ಸಭಾಪತಿಗೆ ಅಗೌರವ: "ಸಭಾಪತಿ ಹುದ್ದೆಗೆ ರಾಜೀನಾಮೆ ಕೊಡ್ತೀನಿ"
ಕರ್ನಾಟಕದಲ್ಲಿ ಹನಿಟ್ರ್ಯಾಪ್ ವಿಚಾರವು ಭಾರೀ ಸದ್ದು ಮಾಡುತ್ತಿದೆ. ಇದೀಗ ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ಆಗಿದ್ದು. ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬಸವರಾಜ್ ಹೊರಟ್ಟಿ ಅವರು ಹೇಳಿದ್ದಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರ ಪ್ರಕರಣದ ಸಂದರ್ಭದಿಂದಲೂ ಬಸವರಾಜ್ ಹೊರಟ್ಟಿ ಅವರ ರಾಜೀನಾಮೆ ವಿಚಾರವು ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಬಸವರಾಜ ಹೊರಟ್ಟಿ ಅವರು ನನಗೆ ಸಾಕಾಗಿದೆ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೀನಿ ಎಂದು ಹೇಳಿದ್ದಾರೆ.
ನಾನು ಸಭಾಪತಿ ಹುದ್ದೆಗೆ ರಾಜೀನಾಮೆ ಕೊಡ್ತೀನಿ ಎಂದು ಸಭಾಪತಿ ಬಸವರಾಜ್ ಹೊರಟ್ಟಿ ಅವರು ಹೇಳಿದ್ದಾರೆ. ಈ ವಿಷಯ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸದನದಲ್ಲಿ ನಡೆಯುತ್ತಿರುವ ಘಟನೆಯಿಂದ ಬೇಸರ ಆಗಿದೆ. ಸಭಾಪತಿಗೆ ಹೇಳುವವರು- ಕೇಳುವವರು ಯಾರೂ ಇಲ್ಲ. ದಿನನಿತ್ಯ ಚರ್ಚೆ ನಡೆಯುತ್ತಿವೆ. ಅದನ್ನು ನಡೆಸುವ ಶಕ್ತಿ ಇಲ್ಲ ಅನ್ನಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇಂಪಾರ್ಟೆಂಟ್ ಬಿಲ್ಲು ಇರುತ್ತವೆ. ಆದರೆ ಅದೇ ಸಂದರ್ಭದಲ್ಲಿ ಸದನದಲ್ಲಿ ಧಿಕ್ಕಾರ ಕೂಗುತ್ತಾರೆ. ವಿಧಾನಪರಿಷತ್‌ನಲ್ಲಿಯೇ ಪ್ಲೇಯ ಕಾರ್ಡ್‌ಗಳನ್ನು ತೆಗೆದುಕೊಂಡು ಬರುತ್ತಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ಸದನ ನಡೆಸುವುದಕ್ಕೆ ನನಗೆ ಯೋಗ್ಯತೆ ಇಲ್ಲ. ಮೊನ್ನೆ ನಾನು 17 ನಿಮಿಷ ಸುಮ್ಮನೆ ಕುತ್ತಿದೆ. ಇದರಿಂದ ನಾನು ಸದನದಲ್ಲಿ ಇರಬಾರದು ಅಂದ ತೀರ್ಮಾನ ಮಾಡಿದ್ದಾನೆ. 45 ವರ್ಷಗಳಿಂದ ರಾಜಕೀಯದಲ್ಲಿ ಇದ್ದೇನೆ. ಸದನದಲ್ಲಿ ಯಾರೂ ಗೌರವ ಕೊಡುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಮುಂದೆ ಏನು ಆಗುತ್ತೆ ಗೊತ್ತಿಲ್ಲ. ಸ್ನೇಹಿತ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇನೆ. ಸದನ ನಡೆಸಲು ಸರಿ ನಡೆಸಲು ಆಗದಿದ್ದರೆ ಈ ರೀತಿ ಅಮಾನತು ಮಾಡುವುದು ಒಳ್ಳೆಯ ಸಂಪ್ರದಾಯವಲ್ಲ. ಸ್ಪೀಕರ್ ಮೇಲೆಯೇ ಪೇಪರ್ ಎಸೆಯುವುದು ಎಂದರೆ ಏನು. ಸದನ ನಡೆಸುವ ಪದ್ಧತಿ ಸರಿಯಿಲ್ಲ ಎಂದರು. ಈ ವಿಚಾರಗಳು ನನ್ನ ಮನಸಿನಲ್ಲಿ ಬಂದಿದ್ದು ಹೇಳಿದ್ದೇನೆ ಎಂದು ಹೇಳುತ್ತಲ್ಲೇ ಅವರು ಭಾವುಕರಾಗಿದ್ದಾರೆ.
ನನ್ನ ಮನಸ್ಸಿಗೆ ನೋವಾಗಿದೆ: ಸದನದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಬೆಳವಣಿಗೆಯಿಂದ ನನ್ನ ಮನಸ್ಸಿಗೆ ನೋವಾಗಿದೆ. ಹೀಗಾಗಿ ನನಗೆ ಈ ಸ್ಥಾನದಲ್ಲಿ ಮುಂದುವರಿಯುವುದು ಸರಿ ಎಂದು ಅನಿಸುತ್ತಿಲ್ಲ ಎಂದಿದ್ದಾರೆ. ಇನ್ನು ಹೊರಟ್ಟಿ ಅವರು ಈ ಹಿಂದೆಯೂ ರಾಜೀನಾಮೆ ಕೊಡುವ ವಿಚಾರವಾಗಿ ಮಾತನಾಡಿದ್ದರು. ಇದೀಗ ತೀರ ಗಂಭೀರವಾಗಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
ಮೇಲ್ಮನೆ ಎಂದರೆನೇ ಚಿಂತಕರ ಚಾವಡಿ ಎನ್ನುವ ಮಾತಿದೆ. ನಮ್ಮ ರಾಜ್ಯದ ಮೇಲ್ಮನೆ (ವಿಧಾನ ಪರಿಷತ್) ಇಡೀ ದೇಶಕ್ಕೆ ಮಾದರಿಯಾಗಿದೆ. ಇಂತಹ ಮೇಲ್ಮನೆಗೆ ಸಭಾಪತಿ ಆಗುವುದು ಎನ್ನುವುದೇ ಗೌರವದ ವಿಷಯವಾಗಿದೆ. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರಿಗೆ ಗೌರವ ಸಿಗದೆ ಇದ್ದರೆ ಹೇಗೆ. ಇದರಿಂದ ಏನು ಉಪಯೋಗ ಅಂತ ಅವರು ಪ್ರಶ್ನೆ ಮಾಡಿದ್ದಾರೆ.
ಈಗ ಸದನ ನಡೆಸುವುದೇ ಸವಾಲಿನ ಕೆಲಸವಾಗಿದೆ. ಅಲ್ಲೇ ನಾವು ಮುಂದುವರಿದರೆ ಅಯೋಗ್ಯರು ಎನಿಸಿಕೊಳ್ಳಬೇಕಾಗುತ್ತದೆ. ಮಾತನಾಡಲು ಮಹತ್ವದ ವಿಷಯಗಳಿದ್ದರೂ, ಆ ಮಾತುಗಳನ್ನು ಬಿಟ್ಟು ಬೇರೆಯ ವಿಷಯಗಳ ಬಗ್ಗೆ ಮಾತನಾಡುತ್ತಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.












Click it and Unblock the Notifications