಭಾ ವೇದಿಕೆಯಲ್ಲಿ ಸುಮಾರು ಎಂಬತ್ತರಿಂದ ನೂರು ಗಣ್ಯರು ಆಸೀನರಾಗಲು ವ್ಯವಸ್ಥೆಯನ್ನು ಮಾಡಲಾಗಿದೆ. ಸುಮಾರು ಎರಡೂವರೆ ತಾಸು ನಡೆಯುವ ಕಾರ್ಯಕ್ರಮ ಇದಾಗಿದೆ ಮತ್ತು ಹಲವು ನಾಯಕರಿಗೆ ಕಾರ್ಯಕ್ರಮದಲ್ಲಿ ಭಾಷಣವನ್ನು ಮಾಡಲು ಅವಕಾಶವನ್ನು ನೀಡಲಾಗಿದೆ. ಅದರಂತೆಯೇ, ಕೆಲವೊಂದು ನಾಯಕರ ಭಾಷಣದ ರಿಹರ್ಸಲ್ ಅನ್ನು ಕೆಪಿಸಿಸಿ ಮಾಧ್ಯಮ ವಿಭಾಗ ತಮ್ಮ ವಾಟ್ಸಾಪ್ ಗ್ರೂಪ್ ನಲ್ಲಿ ಶೇರ್ ಮಾಡಿಕೊಂಡು ನಂತರ ಡಿಲೀಟ್ ಮಾಡಿದೆ. ಅಷ್ಟರೊಳಗೆ, ಕೆಪಿಸಿಸಿ ಅಧ್ಯಕ್ಷರ ರಿಹರ್ಸಲ್ ಪ್ರತಿ ಲೀಕ್ ಆಗಿದೆ.

'ಸಿದ್ದರಾಮೋತ್ಸವ' ಸಿದ್ದರಾಮಯ್ಯಗೆ ರಾಜಕೀಯ ಬೀಳ್ಕೊಡುಗೆ!'ಸಿದ್ದರಾಮೋತ್ಸವ' ಸಿದ್ದರಾಮಯ್ಯಗೆ ರಾಜಕೀಯ ಬೀಳ್ಕೊಡುಗೆ!

 ಕೆಪಿಸಿಸಿ ಅಧ್ಯಕ್ಷರು ಪರೋಕ್ಷವಾಗಿ ಸಿದ್ದರಾಮಯ್ಯನವರಿಗೆ ಟಾಂಗ್

ಕೆಪಿಸಿಸಿ ಅಧ್ಯಕ್ಷರು ಪರೋಕ್ಷವಾಗಿ ಸಿದ್ದರಾಮಯ್ಯನವರಿಗೆ ಟಾಂಗ್

ಕೆಪಿಸಿಸಿ ಅಧ್ಯಕ್ಷರು ಪರೋಕ್ಷವಾಗಿ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಲು ನಿರ್ಧರಿಸಿದ್ದಾರೆ ಎನ್ನುವುದು ಅವರ ಲೀಕ್ ಆದ ಭಾಷಣದ ಪ್ರತಿಯನ್ನು ಅವಲೋಕಿಸಿದರೆ ತಿಳಿಯುತ್ತದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಹಿಂದೆ, ಹಲವು ಬಾರಿ ಹೇಳಿದಂತೆ ಡಿ. ಕೆ. ಶಿವಕುಮಾರ್ ಮೊದಲು ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸೋಣ ಎನ್ನುವ ಮಾತು ಲೀಕ್ ಆದ ಪ್ರತಿಯಲ್ಲಿದೆ ಎಂದು ಹೇಳಲಾಗುತ್ತಿದೆ.

 ಸಿದ್ದರಾಮಯ್ಯನವರ ಅಮೃತ ಮಹೋತ್ಸವ ಕಾರ್ಯಕ್ರಮದ ವೇದಿಕೆ

ಸಿದ್ದರಾಮಯ್ಯನವರ ಅಮೃತ ಮಹೋತ್ಸವ ಕಾರ್ಯಕ್ರಮದ ವೇದಿಕೆ

ಸಿದ್ದರಾಮಯ್ಯನವರ ಅಮೃತ ಮಹೋತ್ಸವ ಕಾರ್ಯಕ್ರಮದ ವೇದಿಕೆಯಲ್ಲೇ ಮುಂದಿನ ಸಿಎಂ ಯಾರು ಎನ್ನುವ ಪ್ರಶ್ನೆಗೆ ಬ್ರೇಕ್ ಹಾಕಲು ಡಿ. ಕೆ. ಶಿವಕುಮಾರ್ ಮುಂದಾಗಿದ್ದಾರಾ? ಎನ್ನುವ ಪ್ರಶ್ನೆ ಸೋರಿಕೆಯಾದ ರಿಹರ್ಸಲ್ ಪ್ರತಿಯನ್ನು ಅವಲೋಕಿಸಿದಾಗ ಎದ್ದೇಳುವ ಪ್ರಶ್ನೆ. ಪಕ್ಷವನ್ನು ಮೊದಲು ಅಧಿಕಾರಕ್ಕೆ ಪ್ರಯತ್ನಿಸೋಣ, ಆ ನಂತರ ಯಾರು ಯಾರಿಗೆ ಯಾವಯಾವ ಸ್ಥಾನಮಾನ ಸಿಗಬೇಕೋ ಅದನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ ಎನ್ನುವ ಮಾತು ಭಾಷಣದಲ್ಲಿತ್ತು ಎಂದು ಹೇಳಲಾಗುತ್ತಿದೆ.

 ಉತ್ತಮ ನಾಯಕನಾದವನು ಇನ್ನಷ್ಟು ನಾಯಕರನ್ನು ಸೃಷ್ಟಿ ಮಾಡುತ್ತಾನೆ

ಉತ್ತಮ ನಾಯಕನಾದವನು ಇನ್ನಷ್ಟು ನಾಯಕರನ್ನು ಸೃಷ್ಟಿ ಮಾಡುತ್ತಾನೆ

ಉತ್ತಮ ನಾಯಕನಾದವನು ಇನ್ನಷ್ಟು ನಾಯಕರನ್ನು ಸೃಷ್ಟಿ ಮಾಡುತ್ತಾನೆಯೇ ಹೊರತು ಹಿಂಬಾಲಕರನ್ನಲ್ಲ ಎನ್ನುವ ಹಿಂದಿನ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರ ಮಾತನ್ನು ತಮ್ಮ ಭಾಷಣದಲ್ಲಿ ಡಿ. ಕೆ. ಶಿವಕುಮಾರ್ ಉಲ್ಲೇಖಿಸುತ್ತಾರೆ. ಆ ಮೂಲಕ, ವೇದಿಕೆಯಲ್ಲಿ ಸಿದ್ದರಾಮಯ್ಯನವರಿಗೆ ಟಾಂಗ್ ಕೊಡುವ ಉದ್ದೇಶವನ್ನು ಡಿಕೆಶಿ ಹೊಂದಿದ್ದಾರಾ? ಎನ್ನುವ ಮಾತು ಈಗ ಚರ್ಚೆಯ ವಿಷಯವಾಗಿದೆ.

Recommended Video

West Indies ವಿರುದ್ಧದ 2ನೇ ಟಿ20 ಪಂದ್ಯ ತಡವಾಗಿ ಆರಂಭವಾಗಲು ಇದೇ ಕಾರಣ | Sports | OneIndia Kannada

English summary
KPCC president D. K. Shivakumar speech In Siddaramotsava leaked in Whatsapp Group. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X