DK Shivakumar: ಬಿಜೆಪಿ ಸರ್ಕಾರ ಯಾವುದೇ ಕರೆಂಟ್ ಬಿಲ್ ಹೆಚ್ಚಳ ಮಾಡಿಲ್ಲ ಎಂದ ಬೊಮ್ಮಾಯಿಗೆ ತಿರುಗೇಟು ಕೊಟ್ಟ ಡಿ ಕೆ ಶಿವಕುಮಾರ್

ಬೆಂಗಳೂರು, ಜೂನ್‌ 13: ಬಿಜೆಪಿ ಸರ್ಕಾರ ಯಾವುದೇ ಕರೆಂಟ್ ಬಿಲ್ ಹೆಚ್ಚಳ ಮಾಡಿಲ್ಲ ಎಂಬ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಂಗಳವಾರ ಬೆಂಗಳೂರು ರೌಂಡ್ಸ್ ಬಳಿಕ ಕೆ.ಆರ್ ಪುರಂನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಅವರು ದುಃಖದಲ್ಲಿ ಮಾತನಾಡಿದ್ದಾರೆ. ಅದಕ್ಕೆ ನಾನ್ಯಾಕೆ ಬೇಸರ ಮಾಡಿಕೊಳ್ಳಲಿ. ರೇಟು, ದಾಖಲೆಗಳು ಎಲ್ಲವೂ ನಮ್ಮ ಬಳಿ ಇದೆ. ನಾವು ಎಲ್ಲ ದಾಖಲೆಗಳನ್ನು ಕೊಡುತ್ತೇವೆ ಎಂದು ಡಿ ಕೆ ಶಿವಕುಮಾರ್‌ ತಿರುಗೇಟು ನೀಡಿದರು.

 DK Shivakumar Slams Bommais Statement: BJP Govt Didnt hike electricity Price in Karnataka

ನಾನು ಇಂದು ಬಿಡಿಎ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಅವರಿಂದ ಮಾಹಿತಿ ಪಡೆದೆ. ಪಿ ಡಬ್ಲ್ಯೂ ಡಿ, ರಾಷ್ಟ್ರೀಯ ಹೆದ್ದಾರಿ, ಬಿಎಂ ಆರ್ ಸಿ ಎಲ್ ಸೇರಿದಂತೆ ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಒಂದು ಕಡೆಯಿಂದ ಪರಿಶೀಲನೆ ಮಾಡುತ್ತಿದ್ದೇನೆ. ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಹೆಬ್ಬಾಳದಿಂದ ಪರಿಶೀಲನೆ ಆರಂಭಿಸಿದ್ದೇವೆ.

ಇಂದು ಅಧಿಕಾರಿಗಳು ಕೆಲವು ಪ್ರಸ್ತಾವನೆ ಸಲ್ಲಿಸಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜೊತೆ ಚರ್ಚೆ ಮಾಡುತ್ತೇನೆ. ಇನ್ನು ಬಿಡಿಎ ಹಾಗೂ ಪಾಲಿಕೆ ಕಡೆಯಿಂದಲೂ ಕೆಲವು ಪ್ರಸ್ತಾವನೆಗಳು ಬಂದಿವೆ. ಎಲ್ಲೂ ಜನರಿಂದ ಆಸ್ತಿ ವಶಪಡೆಯದೆ ಎಲ್ಲಿ ಎಷ್ಟು ಕೆಲಸ ಮಾಡಬಹುದು ಎಂದು ಪರಿಶೀಲನೆ ಮಾಡಲಾಗುತ್ತಿದೆ.

ಹೆಬ್ಬಾಳ ಹಾಗೂ ಕೆ.ಆರ್ ಪುರಂ ಪ್ರಮುಖ ಕೇಂದ್ರಗಳಾಗಿದ್ದು ಎಲ್ಲೆಲ್ಲಿ ಸುರಂಗ ಮಾರ್ಗ ಮಾಡಲು ಸಾಧ್ಯ? ಎಂದು ಹೇಳಿದ್ದೇವೆ. ಅಲ್ಪದೂರದ ಫ್ಲೈ ಓವರ್ ಜೊತೆಗೆ ಮುಂದಿನ 25 ವರ್ಷಗಳ ದೂರದೃಷ್ಟಿಯಿಂದ ಬಹುದೂರದ ಫ್ಲೈಓವರ್ ಕುರಿತು ಚರ್ಚೆ ಮಾಡಲಾಗಿದೆ.

ಈ ವಿಚಾರವಾಗಿ ಎರಡು ಸಭೆ ನಡೆಸುತ್ತೇನೆ. ಬೆಂಗಳೂರಿನ ನಾಗರೀಕರ ಜೊತೆ ಒಂದು ಸಭೆ, ಬೆಂಗಳೂರಿನ ಬಗ್ಗೆ ಕಾಳಜಿ ಹಾಗು ದೂರದೃಷ್ಟಿ ಹೊಂದಿರುವವರ ತಜ್ಞರ ಜೊತೆ ಒಂದು ಸಭೆ ಮಾಡಿ ಸಮಾಲೋಚನೆ ನಡೆಸುತ್ತೇನೆ. ಮುಂದಿನ ಹತ್ತು ಹದಿನೈದು ದಿನಗಳಲ್ಲಿ ತೀರ್ಮಾನ ಮಾಡುತ್ತೇವೆ.

ಇನ್ನು ಕಾಲುವೆಗಳ ಹೂಳು ಎತ್ತಿದ ನಂತರ ಆ ಹೂಳನ್ನು ಎಲ್ಲಿ ಹಾಕಲಾಗುತ್ತಿದೆ ಎಂಬುದರ ಬಗ್ಗೆ ಮಾಹಿತಿ ಕೇಳಿದ್ದೇನೇ. ಈ ಬಗ್ಗೆಯೂ ಪರಿಶೀಲನೆ ನಡೆಸುತ್ತೇವೆ. ಹೆಬ್ಬಾಳ ಮೇಲ್ಸೇತುವೆ ಅಗಲೀಕರಣಕ್ಕೆ ಅಡೆತಡೆ ಹಾಗೂ ಬಿಎಂ ಆರ್ ಸಿ ಎಲ್ ವಿರೋಧ ಇದೆಯೇ ಎಂಬ ಪ್ರಶ್ನೆಗೆ, "ಯಾರ ವಿರೋಧ ಇಲ್ಲ. ನಾನು ಎಲ್ಲಾ ಸಂಸ್ಥೆಗಳ ಅಧಿಕಾರಿಗಳ ಜತೆಗೆ ಪರಿಶೀಲನೆ ಮಾಡುತ್ತಿದ್ದೇವೆ. ಗುಣಮಟ್ಟದ ಕೆಲಸ ಆಗಬೇಕು ಅದೇ ನಮ್ಮ ಗುರಿ ಎಂದು ತಿಳಿಸಿದರು.

ಹೆಬ್ಬಾಳ ಮೇಲ್ಸೇತುವೆ ಮರು ವಿನ್ಯಾಸಕ್ಕೆ ಬಿಡಿಎ ಮಾಜಿ ಅಧ್ಯಕ್ಷ ವಿಶ್ವನಾಥ್ ಅವರು ಪೂಜೆ ಮಾಡಿದ್ದು, ಅದೇ ವಿನ್ಯಾಸ ಮುಂದುವರಿಯುತ್ತದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಅದರ ಬಗ್ಗೆ ಪರಿಶೀಲನೆ ಮಾಡುತ್ತೇವೆ. ತಾಂತ್ರಿಕವಾಗಿ, ಅನುಕೂಲಕರವಾಗಿ, ಉತ್ತಮವಾಗಿ ಇದ್ದರೆ ನಾವು ಅದನ್ನು ಮುಂದುವರಿಸುತ್ತೇವೆ. ನಾವು ಎಲ್ಲರ ಸಲಹೆ ಕೇಳುತ್ತೇವೆ ಎಂದು ತಿಳಿಸಿದರು.

ಹೆಬ್ಬಾಳದಲ್ಲಿ ಕಾಮಗಾರಿ ಆರಂಭವಾದರೆ ಟ್ರಾಫಿಕ್ ಸಮಸ್ಯೆ ಹೆಚ್ಚಲಿದೆ ಅಲ್ಲವೇ ಎಂದು ಮಾಧ್ಯಮಗಳ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಮೆಟ್ರೋ ಕಾಮಗಾರಿ ಕೇವಲ ರಾತ್ರಿ ವೇಳೆ ಕೆಲಸ ಮಾಡಲಾಗುತ್ತಿದೆ. ಕಾಮಗಾರಿಗಳು ಬೇಗ ನಡೆಯುವಂತೆ ಅನುವು ಮಾಡಿಕೊಡಲು ಪೊಲೀಸ್ ಅಧಿಕಾರಿಗಳ ಜತೆಗೂ ಚರ್ಚೆ ಮಾಡಲಾಗುತ್ತಿದೆ. ಒಂದು ನಿಮಿಷವೂ ಫ್ಲೈಓವರ್ ಮೇಲೆ ವಾಹನ ಸಂಚಾರ ನಿಲ್ಲಿಸಲ್ಲ. ಹೆಬ್ಬಾಳ ಫ್ಲೈಓವರ್ ಮೇಲೆ, ಕೆಳಗೆ ಟ್ರಾಫಿಕ್ ಜಾಮ್ ಮಾಡದಂತೆ ಕಾಮಗಾರಿ ಮಾಡ್ತೇವೆ. ಮೆಟ್ರೋ ಕಾಮಗಾರಿ ಆರಂಭವಾದ್ರೂ ಟ್ರಾಫಿಕ್ ಜಾಮ್ ಆಗದಂತೆ ನೋಡಿಕೊಳ್ತೇವೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+