Actor Nagabhushan: ಭೀಕರ ಅಪಘಾತದ ಬಗ್ಗೆ ನಟ ನಾಗಭೂಷಣ್ ಹೇಳಿದ್ದೇನು?
ನಟ ನಾಗಭೂಷಣ್‌ಗೆ ಭೀಕರ ಆಘಾತ ಎದುರಾಗಿದ್ದು ಪೊಲೀಸರ ವಿಚಾರಣೆಯನ್ನ ಇಂದು ಎದುರಿಸಿದ್ದಾರೆ. ನಟ ನಾಗಭೂಷಣ್ ಅವರ ಕಾರು ಅಪಘಾತದಲ್ಲಿ ವೃದ್ಧಿಯೊಬ್ಬರು ಜೀವ ಬಿಟ್ಟಿದ್ದು, ಈ ವಿಚಾರ ಇದೀಗ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಹಾಗಾದರೆ ಅಪಘಾತದ ಬಗ್ಗೆ ನಟ ನಾಗಭೂಷಣ್ ಹೇಳಿದ್ದಾದ್ರೂ ಏನು? ಪೊಲೀಸರ ವಿಚಾರಣೆಯಲ್ಲಿ ಹೊರಬಂದ ಅಂಶಗಳು ಯಾವುವು? ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಹೌದು, ಸ್ಯಾಂಡಲ್‌ವುಡ್ ಸ್ಟಾರ್ ಆಗಿ ಮೆರೆಯಬೇಕಾದ ಸಮಯಕ್ಕೇ ನಾಗಭೂಷಣ್ ವಿರುದ್ಧ ಹಿಟ್ ಆಂಡ್ ರನ್ ಆರೋಪ ಕೇಳಿ ಬಂದಿದೆ. ಇದೀಗ ನಟ ಪೊಲೀಸರ ವಶದಲ್ಲಿದ್ದು ವಿಚಾರಣೆ ಎದುರಿಸುತ್ತಿದ್ದಾರೆ. ಹಾಗೇ ಘಟನೆ ಕುರಿತು ನಾಗಭೂಷಣ್ ಏನು ಹೇಳಿದ್ರು ಅನ್ನೋ ಮಾಹಿತಿ ಸಖತ್ ಸದ್ದು ಮಾಡ್ತಿದೆ. ರಾಜಧಾನಿ ಬೆಂಗಳೂರಿನ ವಸಂತಪುರ ನಿವಾಸಿಯಾದ 48 ವರ್ಷದ ಪ್ರೇಮಾ ಎಂಬ ಮಹಿಳೆಗೆ ನಟ ನಾಗಭೂಷಣ್ ಕಾರಲ್ಲಿ ಗುದ್ದಿ, ಅಪಘಾತ ಎಸಗಿದ್ದಾರೆಂದು ಆರೋಪ ಮಾಡಲಾಗಿದೆ. ಹಾಗಾದರೆ ಘಟನೆ ಬಗ್ಗೆ ನಾಗಭೂಷಣ್ ಹೇಳಿದ್ದೇನು? ಆ ಬಗ್ಗೆ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಘಟನೆ ಬಗ್ಗೆ ನಟ ನಾಗಭೂಷಣ್ ಹೇಳಿದ್ದೇನು?
ಘಟನೆ ಕುರಿತು ನಾಗಭೂಷಣ್ ನೀಡಿದ ಹೇಳಿಕೆಯನ್ನ ಈಗ ಪೊಲೀಸರು ಬಿಡುಗಡೆ ಮಾಡಿದ್ದು, 'ನಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದುಕೊಂಡು ಫಿಲ್ಮ್ ಇಂಡಸ್ಟ್ರೀಯಲ್ಲಿ ನಟನಾಗಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ದಿನಾಂಕ:30-09-2023 ರಂದು ನನ್ನ ಸ್ನೇಹಿತರನ್ನು ನೋಡಲು ಆರ್.ಆರ್ ನಗರಕ್ಕೆ ಹೋಗಿ ಸ್ನೇಹಿತರನ್ನು ಭೇಟಿ ಮಾಡಿಕೊಂಡು ವಾಪಸ್ಸು ಜೆ.ಪಿ ನಗರದಲ್ಲಿರುವ ನಮ್ಮ ಮನೆಗೆ ಹೋಗಲು ನನ್ನ ಮಾಲೀಕತ್ವದ ಕೀಯ ಸೆಲ್ವೇಸ್ ಕಾರ್ ನಂಬರ್ ಕೆಎ-09-ಎಂಜಿ-5335ರ ವಾಹನವನ್ನು ಚಾಲನೆ ಮಾಡಿಕೊಂಡು ವಸಂತಪುರ ಮುಖ್ಯರಸ್ತೆಯಲ್ಲಿ ಉತ್ತರಹಳ್ಳಿ ಕಡೆಯಿಂದ ಕೋಣನಕುಂಟೆ ಕ್ರಾಸ್ ಕಡೆಗೆ ಹೋಗುವಾಗ...'
ನನಗೆ ಗಾಬರಿಯಾಗಿ ನಾನು ರಸ್ತೆಗೆ...
'ವಸಂತಪುರ ಮುಖ್ಯರಸ್ತೆ ಸುಪ್ರಭಾತ ಶ್ರೀಂ ಬೀಜ್ ಅಪಾರ್ಟಮೆಂಟ್ ಹತ್ತಿರ ರಾತ್ರಿ ಸುಮಾರು 09-45 ಗಂಟೆಯ ಸಮಯದಲ್ಲಿ ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ಅಪಾರ್ಟಮೆಂಟ್ ಹತ್ತಿರ ಒಬ್ಬ ಹೆಂಗಸು ಮತ್ತು ಒಬ್ಬರು ಗಂಡಸು ಇಬ್ಬರೂ ಪುಟ್ ಪಾತ್ ಮೇಲಿಂದ ರಸ್ತೆಗೆ ಕೆಳಗೆ ಇಳಿದು ರಸ್ತೆಗೆ ಬಂದರು. ಅವರು ಬಂದಿದ್ದನ್ನು ನೋಡಿ ನನಗೆ ಗಾಬರಿಯಾಗಿ ನಾನು ರಸ್ತೆಗೆ ಬಂದಿದ್ದವರಿಗೆ ಡಿಕ್ಕಿ ಮಾಡಿ ನಂತರ ಮುಂದೆ ಹೋಗಿ ಪುಟ್ ಪಾತ್ ಮೇಲೆ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಮಾಡಿದೆನು.'
ಹೊಟ್ಟೆ, ಬೆನ್ನು ಮತ್ತು ತಲೆಗೆ...
'ಕೂಡಲೇ ಅಕ್ಕಪಕ್ಕದಲ್ಲಿದ್ದ ಜನ & ಅಪಾರ್ಟಮೆಂಟ್ ವಾಸಿಗಳು ಓಡಿ ಬಂದು ರಸ್ತೆಯ ಮೇಲೆ ಬಿದ್ದಿದ್ದ ಪಾದಚಾರಿಗಳನ್ನ ಮೇಲಕ್ಕೆ ಎತ್ತಿ ರಸ್ತೆ ಬದಿಗೆ ತಂದು ಕೂರಿಸಿದರು. ನಂತರ ನಾನು ಕಾರಿನಿಂದ ಕೆಳಕ್ಕೆ ಇಳಿದು ಪಾದಚಾರಿಗಳನ್ನು ಕೂರಿಸಿದ್ದ ಸ್ಥಳಕ್ಕೆ ಹೋಗಿ ನೋಡಲಾಗಿ ಪಾದಚಾರಿಣಿ ಹೆಂಗಸಿಗೆ ತಲೆಗೆ ಮತ್ತು ಮುಖಕ್ಕೆ ಜಾಸ್ತಿ ಏಟಾಗಿ ಮಾತಾನಾಡದ ಸ್ಥಿತಿಯಲ್ಲಿದ್ದರು ಮತ್ತೊಬ್ಬ ಪಾದಚಾರಿ ಗಂಡಸಿಗೆ ಎರಡು ಕಾಲುಗಳಿಗೆ, ಹೊಟ್ಟೆ, ಬೆನ್ನು ಮತ್ತು ತಲೆಗೆ ರಕ್ತಗಾಯವಾಗಿ ಮಾತಾನಾಡುತ್ತಿದ್ದರು.' ಎಂದು ತಿಳಿಸಿದ್ದಾರೆ ನಟ ನಾಗಭೂಷಣ್.
ದಾರಿ ಮಧ್ಯದಲ್ಲೇ ಗಾಯಾಳು ಸಾವು
'ನಂತರ ನಾನು ಗಾಯಾಳುಗಳನ್ನು ನನ್ನ ಕಾರಲ್ಲಿ ಕರೆದುಕೊಂಡು ಹೋಗಲು ಪ್ರಯತ್ನ ಮಾಡಿದಾಗ ನನ್ನ ಕಾರು ಸ್ಟಾಟ್ ಆಗಲಿಲ್ಲ ನಂತರ ಕಾರಿನಿಂದ ಕೆಳಕ್ಕೆ ಇಳಿದು ಒಂದು ಆಟೋರಿಕ್ಷಾದಲ್ಲಿ ನಾನು ಮತ್ತು ಅಲ್ಲಿದ್ದ ಜನರು ಸೇರಿಕೊಂಡು ಗಾಯಾಳುಗಳನ್ನು ಕೂರಿಸಿಕೊಂಡು ವಸಂತಪುರ ಮುಖ್ಯರಸ್ತೆಯಲ್ಲಿರುವ ಅಸ್ಟ್ರಾ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿದಾಗ ಅಸ್ಟಾ ಆಸ್ಪತ್ರೆಯ ವೈದ್ಯರು ಗಾಯಾಳು ಹೆಂಗಸನ್ನು ಪರೀಕ್ಷಿಸಿ ಗಾಯಾಳುವಿಗೆ ತಲೆಗೆ ಮತ್ತು ಮುಖಕ್ಕೆ ಜಾಸ್ತಿ ಏಟಾಗಿದ್ದು ಚಿಕಿತ್ಸೆಗೆ ಬರುವ ದಾರಿಯ ಮಧ್ಯದಲ್ಲಿ ಮೃತಪಟ್ಟಿರುವುದಾಗಿ ತಿಳಿಸಿದರು.' ಎಂದು ನಟ ನಾಗಭೂಷಣ್ ತಮ್ಮ ಹೇಳಿಕೆ ದಾಖಲಿಸಿದ್ದಾರೆ.












Click it and Unblock the Notifications