Digital E Stamp: ಆಸ್ತಿ ರಿಜಿಸ್ಟ್ರೇಷನ್ ಬಿಗ್ ಅಪ್ಡೇಟ್ಸ್‌: ಏನಿದು ಹೊಸ ಡಿಜಿಟಲ್‌ ಇ– ಸ್ಟ್ಯಾಂಪ್ ಗುಡ್‌ನ್ಯೂಸ್

Digital E Stamp: ಕರ್ನಾಟಕ ಸರ್ಕಾರವು ಆಸ್ತಿಗಳ ಸಂರಕ್ಷಣೆ ಹಾಗೂ ಮಾರಾಟದಲ್ಲಿ ಯಾವುದೇ ಲೋಪವಾಗಬಾರದು ಎನ್ನುವ ಕಾರಣಕ್ಕೆ ಕೆಲವೊಂದು ಪ್ರಮುಖ ಯೋಜನೆಗಳನ್ನು ಈಗಾಗಲೇ ರೂಪಿಸಿದೆ. ಅದರಲ್ಲಿ ಮುಖ್ಯವಾಗಿ ಇ - ಖಾತಾ & ಬಿ - ಖಾತಾ ಮತ್ತು ಸ್ಟ್ಯಾಂಪ್‌ಗೆ ಸಂಬಂಧಿಸಿದಂತೆ ಕೆಲವೊಂದು ಪ್ರಮುಖ ಬದಲಾವಣೆಗಳನ್ನು ತರಲಾಗಿದೆ. ಇದೀಗ ಕರ್ನಾಟಕ ಸರ್ಕಾರವು 'ಇ- ಸ್ಟ್ಯಾಂಪ್‌' ಬದಲಿಗೆ 'ಡಿಜಿಟಲ್‌ ಇ- ಸ್ಟ್ಯಾಂಪ್‌' ಪರಿಚಯಿಸಿದೆ. ಇದೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಆಸ್ತಿಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಇದೀಗ ಇ- ಸ್ಟ್ಯಾಂಪ್ ಬದಲಿಗೆ ಡಿಜಿಟಲ್ ಇ- ಸ್ಟ್ಯಾಂಪ್ ಪರಿಚಯಿಸಿದೆ. ನೋಂದಣಿ ಮತ್ತು ನೋಂದಣಿಯೇತರ ಛಾಪಾ ಕಾಗದ ವಹಿವಾಟುಗಳಿಗೆ ಇ- ಸ್ಟ್ಯಾಂಪ್ ಬಳಕೆ ಮಾಡಲಾಗುತ್ತಿತ್ತು. ಇದೀಗ ಇದರ ಬದಲಿಗೆ ಡಿಜಿಟಲ್ ಇ- ಸ್ಟ್ಯಾಂಪ್ ವ್ಯವಸ್ಥೆಯನ್ನು ರಾಜ್ಯ ಕಂದಾಯ ಇಲಾಖೆಯು ಪರಿಚಯಿಸಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಈ ಸಂಬಂಧ ಮಹತ್ವದ ಅಪ್ಡೇಟ್ಸ್‌ ನೀಡಿದ್ದಾರೆ. ಇದು ಆಸ್ತಿಗಳ ರಿಜಿಸ್ಟ್ರೇಷನ್‌ನಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಲಾಗಿದೆ.

Digital E-Stamp Game-Changer Property Registration Now Instant Digital E Stamp Good News

ಕರ್ನಾಟಕದಲ್ಲಿ ಆಸ್ತಿಗಳ ಖರೀದಿ ಹಾಗೂ ಮಾರಾಟದಲ್ಲಿ ಆಗುವ ಮೋಸವನ್ನು ತಪ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಕೆಲವೊಂದು ನಿಯಮಗಳನ್ನು ರೂಪಿಸಲಾಗಿದೆ. ಇದೀಗ ಸ್ಟ್ಯಾಂಪ್ ವಂಚನೆ ಮತ್ತು ಭದ್ರತಾ ಲೋಪವನ್ನು ಸಂಪೂರ್ಣ ತೊಡೆಯುವ ಉದ್ದೇಶದಿಂದ ಹೊಸ ವ್ಯವಸ್ಥೆ ಪರಿಚಯಿಸಲಾಗಿದೆ. ಈ ವ್ಯವಸ್ಥೆಗೆ ಅಗತ್ಯವಾದ ನಿಯಮಗಳನ್ನು ಈಗಾಗಲೇ ಪ್ರಕಟಿಸಲಾಗಿದ್ದು, ಮುಂದಿನ ದಿನಗಳಲ್ಲಿ ಡಿಜಿಟಲ್ ಇ-ಸ್ಟ್ಯಾಂಪ್ ಕಡ್ಡಾಯ ಮಾಡಲಾಗುವುದು ಎಂದು ಹೇಳಿದ್ದಾರೆ.

ಆಸ್ತಿದಾರರು ಹಾಗೂ ಸಾರ್ವಜನಿಕರು ಇನ್ಮುಂದೆ ಯಾವುದೇ ಮಧ್ಯವರ್ತಿಗಳ ನೆರವಿಲ್ಲದೆ ಹಾಗೂ ಮನೆಯಲ್ಲಿಯೇ ಕುಳಿತುಕೊಂಡು ಡಿಜಿಟಲ್‌ ಇ- ಸ್ಟ್ಯಾಂಪ್ ಪಡೆದುಕೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಇಂಟರ್‌ನೆಟ್ ಸೌಲಭ್ಯವಿದ್ದರೆ 24x7 ಈ ಸೇವೆ ಪಡೆದುಕೊಳ್ಳುವುದಕ್ಕೆ ಅವಕಾಶ ಇರಲಿದೆ. ಇನ್ಮುಂದೆ ಇದಕ್ಕೆ ಸಂಬಂಧಿಸಿದ ಎಲ್ಲ ಸೇವೆಗಳು ಸಂಪೂರ್ಣ ಡಿಜಿಟಲ್ ಆಗಿರಲಿವೆ. ಸುರಕ್ಷಿತ ಮತ್ತು ವೇಗವಾಗಿ ಆನ್‌ಲೈನ್‌ ಪಾವತಿ ಮಾಡಲು ಸಹ ಅವಕಾಶವಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದ್ದಾರೆ.

ಡಿಜಿಟಲ್‌ ಇ- ಸ್ಟ್ಯಾಂಪ್ ಯಾಕೆ ?

ಇನ್ನು ಸ್ಟಾಕ್‌ ಹೋಲ್ಡಿಂಗ್ ಕಾರ್ಪೊರೇಷನ್‌ ಲಿ(ಎಸ್‌ಎಚ್‌ಸಿಐಎಲ್‌) ಸಹಯೋಗದಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಇ- ಸ್ಟ್ಯಾಂಪ್ ಕಾಗದವನ್ನು ಮುದ್ರಿಸುತ್ತಿದೆ. ಆದರೆ, ಝೆರಾಕ್ಸ್‌ ಯಂತ್ರಗಳ ಮೂಲಕ ಇ-ಸ್ಟ್ಯಾಂಪ್ ಪ್ರಮಾಣಪತ್ರಗಳನ್ನು ನಕಲು ಅಥವಾ ಅದೇ ಮಾದರಿಯ ಪ್ರತಿಗಳನ್ನು

ಸೃಷ್ಟಿಸಲು ಅವಕಾಶವಿತ್ತು. ಈ ರೀತಿ ಮಾಡುವುದರಿಂದ ನಿಜವಾದ ದಾಖಲೆ ಯಾವುದು ಹಾಗೂ ನಕಲಿ ಯಾವುದು ಎಂದು ತಿಳಿದುಕೊಳ್ಳುವುದು ಸವಾಲಾಗುತ್ತಿತ್ತು. ಒಂದು ಉದ್ದೇಶಕ್ಕೆ ಖರೀದಿಸಿದ ಸ್ಟ್ಯಾಂಪ್‌ ಕಾಗದವನ್ನು ಬೇರೆ ರೀತಿಯ ದಸ್ತಾವೇಜಿಗೆ ಸಹ ಬಳಕೆ ಮಾಡುವುದು ಸಹ ನಡೆದಿತ್ತು. ಇದೀಗ ಈ ಎಲ್ಲಾ ಲೋಪಗಳು ಹಾಗೂ ಮೋಸವನ್ನು ತಪ್ಪಿಸುವ ಉದ್ದೇಶದಿಂದ ಹೊಸ ಬದಲಾವಣೆ ಮಾಡಿರುವುದಾಗಿ ಸರ್ಕಾರ ಹೇಳಿದೆ.

ಡಿಜಿಟಲ್ ಇ-ಸ್ಟಾಂಪ್ ವಿಶೇಷತೆಗಳೇನು

1. ರಾಜ್ಯದಲ್ಲಿ ಆಸ್ತಿಗಳ ಸಂರಕ್ಷಣೆ ಹಾಗೂ ಮೋಸ ತಪ್ಪಿಸುವ ಉದ್ದೇಶ

2. ಕಚೇರಿಗೆ ಸುತ್ತುವ ಅವಶ್ಯಕತೆ ಇಲ್ಲ. ಮನೆಯಿಂದಲೇ ಸ್ಟ್ಯಾಂಪ್‌ ಪಡೆಯಬಹುದು. ಅಲ್ಲದೇ ಈ ಸೇವೆ 24x7 ಲಭ್ಯವಿರಲಿದೆ.

3. ನಿರ್ದಿಷ್ಟ ಆಸ್ತಿಯ ಗುರುತಿನ ವಂಚನೆ ನಕಲಿ ಸಹಿ ತಡೆಯಲು ಇ -ಸಹಿ ವ್ಯವಸ್ಥೆ.

4. ಕಾಗದರಹಿತ ವ್ಯವಸ್ಥೆ, ಪರಿಸರ ಸ್ನೇಹಿ ಸುರಕ್ಷಿತ ಹಾಗೂ ವಿಶ್ವಾಸಾರ್ಹ.

5. ಸುರಕ್ಷಿತ ಆನ್‌ಲೈನ್‌ ಪಾವತಿ ಆಗಲಿದೆ. ಈ ಹಣವು ನೇರವಾಗಿ ಸರ್ಕಾರದ ಖಜಾನೆಗೆ ಸೇರಲಿದೆ.

6. ಮಧ್ಯವರ್ತಿಗಳ ಮೇಲೆ ಅವಲಂಬನೆ ಆಗುವ ಅವಶ್ಯಕತೆ ಇಲ್ಲ.

7. ಡಿಜಿಟಲ್ ರೂಪದ ದಸ್ತಾವೇಜುಗಳು ಕಾನೂನುಬದ್ಧವಾಗಿ ಇರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+