ಐಟಿ ಆಯುಕ್ತರ ವಿರುದ್ಧ ರಾಷ್ಟ್ರಪತಿಗೆ ದಿನೇಶ್ ಗುಂಡೂರಾವ್ ಪತ್ರ

ಬೆಂಗಳೂರು, ಮಾರ್ಚ್ 30: ಕರ್ನಾಟಕ-ಗೋವಾ ವೃತ್ತದ ಆದಾಯ ತೆರಿಗೆ ಆಯುಕ್ತ ಬಾಲಕೃಷ್ಣ ವಿರುದ್ಧ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ರಾಷ್ಟ್ರಪತಿ ಮತ್ತು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಆಪ್ತರ ಮೇಲೆ ಮೊನ್ನೆಯಷ್ಟೆ ನಡೆದ ಐಟಿ ದಾಳಿಗಳು ರಾಜಕೀಯ ದುರುದ್ದೇಶದಿಂದ ಕೂಡಿದ್ದು, ಮತದಾನ ಕೆಲವೇ ದಿನಗಳಿರುವಾಗ ರಾಜಕೀಯವಾಗಿ ನಮಗೆ ಹಾನಿ ಉಂಟು ಮಾಡಲೆಂದು ದುರುದ್ದೇಶಪೂರ್ವಕವಾಗಿ ಈ ದಾಳಿಗಳನ್ನು ಮಾಡಲಾಗಿದೆ ಎಂದು ದಿನೇಶ್ ಗುಂಡೂರಾವ್ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ರಾಷ್ಟ್ರಪತಿ ರಮಾನಾಥ ಕೋವಿಂದ್, ಕೇಂದ್ರ ಚುನಾವಣಾ ಆಯೋಗ, ಸಿಬಿಡಿಟಿಗೆ ಪತ್ರ ಬರೆದಿರುವ ದಿನೇಶ್ ಗುಂಡೂರಾವ್ ಅವರು, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವು ಗೋವಾ-ಕರ್ನಾಟಕ ವೃತ್ತದ ಐಟಿ ಆಯುಕ್ತರನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ದೂರಿನಲ್ಲಿ ಹೇಳಿದ್ದಾರೆ.

Dinesh Gundu Rao writes letter against IT commissioner

ಗೋವಾ-ಕರ್ನಾಟಕ ವೃತ್ತದ ಐಟಿ ಆಯುಕ್ತರ ಪ್ರಾಮಾಣಿಕತೆ ಅನುಮಾನಸ್ಪತವಾಗಿದ್ದು, ಅವರು ಜೆಡಿಎಸ್-ಕಾಂಗ್ರೆಸ್‌ ವಿರುದ್ಧ ಹಗೆತನದಿಂದ ಕಾರ್ಯನಿರ್ವಹಿಸುತ್ತಿದ್ದಾರೆ, ಆಯುಕ್ತ ಬಾಲಕೃಷ್ಣ ಅವರು ಬಜೆಪಿಯ ಏಜೆಂಟ್‌ ಅಂತೆ ವರ್ತಿಸುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+