• search

ಚುಟುಕು : ಗಣಿ ಸರ್ವೆ ಕಾರ್ಯ ಮತ್ತು ಇತರ ಜಿಲ್ಲಾಸುದ್ದಿಗಳು

Posted By:
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬಳ್ಳಾರಿ. ಮಾ.10 : ಬಳ್ಳಾರಿಯಲ್ಲಿ ಸರ್ವೆ ಆಫ್ ಇಂಡಿಯಾ ನಡೆಸುತ್ತಿರುವ ಕರ್ನಾಟಕ-ಆಂಧ್ರಪ್ರದೇಶ ಗಣಿ ಗುರುತಿಸುವಿಕೆ ಕಾರ್ಯ ಮುಂದುವರೆದಿದೆ. ಡೆಹ್ರಾಡೂನ್‌ನಿಂದ ಆಗಮಿಸಿರುವ ಸರ್ವೆ ಆಫ್ ಇಂಡಿಯಾದ ಸರ್ವೆಯರ್ ಜನರಲ್ ಡಾ.ಸ್ವರ್ಣ ಸುಬ್ಬರಾವ್ ನಿರ್ದೇಶನದಂತೆ ಉಭಯ ರಾಜ್ಯಗಳ ಅಧಿಕಾರಿಗಳು ಮೂರು ತಂಡಗಳಲ್ಲಿ ಗಡಿ ಭಾಗದ ನಾನಾ ಪ್ರದೇಶಗಳಲ್ಲಿ ಸರ್ವೆ ಕಾರ್ಯ ಕೈಗೊಂಡಿದ್ದಾರೆ.

  ಮಲಪನಗುಡಿ, ತುಮಟಿ, ವಿಟ್ಲಾಪುರ ಮುಂತಾದ ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆ ವೇಳೆ ಧ್ವಂಸಗೊಳಿಸಲಾಗಿದ್ದ ಗಡಿ ಗುರುತು ಹೊಂದಿರುವ ಸ್ಥಳಗಳಿಗೆ ತಂಡಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿವೆ. ಡಾ.ಸ್ವರ್ಣ ಸುಬ್ಬರಾವ್ ಅವರು ಭಾನುವಾರ ಡೆಹ್ರಾಡೂನ್‌ ಗೆ ವಾಪಸ್ ತೆರಳಿದ್ದು, ಕೆಲ ದಿನಗಳ ಬಳಿಕ ವಾಪಸ್ ಬರಲಿದ್ದಾರೆ. ಅಲ್ಲಿಯ ತನಕ ಅವರ ನಿರ್ದೇಶನದಂತೆ ಗಡಿ ಸರ್ವೆ ಮುಂದುವರಿಯಲಿದೆ. [ಗಡಿ ಸರ್ವೆ ಕಾರ್ಯ ಆರಂಭ]

  ಹಲವು ಹಂತಗಳಲ್ಲಿ ತಂಡಗಳು ಆಂಧ್ರ-ಕರ್ನಾಟಕದ ಗಡಿ ಸರ್ವೆ ಕಾರ್ಯ ನಡೆಸಲಿದ್ದು, ಮೇ ಅಂತ್ಯದೊಳಗೆ ಗಡಿ ಗುರುತು ಕಾರ್ಯ ಮುಕ್ತಾಯಗೊಳ್ಳಲಿದೆ. ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆಯಿಂದಾಗಿ ಗಡಿಗಳು ಬದಲಾವಣೆಯಾಗಿವೆ. ವಾಸ್ತವಿಕ ಗಡಿ ಗುರುತಿಸುವ ಕಾರ್ಯ ನಡೆಬೇಕು ಎಂದು ಸಿಇಸಿ ತನ್ನ ವರದಿಯಲ್ಲಿ ಶಿಫಾರಸು ಮಾಡಿತ್ತು. ಸಿಇಸಿ ಶಿಫಾರಸ್ಸಿನ ಅನ್ವಯ ಸುಪ್ರೀಂ ಕೋರ್ಟ್ ಹಸಿರು ಪೀಠ ಗಡಿ ಗುರುತಿಸಲು ಆದೇಶ ನೀಡಿದೆ. [ಕರ್ನಾಟಕದ ಇತರ ಜಿಲ್ಲಾಸುದ್ದಿಗಳು]

  ಬಳ್ಳಾರಿಯಲ್ಲಿ ಗಡಿ ಸರ್ವೆ ಕಾರ್ಯ

  ಬಳ್ಳಾರಿಯಲ್ಲಿ ಗಡಿ ಸರ್ವೆ ಕಾರ್ಯ

  ಬಳ್ಳಾರಿಯಲ್ಲಿ ಸರ್ವೆ ಆಫ್ ಇಂಡಿಯಾ ನಡೆಸುತ್ತಿರುವ ಕರ್ನಾಟಕ-ಆಂಧ್ರಪ್ರದೇಶ ಗಣಿ ಗುರುತಿಸುವಿಕೆ ಕಾರ್ಯ ಮುಂದುವರೆದಿದೆ. ಉಭಯ ರಾಜ್ಯಗಳ ಅಧಿಕಾರಿಗಳು ಮೂರು ತಂಡಗಳಲ್ಲಿ ಗಡಿ ಭಾಗದ ನಾನಾ ಪ್ರದೇಶಗಳಲ್ಲಿ ಸರ್ವೆ ಕಾರ್ಯ ಕೈಗೊಂಡಿದ್ದಾರೆ. ಗಡಿ ಸರ್ವೆ ಕಾರ್ಯ ಹಲವು ಹಂತಗಳಲ್ಲಿ ನಡೆಯಲಿದ್ದು, ಮೇ ಅಂತ್ಯದೊಳಗೆ ಮುಕ್ತಾಯಗೊಳ್ಳಲಿದೆ.

  ಅಯ್ಯೋ ನೀರು ಕೊಡಿ ಸ್ವಾಮಿ

  ಅಯ್ಯೋ ನೀರು ಕೊಡಿ ಸ್ವಾಮಿ

  ಬಿರು ಬೇಸಿಗೆಯಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕಾಗಿದ್ದ ಬಾಗಲಕೋಟೆ ನಗರ ಸಭೆ ಕೈಕಟ್ಟಿ ಕುಳಿತಿದೆ. ನೀರಿನ ಸಮಸ್ಯೆ ನಿವಾರಣೆಗೆ ಮುಂದಾಗದ ನಗರ ಸಭೆ ವಿರುದ್ಧ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಇಷ್ಟು ದಿನ ಚುನಾವಣೆ ನೀತಿ ಸಂಹಿತೆ ನೆಪ ಹೇಳುತ್ತಿದ್ದ ನಗರ ಸಭೆ ಅಧಿಕಾರಿಗಳು ಚುನಾವಣೆ ಮುಗಿದರೂ ತಮ್ಮ ಕಾರ್ಯದತ್ತ ಗಮನ ಹರಿಸಿಲ್ಲ. ಆದ್ದರಿಂದ ಜನರು ನಗರಸಭೆ ಅಧಿಕಾರಿಗಳು, ಸದಸ್ಯರ ಕಾರ್ಯವೈಖರಿ ವಿರುದ್ಧ ಅಸಮಾಧಾನಗೊಂಡಿದ್ದಾರೆ.

  ಶಾಂತಿಯುತವಾಗಿ ಹೋರಾಟ ಮಾಡೋಣ

  ಶಾಂತಿಯುತವಾಗಿ ಹೋರಾಟ ಮಾಡೋಣ

  ವಿಶ್ವಕರ್ಮ ಜಯಂತಿ ನಿಮಿತ್ತ ಸೆಪ್ಟೆಂಬರ್ 17ರಂದು ಸರ್ಕಾರಿ ರಜೆ ಘೋಷಿಸಲು ಅನೇಕ ವರ್ಷಗಳಿಂದ ಬೇಡಿಕೆ ಇಟ್ಟರೂ ಯಾವ ಸರ್ಕಾರವೂ ಸ್ಪಂದಿಸಿಲ್ಲ ಈ ಕುರಿತು ನಮವೆ ನ್ಯಾಯ ದೊರೆಯುವ ತನಕ ಶಾಂತಿಯುತವಾಗಿ ಹೋರಾಟ ನಡೆಸೋಣ ಎಂದು ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ಕರೆ ನೀಡಿದ್ದಾರೆ. ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಹಿಂದುಳಿದ ವರ್ಗದ 103 ಜಾತಿಗಳಲ್ಲಿ ವಿಶ್ವಕರ್ಮ ಸಮಾಜ ಎರಡನೇ ಸ್ಥಾನದಲ್ಲಿದೆ. ರಾಜಕೀಯವಾಗಿ ಯಾರು ಈ ಸಮಾಜವನ್ನು ಗುರುತಿಸಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

  ರೈತರ ಮೊಗದಲ್ಲಿ ಸಂತಸ ತಂದ ಟೊಮೇಟೊ ಬೆಲೆ

  ರೈತರ ಮೊಗದಲ್ಲಿ ಸಂತಸ ತಂದ ಟೊಮೇಟೊ ಬೆಲೆ

  ಚಾಮರಾಜನಗರ ಜಿಲ್ಲೆಯಲ್ಲಿ ಎರಡು ತಿಂಗಳ ಹಿಂದೆ ಕೊಳ್ಳುವರಿಲ್ಲದೇ ಕಣ್ಣೀರಿಗೆ ಕಾರಣವಾಗಿದ್ದ ಟೊಮೇಟೊಗೆ ಸದ್ಯ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಇದಕ್ಕೆ ಕಾರಣವಾಗಿರುವುದು ಉತ್ತಮ ಬೆಲೆ. ಎರಡು ವಾರದಿಂದ ಮಾರುಕಟ್ಟೆ ಬೆಲೆ ಏರಿಕೆ ಯಾಗಿದ್ದು , ಕಿಲೋ 4, 8, 13 ರಿಂದ 14 ರೂ.ವರೆಗೆ ಮಾರಾಟವಾಗಿದೆ. ಅಂತರ್ಜಲ ಮತ್ತು ಬೆಲೆ ಕುಸಿತದ ಪರಿಣಾಮ ಟೊಮೇಟೊ ಬೆಳೆ ಪ್ರದೇಶ ಕಡಿಮೆಯಾಗಿದೆ. ಆದ್ದರಿಂದ ಇರುವ ಬೆಳೆಗೆ ಬೆಲೆ ಹೆಚ್ಚಾಗಿದೆ. ಬೆಲೆ ಕುಸಿದಿದೆ ಎಂದು ಬೆಳೆ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದ ರೈತರು ಸದ್ಯ ಬೆಳೆಗೆ ಗೊಬ್ಬರ ಹಾಕಿ, ಔಷಧ ಸಿಂಪಡಿಸಿ, ತಂತಿ ಕಟ್ಟುವ ಕಾರ್ಯದಲ್ಲಿ ನಿರತರಾಗಿದ್ದಾರೆ.

  ಶಿವಗಂಗೆ ನೂತನ ಶ್ರೀಗಳ ಪಟ್ಟಾಭಿಷೇಕ

  ಶಿವಗಂಗೆ ನೂತನ ಶ್ರೀಗಳ ಪಟ್ಟಾಭಿಷೇಕ

  ಶಿವಗಂಗೆಯಲ್ಲಿರುವ ಸುಪ್ರಸಿದ್ಧ ಶ್ರೀ ಶೃಂಗೇರಿ ಶಾರದಾಮಠಕ್ಕೆ ಉತ್ತರಾಧಿಕಾರಿಗಳು ನೇಮಕಗೊಂಡಿದ್ದಾರೆ. ನೂತನ ಪೀಠಾಧಿಪತಿಗಳಾಗಿ ಶ್ರೀ ಪುರುಷೋತ್ತಮ ಭಾರತೀ ಸ್ವಾಮಿಗಳನ್ನು ಶೃಂಗೇರಿ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು ನಿಯುಕ್ತಿಗೊಳಿಸಿದ್ದು, ಅದರಂತೆ ಶ್ರೀಕ್ಷೇತ್ರ ಶಿವಗಂಗೆಯ ಶ್ರೀ ಶೃಂಗೇರಿ ಶಾರದಾಮಠದಲ್ಲಿ ನೂತನ ಪೀಠಾಧಿಕಾರಿಗಳಾದ ಶ್ರೀ ಪುರುಷೋತ್ತಮ ಭಾರತೀ ಸ್ವಾಮಿಗಳವರ ಪಟ್ಟಾಭಿಷೇಕ ಮಹೋತ್ಸವವು ಏಪ್ರಿಲ್ 24 ರಂದು ಬೆಳಗ್ಗೆ 10-45 ಕ್ಕೆ ನೆರವೇರಲಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Super fast news bites from interior Karnataka : Inter state boundary dispute between Karnataka and Andhra Pradesh pertaining to the iron ore-rich Bellary Reserve Forest spread across Bellary in Karnataka and Anantapur in AP, is expected to be resolved soon. Survey of India commencing survey to demarcating the inter-state boundary as per the directions of the Supreme Court.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more