ಯಡಿಯೂರಪ್ಪ ಆತ್ಮಸಾಕ್ಷಿಗೆ ಅಭಿನಂದನೆ ಸಲ್ಲಿಸಿದ ಡಿ.ಕೆ.ಶಿವಕುಮಾರ್
ಬೆಂಗಳೂರು, ಫೆಬ್ರವರಿ 10 : 'ಪ್ರತಿಯೊಬ್ಭರಿಗೂ ಆತ್ಮಸಾಕ್ಷಿ ಇರುತ್ತದೆ. ಯಡಿಯೂರಪ್ಪನವರ ಆತ್ಮಸಾಕ್ಷಿಗೆ ಅಭಿನಂದನೆ ಸಲ್ಲಿಸುತ್ತೇನೆ' ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಭಾನುವಾರ ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, 'ಅವರು ಹೇಳಿದ ಮೇಲೆ ಮಿಮಿಕ್ರಿ ಪ್ರಶ್ನೆ ಬರುವುದಿಲ್ಲ. ಕಳ್ಳತನ ಸೇರಿ ಐದು ವಿಚಾರವನ್ನು ಯಾರು ಮುಚ್ಚಿಡುವುದಕ್ಕೆ ಆಗುವುದಿಲ್ಲ. ಸತ್ಯ ಯಾವತ್ತಿದ್ದರೂ ಹೊರಗಡೆ ಬರುತ್ತೆ' ಎಂದರು.
'ಯಡಿಯೂರಪ್ಪನವರ ಆತ್ಮಸಾಕ್ಷಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇನ್ನು ಮಿಕ್ಕಿದ ವಿಚಾರವನ್ನು ಸೋಮವಾರ ಸ್ಪೀಕರ್ ನೋಡಿಕೊಳ್ಳುತ್ತಾರೆ. ಕೆಲವರ ವಾಯ್ಸ್ ಅನ್ನು ಯಾರು ಮಿಮಿಕ್ರಿ ಮಾಡಲು ಸಾಧ್ಯವಿಲ್ಲ' ಎಂದು ತಿಳಿಸಿದರು.

'ಆಪರೇಷನ್ ಕಮಲದ ಆಡಿಯೋ ಬಗ್ಗೆ ಮುಖ್ಯಮಂತ್ರಿಗಳು ಏನು ಹೇಳಬೇಕೋ ಅದನ್ನು ಹೇಳಿದ್ದಾರೆ. ಆ ಹುಡುಗ ಸಹ ಏನು ಹೇಳಬೇಕೋ ಅದನ್ನ ಹೇಳಿದ್ದಾರೆ. ಯಡಿಯೂರಪ್ಪ ಅವರು ಸಹ ಏನು ಬೇಕೋ ಅದನ್ನ ಹೇಳಿದ್ದಾರೆ' ಎಂದರು.
ಆಪರೇಷನ್ ಕಮಲದ ಆಡಿಯೋ ಬಗ್ಗೆ ಮಾತನಾಡಿದ್ದ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, 'ಶಾಸಕ ನಾಗನಗೌಡ ಪುತ್ರ ಶರಣಗೌಡರ ಜೊತೆ ನಾನು ಮಾತನಾಡಿದ್ದು ನಿಜ. ಆದರೆ, ಕೆಲ ಸತ್ಯಗಳನ್ನು ಮರೆ ಮಾಚಿದ್ದಾರೆ' ಎಂದು ಹೇಳಿದ್ದರು.
'ಕುಮಾರಸ್ವಾಮಿ ಥರ್ಡ್ ಗ್ರೇಡ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ. ಸೋಮವಾರ ಮುಖ್ಯಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬಂಡವಾಳ ಬಿಚ್ಚಿಡುತ್ತೇನೆ' ಎಂದು ತಿಳಿಸಿದ್ದರು.











Click it and Unblock the Notifications