Jagadish Shettar: ಕುತೂಹಲ ಕೆರಳಿಸಿದ್ದ ದೆಹಲಿ ಭೇಟಿ, ಚರ್ಚೆ ಬಗ್ಗೆ ಶೆಟ್ಟರ್ ಪ್ರತಿಕ್ರಿಯೆ

ಹುಬ್ಬಳ್ಳಿ, ಡಿಸೆಂಬರ್ 22: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಮನೆಗೆ ಭೇಟಿ ಕೊಟ್ಟು ಬಂದ ಬಳಿಕ ಧಾರವಾಡ ಲೋಕಸಭಾ ಟಿಕೆಟ್ ಕುರಿತು ಸಾಕಷ್ಟು ಚರ್ಚೆಗಳು ಕಾಂಗ್ರೆಸ್ ವಲಯದಲ್ಲಿ ನಡೆಯುತ್ತಿವೆ. ಈ ಮಧ್ಯೆ ಜಗದೀಶ್ ಶೆಟ್ಟರ್ ಅವರು ದೆಹಲಿಗೆ ಹೋಗಿ ಬಂದಿರುವುದು ಭಾರೀ ಕುತೂಹಲ ಕೆರಳಿಸಿದೆ.

ಈ ಕುರಿತು ನಗರದಲ್ಲಿ ಶುಕ್ರವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಜಗದೀಶ್ ಶೆಟ್ಟರ್ ಅವರು, ವೈಯಕ್ತಿಕ ಕೆಲಸಗಳಿಗಾಗಿ ನಾನು ದೆಹಲಿಗೆ ಹೋಗಿದ್ದೆ, ಯಾವುದೇ ಹೈಕಮಾಂಡ್ ನಾಯಕರನ್ನು ಭೇಟಿ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Dharwad Lok Sabha Election: Jagadish Shettar Reaction About his Delhi Visit and Contest Elections

ಈಗಾಗಲೇ ರಾಜ್ಯ ಕಾಂಗ್ರೆಸ್ ಜಗದೀಶ್ ಶೆಟ್ಟರ್ ಅವರಿಗೆ ಧಾರವಾಡ ಟಿಕೆಟ್ ನೀಡುವಂತೆ ದೆಹಲಿ ಹೈಕಮಾಂಡ್‌ಗೆ ತಿಳಿಸಿದೆ ಎಂಬ ವಿಷಯ ಹರಿದಾಡಿದ ಬೆನ್ನಲ್ಲೆ ಹೀಗೆ ರಾಜ್ಯ ನಾಯಕರು ದೆಹಲಿ ಭೇಟಿ ನೀಡುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

ನನಗಿಂತ ಒಂದು ದಿನ ಮೊದಲು ಸಿಎಂ ಸಿದ್ದರಾಮಯ್ಯ ದೆಹಲಿಗೆ ಹೋಗಿದ್ದರು. ಅದಾದ ನಂತರ ನಾನು ಹೋಗಿದ್ದೇನೆ. ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿಗಳನ್ನು ಭೇಟಿ ಮಾಡಲು ತೆರಳಿದ್ದರು. ನಾನು ವೈಯಕ್ತಿಕ ಕೆಲಸಕ್ಕಾಗಿ ದೆಹಲಿಗೆ ತೆರಳಿದ್ದೆ ಎಂದು ಶೆಟ್ಟರ್ ಪುನರುಚ್ಚರಿಸಿದರು.

Dharwad Lok Sabha Election: Jagadish Shettar Reaction About his Delhi Visit and Contest Elections

ದೆಹಲಿ ನಾಯಕರ ಭೇಟಿ ಬಗ್ಗೆ ಏನಂದ್ರು ಶೆಟ್ಟರ್

ದೆಹಲಿ ಭೇಟಿ ವೇಳೆ ಯಾವುದೇ ನಾಯಕರನ್ನು ಭೇಟಿ ಆಗಿಲ್ಲ. ಯಾವುದೇ ಚುನಾವಣೆಯ ವಿಚಾರವನ್ನು ಚರ್ಚಿಸಿಲ್ಲ. ಧಾರವಾಡ ಆಕಾಂಕ್ಷಿಯಾಗಿ ಶೆಟ್ಟರ್ ಹೆಸರು ಶಿಫಾರಸು ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇನ್ನು ಯಾರ ಹೆಸರನ್ನು ಕಳುಹಿಸಿಲ್ಲ. ಅದು ಹೇಗೆ ನನ್ನದೇ ಒಂದು ಹೆಸರು ಕಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ನಿಮಗೆ (ಮಾಧ್ಯಮ) ಟಿಕೆಟ್ ಆಕಾಂಕ್ಷಿ ಪಟ್ಟಿ ಕೊಟ್ಟವರು ಯಾರು..? ಮೊನ್ನೆಯಷ್ಟೇ ವೀಕ್ಷಕರ ಸಭೆಯಾಗಿದೆ. ಟಿಕೆಟ್ ಆಕಾಂಕ್ಷಿಗಳ ಶಾರ್ಟ್ ಲಿಸ್ಟ್ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಇಷ್ಟರ ನಡುವೆಯೇ ನನ್ನದೊಂದೇ ಹೆಸರು ಕಳಿಸಿದ್ದಾರೆ ಎಂದು ಹೇಳುತ್ತಿದ್ದೀರಿ ಎಂದರು.

ಬೇರೆಯವರಿಗೆ ಟಿಕೆಟ್ ಕೊಟ್ಟರೆ ಗೆಲುವಿಗೆ ಶ್ರಮಿಸುವೆ

ನಿವಾಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಂದಾಗಲೇ ನಾನು ಹೇಳಿದ್ದೇನೆ. ನಾನು ಚುನಾವಣೆಗೆ ನಿಲ್ಲುವುದಿಲ್ಲ, ನಾನು ಲೋಕಸಭಾ ಚುನಾವಣೆ ಟಿಕೆಟ್ ಆಕಾಂಕ್ಷಿ ಅಲ್ಲ ಎಂದು ಸ್ಪಷ್ಟಪಡಿಸಿದ್ದೇನೆ. ಕಾಂಗ್ರೆಸ್ ನಿಂದ ಯಾರನ್ನೇ ನಿಲ್ಲಿಸಿದರೂ ನಾನು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸುತ್ತೇನೆ. ಲೋಕಸಭಾ ಚುನಾವಣೆಗೂ ನನ್ನ ದೆಹಲಿ ಭೇಟಿಗೂ ಸಂಬಂಧವಿಲ್ಲ. ಜಗದೀಶ್ ಶೆಟ್ಟರ್ ಹೇಳಿದರು.

ಒಂದು ವೇಳೆ ಕಾಂಗ್ರೆಸ್‌ ಅಂದುಕೊಂಡಂತೆ ಜಗದೀಶ್ ಶೆಟ್ಟರ್ ಅವರಿಗೆ ಧಾರವಾಡ ಲೋಕಸಭಾ ಟಿಕೆಟ್ ನೀಡಿದರೆ, ಬಿಜೆಪಿಯಿಂದ ಹಾಲಿ ಸಂಸದರು ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತೆ ಕಣ್ಣಕ್ಕಿಳಿದರೆ ಭಾರೀ ಪೈಪೋಟಿ ಎದುರಾಗಲಿದೆ. ಧಾರವಾಡವು ಈ ಭಾರಿ ಕಾಂಗ್ರೆಸ್-ಬಿಜೆಪಿ ತೀವ್ರ ಹಣಾಹಣಿಗೆ ಸಾಕ್ಷಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+