Karnataka CM: ಕಾಂಗ್ರೆಸ್‌ನಲ್ಲಿ ಇರೋವರ್ಗೂ ನೀವು ಸಿಎಂ ಆಗಲ್ಲ: ಡಿಕೆಶಿ ಬಗ್ಗೆ ಬಿಎಸ್‌ವೈ ಆಡಿದ್ದ ಮಾತು ವೈರಲ್

ಕರ್ನಾಟಕ ಸಿಎಂ ಆಯ್ಕೆ ಪ್ರಹಸನಕ್ಕೆ ತೆರೆ ಬಿದ್ದಿದೆ, ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲು ಸಿದ್ದರಾಮಯ್ಯ ಸಿದ್ದವಾಗಿದ್ದಾರೆ. ಮೇ 20 ರಂದು ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ಮಾಧ್ಯಮ ಗೋಷ್ಠಿಯಲ್ಲಿ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.

ಸಿಎಂ ಪಟ್ಟಕ್ಕಾಗಿ ಬಾರಿ ಕಸರತ್ತು ಮಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಈ ಬಾರಿ ಕೂಡ ಹಿನ್ನಡೆಯಾಗಿದೆ. ಈ ಬೆನ್ನಲ್ಲೇ ಡಿಕೆ ಶಿವಕುಮಾರ್ ಬಗ್ಗೆ ಬಿಎಸ್ ಯಡಿಯೂರಪ್ಪ ಅವರು ಹೇಳಿದ್ದ ಮಾತು ಭಾರಿ ವೈರಲ್ ಆಗಿದೆ. ವಿಧಾನಸಭೆ ಕಲಾಪದಲ್ಲಿ ಮಾತನಾಡುವ ಸಂದರ್ಭದಲ್ಲಿ ಬಿಎಸ್‌ ಯಡಿಯೂರಪ್ಪ ಅವರು ನೀವು ಕಾಂಗ್ರೆಸ್‌ನಲ್ಲಿದ್ದರೆ ಸಿಎಂ ಆಗಬಹುದು ಎಂದುಕೊಂಡಿದ್ದಿರಾ ಎಂದು ಪ್ರಶ್ನಿಸಿದ್ದರು. ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

DK Shivakumar Never Become Karnataka CM

ಕಲಾಪದ ಸಂದರ್ಭದಲ್ಲಿ ಬಿಎಸ್ ಯಡಿಯೂರಪ್ಪ "ಮುಂದಿನ ಮುಖ್ಯಮಂತ್ರಿ ಆಗಬೇಕು ಅಂತ ಕನಸು ಕಾಣುತ್ತಿರುವ ನಿಮ್ಮನ್ನು ಖಳನಾಯಕ ಅಂತಿನಾ ನಾನು, ಅಲ್ಲಿದ್ರೆ ಮುಖ್ಯಮಂತ್ರಿ ಆಗ್ತೀರಾ? ನಂಗ್ ಅರ್ಥ ಆಗೋದಿಲ್ಲ" ಎಂದು ಸೂಚ್ಯವಾಗಿ ನೀವು ಕಾಂಗ್ರೆಸ್‌ನಲ್ಲಿದ್ದರೆ ಸಿಎಂ ಆಗಲ್ಲ ಎಂದು ಹೇಳಿದ್ದರು. ಇದಕ್ಕೆ ಡಿಕೆಶಿ ನಗುತ್ತಲೇ ಯಾವ ಉತ್ತರವೂ ಕೊಡದೇ ಸುಮ್ಮನಾಗಿದ್ದರು.

ಹಠ ಮಾಡಿ ಗೆದ್ದ ಸಿದ್ದು, ಒತ್ತಡಕ್ಕೆ ಮಣಿದ ಡಿಕೆಶಿ

ಚುನಾವಣೆಗೆ ಮುನ್ನ ಒಗ್ಗಟ್ಟು ಪ್ರದರ್ಶನ ಮಾಡಿದ್ದ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಒಟ್ಟಿಗೆ ಪ್ರಚಾರ ಮಾಡಿದ್ದರು. ಇಬ್ಬರೂ ಕೂಡ ಅನ್ಯೋನ್ಯವಾಗಿಯೇ ಇದ್ದರು, ಇಬ್ಬರು ಕೂಡ ಕುಶಲೋಪರಿ ವಿಚಾರಿಸುವ ವಿಡಿಯೋವನ್ನು ಕೆಪಿಸಿಸಿ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿತ್ತು, ಅದು ಸಾಕಷ್ಟು ಮೆಚ್ಚುಗೆ ಕೂಡ ಗಳಿಸಿಕೊಂಡಿತ್ತು.

ಚುನಾವಣೆ ಫಲಿತಾಂಶ ಬರುತ್ತಿದ್ದಂತೆ, ಜೋಡೆತ್ತುಗಳ ರೀತಿ ಇದ್ದ ಡಿಕೆಶಿ ಮತ್ತು ಸಿದ್ದರಾಮಯ್ಯ ಸಿಎಂ ಖುರ್ಚಿಗಾಗಿ ತೀವ್ರ ಪೈಪೋಟಿ ನಡೆಸಿದರು. ಭಾನುವಾರ ಶುರುವಾದ ಸಿಎಂ ಆಯ್ಕೆ ನಾಟಕಕ್ಕೆ ಗುರುವಾರ ತೆರೆಬಿದ್ದಿದೆ. ಸೋಮವಾರವೇ ದೆಹಲಿಗೆ ತೆರಳಿದ್ದ ಸಿದ್ದು ಸಿಎಂ ಕುರ್ಚಿ ತನಗೇ ನೀಡಬೇಕು ಎಂದು ಒತ್ತಡ ಹಾಕಿದ್ದರು. ಮಂಗಳವಾರ ದೆಹಲಿಗೆ ಹೋಗಿದ್ದ ಡಿಕೆಶಿ ಕೂಡ ಸಿಎಂ ಸ್ಥಾನಕ್ಕೆ ಭಾರಿ ಲಾಬಿ ಮಾಡಿದ್ದರು.

ಸಿದ್ದರಾಮಯ್ಯ ಅವರ ಒತ್ತಡಕ್ಕೆ ಹೈಕಮಾಂಡ್ ಮಣಿದಿದ್ದು, ಡಿಕೆಶಿ ಮನವೊಲಿಸುವಲ್ಲಿ ಸೋನಿಯಾ ಗಾಂಧಿ ಯಶಸ್ವಿಯಾಗಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಲಿದ್ದು, ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿಯಾಗಲಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಕೂಡ ಅವರು ಮುಂದುವರೆಯಲಿದ್ದು, ಯಾವ ಖಾತೆ ಎನ್ನುವುದನ್ನು ಅವರೇ ನಿರ್ಧರಿಸುವಂತೆ ಕೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+