ಅತೃಪ್ತ ಶಾಸಕರು ಮುಂಬೈಗೆ ತೆರಳಿದ್ದೇಕೆ? ಕಾರಣ ಬಹಿರಂಗ
Recommended Video
ಬೆಂಗಳೂರು, ಜುಲೈ 11: ಇಂದು ಸ್ಪೀಕರ್ ಮುಂದೆ ಹಾಜರಾದ ಅತೃಪ್ತ ಶಾಸಕರು, ಶನಿವಾರ ರಾಜೀನಾಮೆ ನೀಡಿದ ನಂತರ ಮುಂಬೈಗೆ ತೆರಳಿದ್ದಕ್ಕೆ ಕಾರಣವನ್ನು ಸ್ಪೀಕರ್ ರಮೇಶ್ ಕುಮಾರ್ ಮುಂದೆ ಹೇಳಿದ್ದಾರೆ.
ನಮಗೆ ಬೆದರಿಕೆ ಒಡ್ಡಲಾಗುತ್ತಿತ್ತು, ಹಾಗಾಗಿ ನಾವು ಮುಂಬೈಗೆ ತೆರಳಿದೆವು ಎಂದು ಅತೃಪ್ತ ಶಾಸಕರು ಸ್ಪೀಕರ್ ರಮೇಶ್ ಕುಮಾರ್ ಅವರ ಬಳಿ ಹೇಳಿದ್ದಾರೆ.
ಶನಿವಾರ ಅವರು ರಾಜೀನಾಮೆ ಸಲ್ಲಿಸಿದ ಬಳಿಕ ಕೆಲವರು ಅತೃಪ್ತ ಶಾಸಕರಿಗೆ ಬೆದರಿಕೆ ಒಡ್ಡಿದ ಕಾರಣ ಅವರು ಮುಂಬೈಗೆ ತೆರಳಿದರಂತೆ. ಸ್ಪೀಕರ್ ಅವರು ಇಂದು ತಮ್ಮ ಕಚೇರಿಯಲ್ಲಿ ಅತೃಪ್ತ ಶಾಸಕರೊಂದಿಗೆ ನಡೆಸಿದ ವಿಚಾರಣೆಯಲ್ಲಿ ಈ ವಿಷಯ ಬಹಿರಂಗಗೊಂಡಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಕುಮಾರ್ ಅವರು, ಬೆದರಿಕೆ ಇದ್ದ ವಿಷಯವನ್ನು ನನ್ನ ಗಮನಕ್ಕೆ ತಂದಿದ್ದರೆ ಅವರಿಗೆ ಸೂಕ್ತ ಭದ್ರತೆ ಒದಗಿಸುತ್ತಿದ್ದೆ ಎಂದು ರಮೇಶ್ ಕುಮಾರ್ ಹೇಳಿದರು.
ಇದೇ ಸಮಯ ಅತೃಪ್ತ ಶಾಸಕರ ಬಗ್ಗೆ ಅಸಮಾಧಾನವನ್ನೂ ವ್ಯಕ್ತಪಡಿಸಿದ ಅವರು, ಅವರು ರಾಜೀನಾಮೆ ಕೊಟ್ಟ ನಂತರ ಮೂರು ಕೆಲಸದ ಅವಧಿಯ ದಿನಗಳಷ್ಟೆ ಕಳೆದಿವೆ, ಆದರೆ ಅತೃಪ್ತರು ಭೂಕಂಪವೇ ಆದಂತೆ ವರ್ತಿಸಿದ್ದಾರೆ ಎಂದಿದ್ದಾರೆ.












Click it and Unblock the Notifications