CM Prediction: ಡಿ.ಕೆ.ಶಿವಕುಮಾರ್‌ ಸಿಎಂ ಆಗುವ ಬಗ್ಗೆ ದೈವ ಭವಿಷ್ಯ, ಹೇಳಿದ್ದೇನು?

ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರದ ಚರ್ಚೆಗಳು ಜೋರಾಗಿವೆ. ಇದೇ ವರ್ಷವೇ ಮುಖ್ಯಮಂತ್ರಿ ಬದಲಾಗುತ್ತಾರೆ, ಡಿಕೆ ಶಿವಕುಮಾರ್‌ ಅವರು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದೆಲ್ಲ ಹೇಳಲಾಗುತ್ತಿದೆ. ಬಿಜೆಪಿ ನಾಯಕರು ಕೂಡ ಸಿಎಂ ಬದಲಾವಣೆಯ ಭವಿಷ್ಯ ನುಡಿದಿದ್ದಾರೆ. ಇದೀಗ ದೈವ ಕೂಡ ಸಿಎಂ ಬದಲಾಗುವ ಬಗ್ಗೆ ಅಚ್ಚರಿ ಭವಿಷ್ಯ ನುಡಿದಿದೆ.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಸಿದ್ದೇಶ್ವರ ಸನ್ನಿಧಿಯಲ್ಲಿ ತುಳುನಾಡ ದೈವ ಭವಿಷ್ಯ ರಾಜ್ಯ ರಾಜಕಾರಣದ ಬಗ್ಗೆ ಕುತೂಹಲಕಾರಿ ಭವಿಷ್ಯ ನುಡಿದಿದೆ. ಡಿ.ಕೆ.ಶಿವಕುಮಾರ್‌ ಅವರು ಯಾವಾಗ ಮುಖ್ಯಮಂತ್ರಿ ಆಗ್ತಾರೆ? ಎಂದು ಅವರು ಬೆಂಬಲಿಗರು ಪ್ರಶ್ನೆ ಮುಂದಿಟ್ಟಿದ್ದಾರೆ. "ಅವರು ಮಾಡಿದಂತಹ ಪ್ರಯತ್ನ ಇಲ್ಲಿವರೆಗೆ ಕುಂಠಿತವಾಗಿದ್ದರೂ ಸಹ ಮುಂದಿನ ಪ್ರಯತ್ನಗಳಿಗೆ ಫಲ ಸಿಗುವ ಅನುಗ್ರಹವಿದೆ" ಎಂದು ಭವಿಷ್ಯವಾಣಿ ನುಡಿದಿದೆ.

DK Shivakumar CM Prediction Divine Forecast On Karnataka Leadership Change

ಅವರು ಸಿಎಂ ಸ್ಥಾನದಲ್ಲಿ ಕೂತಾಗ ಈ ಸನ್ನಿಧಾನಕ್ಕೆ ಏನೆಲ್ಲ ಹೇಳಿದ್ದಾರೋ ಅದನ್ನ ನಡೆದುಕೊಳ್ಳಲು ಹೇಳಿ. ಆದಷ್ಟು ಬೇಗನೆ ಅವರು ಅಧಿಕಾರದಲ್ಲಿ ಕೂರುತ್ತಾರೆ ಎಂದು ದೈವ ಭವಿಷ್ಯ ನುಡಿದಿರುವ ವಿಡಿಯೋ ವೈರಲ್‌ ಆಗಿದೆ.

ಯಾವ ಕ್ರಾಂತಿ ಇಲ್ಲ ಎಂದಿದ್ದ ಡಿಕೆಶಿ

ಇತ್ತೀಚೆಗೆ ದೆಹಲಿಯಲ್ಲಿ ಮಾತನಾಡಿದ್ದ ಡಿ.ಕೆ.ಶಿವಕುಮಾರ್, ಸಂಪುಟ ವಿಸ್ತರಣೆ ಹಾಗೂ ನಾಯಕತ್ವ ಬದಲಾವಣೆ ವಿಚಾರದ ಚರ್ಚೆ ಮಾಧ್ಯಮಗಳದ್ದು. ನಾಯಕತ್ವ ಬದಲಾವಣೆಯ ಬಗ್ಗೆ ನಾನು ಏನಾದರೂ ಹೇಳಿದ್ದೀನಾ? ಅಥವಾ ಸಿಎಂ ಏನಾದ್ರೂ ಹೇಳಿದ್ದಾರಾ? ಪಕ್ಷ ಏನು ಹೇಳುತ್ತದೆಯೋ ಅದನ್ನು ಕೇಳಿಕೊಂಡು ಹೋಗುತ್ತೇವೆ. ಸಿಎಂ ಐದು ವರ್ಷ ಇರಬೇಕು ಅಂದ್ರೆ ಐದೂ ವರ್ಷ ಇರ್ತಾರೆ. ಹತ್ತು ವರ್ಷ ಇರಬೇಕು ಅಂದ್ರೆ ಹತ್ತು ವರ್ಷವೂ ಇರ್ತಾರೆ. 15 ವರ್ಷ ಇರ್ಬೇಕು ಅಂದ್ರೆ 15 ವರ್ಷವೂ ಇರ್ತಾರೆ. ನಾನು ಪಕ್ಷದ ಶಿಸ್ತಿನ ಸಿಪಾಯಿ, ಪಕ್ಷ ಹಾಕಿದ ರೇಖೆಯನ್ನ ಎಂದಿಗೂ ದಾಟಲ್ಲ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದರು.

2028ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮತ್ತೆ ಬಂದಾಗ ಮಾತ್ರ ಕ್ರಾಂತಿ. ನವೆಂಬರ್ ಅಥವಾ ಡಿಸೆಂಬರ್, ಜನವರಿ, ಫೆಬ್ರವರಿಯಲ್ಲಿ ಯಾವುದೇ ಕ್ರಾಂತಿ ಆಗುವುದಿಲ್ಲ. ಕ್ರಾಂತಿ ಆಗುವುದು ಏನಿದ್ದರೂ 2028ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮರಳಿದಾಗ. ನಾನು ಹಾಗೂ ಸಿಎಂ ಸಿದ್ದರಾಮಯ್ಯ ಇಬ್ಬರೂ ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದು ಡಿಕೆಶಿ ಹೇಳಿದ್ದರು. ನಾನು ಹೈಕಮಾಂಡ್‌ ಅನ್ನು ಭೇಟಿಯಾಗುತ್ತಿಲ್ಲ. ಸಚಿವ ಸಂಪುಟ ಪುನರ್‌ರಚನೆ ಬಗ್ಗೆಯೂ ನನ್ನೊಂದಿಗೆ ಯಾವುದೇ ಚರ್ಚೆ ಆಗಿಲ್ಲ. ಇದು ಸಿಎಂ ಅವರ ವಿಶೇಷ ಹಕ್ಕು. ಅವರು ಅದನ್ನು ಮಾಡಲಿ ಎಂದಿದ್ದರು.

ಅಲ್ಲದೆ ಪತ್ರಿಕೆಯೊಂದರಲ್ಲಿ ಈ ತಿಂಗಳಲ್ಲೇ ಪ್ರಮಾಣವಚನ ಸ್ವೀಕಾರ ಎಂದು ಬರೆದಿರುವ ಬಗ್ಗೆ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯಿಸಿದ್ದಾರೆ. "ಯಾರೋ ಸುಮ್ಮನೆ ಅದನ್ನು ಹಾಗೆ ಬರೆದಿದ್ದು, ಯಾವುದೇ ಕ್ರಾಂತಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+