• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡಿಸ್ಕವರಿ ಚಾನೆಲ್ ಕನ್ನಡದಲ್ಲಿ ಲಭ್ಯ, Man vs Wild ಕನ್ನಡದಲ್ಲೇ ನೋಡಿ

|
   Man vs Wild : ಡಿಸ್ಕವರಿ ಚಾನೆಲ್‌ನ Man Vs Wild ಸರಣಿಯಲ್ಲಿ ಪ್ರಧಾನಿ ಮೋದಿ

   ಜಗತ್ತಿನಾದ್ಯಂತ ಸಾಹಸಮಯ, ಸೋಜಿಗ, ಕುತೂಹಲಕಾರಿ ಕಾರ್ಯಕ್ರಮಗಳಿಗೆ ಹೆಸರುವಾಸಿಯಾದ ಡಿಸ್ಕವರಿ ಚಾನೆಲ್ ಈಗ ನಮ್ಮ ಭಾಷೆಯಲ್ಲಿ ನೋಡಬಹುದಾಗಿದೆ.

   ಎಲ್ಲಾ ಜ್ಞಾನ ವಾಹಿನಿಗಳು ಕನ್ನಡ ಭಾಷೆಯಲ್ಲಿ ನೋಡಬೇಕೆಂಬ ಮನಸ್ಸುಗಳಿಗೆ ಸಕ್ಕರೆಯ ಸುದ್ದಿ ಸಿಕ್ಕಿದೆ. ಡಿಸ್ಕವರಿ ವಾಹಿನಿ ಕನ್ನಡ ಆಡಿಯೋ ಫೀಡ್ ಲಭ್ಯವಿದ್ದು, ನಿಮ್ಮ ಕೇಬಲ್ ಆಪರೇಟರ್ ಕೇಳಿ ಕೂಡಲೇ ಪಡೆದುಕೊಳ್ಳಿ. ಇಂದು ಪ್ರಸಾರವಾಗುವ ಮೋದಿ ಜತೆಗಿನ Man vs Wild ಕನ್ನಡದಲ್ಲೇ ನೋಡಬಹುದು.

   ಡಿಸ್ಕವರಿ ಕನ್ನಡ ವಾಹಿನಿ ನೋಡಲು ಡಿಟಿಎಚ್ ಸೆಟಪ್ ಹೇಗೆ?

   ಡಿಸ್ಕವರಿಯ ದಕ್ಷಿಣ ಏಶಿಯಾದ ಡೈರೆಕ್ಟರ್ ಅವರು ಟ್ವಿಟ್ಟರ್ ನಲ್ಲಿ ಆಗಸ್ಟ್ ನಲ್ಲಿ ಡಿಸ್ಕವರಿ ಚಾನೆಲ್ ಜೊತೆ ವರ್ಷಾಂತ್ಯದೊಳಗೆ ಡಿಸ್ಕವರಿ ಕಿಡ್ಸ್ ಕೂಡ ಕನ್ನಡದಲ್ಲಿ ಬರುತ್ತದೆ ಎಂದು ಖಚಿತ ಪಡಿಸಿದ್ದರು. ಈ ಬಗ್ಗೆ ಕಿರಣ್ ಕೊಡ್ಲಾಡಿ ಅವರು ಮಾಡಿದ ಟ್ವೀಟ್ ಗೆ ಮೇಘಾ ಅವರು ಉತ್ತರಿಸಿ, ಅಧಿಕೃತವಾಗಿ ಕನ್ನಡ ಫೀಡ್ ಲಭ್ಯ ಎಂದಿದ್ದಾರೆ.

   ಪ್ರಧಾನಿ ಮೋದಿ ಜೊತೆ "Man vs Wild" ಎಲ್ಲಿ ಪ್ರಸಾರವಾಗುತ್ತೆ?

   ಈ ಬೆಳವಣಿಗೆಯಿಂದಾಗಿ, ಕನ್ನಡ ಮಾತ್ರ ಬಲ್ಲವರಿಗೆ, ಕನ್ನಡದಲ್ಲೇ ನೋಡಲಿಚ್ಚಿಸುವವರಿಗೆ, ಕನ್ನಡದಲ್ಲಿ ಎಲ್ಲವೂ ಸಿಗಬೇಕೆಂದು ಭಗೀರಥ ಪ್ರಯತ್ನ ಪಟ್ಟವರಿಗೆ ಖುಶಿಯ ಜೊತೆಗೆ ಇನ್ನಷ್ಟು ಕನಸು ಕಾಣಲು ಇಂಬು ಕೊಟ್ಟಿರುವುದಂತು ನಿಜ.

   ಭಾರತದ ತಮಿಳು, ತೆಲುಗು, ಹಿಂದಿ ಭಾಷೆಗಳು ಪ್ರಪಂಚದ ಎಲ್ಲಾ ರೀತಿಯ ಮಾಹಿತಿ ಸರಕಿನ ಭಾಷಾಂತರಕ್ಕೆ ತಡೆಗೋಡೆಯೊಡ್ಡದೆ ಆ ಭಾಷೆಗಳನ್ನು ಮಾತ್ರ ಬಲ್ಲ ಜನರಿಗೆ ಎಲ್ಲಾ ತೆರನಾದ ಕಾರ್ಯಕ್ರಮಗಳನ್ನು ನೋಡುವ ಅವಕಾಶ ದಕ್ಕಿಸಿಕೊಂಡಿದ್ದರೂ ಕನ್ನಡ ಮಾತ್ರ ತನ್ನ ಚಿತ್ರರಂಗದ ರಕ್ಷಣೆಗಾಗಿ ಎಂಬ ಕಾರಣಕ್ಕೆ ಸುಮಾರು ಆರು ದಶಕಗಳಷ್ಟು ಕಾಲ ಕನ್ನಡಿಗರು ಕನ್ನಡದ ಚಿತ್ರಗಳನ್ನು ಬಿಟ್ಟು ಬೇರೆ ಭಾಷೆಯಲ್ಲಿರುವ ಇತರ ಉತ್ತಮ, ಸದಭಿರುಚಿಯ ಕಾರ್ಯಕ್ರಮಗಳನ್ನು ಕನ್ನಡದಲ್ಲಿ ನೋಡಲಾಗದ ವಾತಾವರಣ ಸೃಷ್ಟಿಯಾಗಿತ್ತು.

   ಕನ್ನಡದಲ್ಲಿ ಬರಲು ಶುರುವಾಯ್ತು ಜಗತ್ತಿನ ಸಕಲ ಜ್ಞಾನ-ಮನರಂಜನೆ

   ಕಳೆದ ಹತ್ತು ವರುಷಗಳಿಂದ ಬನವಾಸಿ ಬಳಗ, ಕನ್ನಡ ಗ್ರಾಹಕ ಕೂಟ ಹಾಗೂ ಇನ್ನಿತರ ಕನ್ನಡಪರ ಮನಸ್ಸುಗಳ ಅವಿರತವಾದ ಕಾನೂನು ಹೋರಾಟ, ಚಿತ್ರರಂಗದ ಮೇಲೆ ಒತ್ತಡ, ಸಮೂಹ ಮಾಧ್ಯಮಗಳ ಮುಖೇನ ಜನರಿಗೆ ಅರಿವು ಮೂಡಿಸುವ ಕೆಲಸಕ್ಕೆ ಫಲ ಸಿಕ್ಕಿದೆ.

   ಹೋರಾಟದ ಭಾಗವಾಗಿ, ಕಳೆದ ನಾಲ್ಕಾರು ವರ್ಶಗಳಿಂದ ಡಬ್ಬಿಂಗ್ ಪರ ಮನಸ್ಸುಗಳು ಡಿಸ್ಕವರಿ, ಆನಿಮಲ್ ಪ್ಲಾನೆಟ್, ನಾಶನಲ್ ಜಿಯೊಗ್ರಫಿಕ್ ಅಂತಹ ಚಾನೆಲ್ ಗಳಿಗೆ ಪತ್ರ, ಸಾಮಾಜಿಕ ಜಾಲತಾಣದ ಮೂಲಕ ಬೇಡಿಕೆ ಇಟ್ಟು, ಹಾಗೂ ಖುದ್ದು ಭೇಟಿಯಾಗಿ ಮನವಿ ಸಲ್ಲಿಸಿ ಕನ್ನಡಿಗರು ಇಂತಹ ಕಾರ್ಯಕ್ರಮಗಳಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಸದಾ ಕಾರ್ಯಪ್ರವೃತ್ತರಾಗಿರುವುದು ತಿಳಿದ ವಿಚಾರ.

   2018ರ ಜನವರಿಯಲ್ಲಿ ನಡೆಸಿದ ಟ್ವಿಟ್ಟರ್ ಅಭಿಯಾನ -#DiscoveryInKannada ಕ್ಕೆ ಸಿಕ್ಕ ಅಭೂತಪೂರ್ವ ಬೆಂಬಲದಿಂದ ಈ ಎಲ್ಲಾ ಚಾನೆಲ್ ಗಳು ಬಂದೇ ಬರುತ್ತವೆ ಎಂಬುದು ಖಾತ್ರಿಯಾಗಿದ್ದರೂ ಯಾವಾಗ ಎಂಬ ಜಿಜ್ಞಾಸೆ ಎಲ್ಲರಿಗೂ ಕಾಡುತ್ತಿತ್ತು. ಆದರೆ, ಈಗ ಕನಸು ನನಸಾಗಿದ್ದು, ಎಲ್ಲಾ ಡಿಟಿಎಚ್ ನಲ್ಲೂ ಡಿಸ್ಕವರಿ ಕನ್ನಡ ಲಭ್ಯವಿದೆಯೇ ಎಂಬುದು ಖಾತ್ರಿಯಾಗಬೇಕಿದೆ. ಇದಾದ ಬಳಿಕ ಎಲ್ಲರೂ ಕನ್ನಡ ಭಾಷೆಗೆ ಫೀಡ್ ಬದಲಾಯಿಸಿಕೊಂಡರೆ ಸಾಕು.

   English summary
   Megha Tata, Managing Director- South Asia. Discovery Networks confirms Discovery Channel Now available in Kannada, Watch Man vs Wild in with Kannada audio feed.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X