ಸಿಎಂ ಸಿದ್ದು, ಪರಮೇಶ್ವರ್ ಗೆ ದಿಗ್ವಿಜಯ್ ಗುದ್ದು
ಬೆಂಗಳೂರು, ನ. 30: ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯ ಭುಗಿಲೇಳುತ್ತಿದ್ದು, ನಿಗಮ ಮಂಡಳಿಯ ಉಪಾಧ್ಯಕ್ಷ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಿ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅವರಿಗೆ ಸೂಚನೆ ನೀಡಿದ್ದಾರೆ.
ಕಾರ್ಯಕರ್ತರಲ್ಲಿನ ಅಸಮಾಧಾನವನ್ನು ಮೊದಲು ಶಮನ ಮಾಡಿ. ಸ್ಥಳೀಯ ಸಂಸ್ಥೆ ಚುನಾವಣೆ ಎದುರಾಗುತ್ತಿದ್ದು ಪಕ್ಷವನ್ನು ಭದ್ರಪಡಿಸಬೇಕಾಗಿದೆ. ನಿಗಮ ಮಂಡಳಿಯ ಉಳಿದ ಸ್ಥಾನಗಳನ್ನು ತುಂಬಿ ಕಾರ್ಯಕರ್ತರ ಅಸಮಾಧಾನ ಹೋಗಲಾಡಿಸಿ ಎಂದು ತಿಳಿಸಿದ್ದಾರೆ.[ತೆರಿಗೆ ಹೇರಿಕೆಗೆ ದಿಗ್ವಿಜಯ್ ಡಿಚ್ಚಿǃ]

ಸ್ಥಳೀಯ ಸಂಸ್ಥೆ ಚುನಾವಣೆ ಪಕ್ಷದ ಬೆಳವಣಿಗೆ ದೃಷ್ಟಿಯಿಂದ ಮಹತ್ವದ್ದಾಗುತ್ತದೆ. ಕೆಲ ನಾಯಕರು ಬಹಿರಂಗವಾಗಿ ತಮ್ಮ ಅಭಿಪ್ರಾಯ ಹೊರಹಾಕುತ್ತಿದ್ದು ಎಲ್ಲದಕ್ಕೂ ಅಂತ್ಯ ಕಾಣಿಸಬೇಕು ಎಂದು ದಿಗ್ವಿಜಯ್ ಸಿಂಗ್ ಸೂಚನೆ ನೀಡಿದ್ದಾರೆ.[ನಿಗಮ-ಮಂಡಳಿ ಪಟ್ಟಿ ಬಿಡುಗಡೆ, ಯಾರಿಗೆ ಯಾವ ಸ್ಥಾನ?]
ನಿಗಮ ಮಂಡಳಿ ಅಧ್ಯಕ್ಷರ ನೇಮಕ ಮಾಡಲು ಕಾಂಗ್ರೆಸ್ ಸರ್ಕಾರಕ್ಕೆ ವರ್ಷಗಳ ಕಾಲ ಹಿಡಿದಿದೆ. ಅಲ್ಲದೇ ನಿಗಮ ಮಂಡಳಿಯಲ್ಲಿ ತಮ್ಮ ಬೆಂಬಲಿಗರಿಗೆ ಸ್ಥಾನ ಸಿಕ್ಕಿಲ್ಲ ಎಂದು ಸಚಿವ ಅಂಬರೀಶ್ ಸೇರಿದಂತೆ ಅನೇಕ ನಾಯಕರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಒಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಾ. ಜಿ. ಪರಮೇಶ್ವರಗೆ ಹೊಸದೊಂದು ಸವಾಲು ಎದುರಾಗಿದೆ.












Click it and Unblock the Notifications