ಧರ್ಮಸ್ಥಳ ಪ್ರಕರಣ: ಹಲವರಿಂದ ಕಂಪ್ಲೇಂಟ್ ಬಂದಿದೆ ಸ್ಫೋಟಕ ಮಾಹಿತಿ ಹಂಚಿಕೊಂಡ ಜಿ. ಪರಮೇಶ್ವರ್!

ಧರ್ಮಸ್ಥಳದಲ್ಲಿ ನೂರಾರು ಜನರ ಶವಗಳನ್ನು ಹೂಳಲಾಗಿದೆ ಎನ್ನುವ ಪ್ರಕರಣವು ಗಂಭೀರ ಸ್ವರೂಪವನ್ನು ಪಡೆದುಕೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ವಿಶೇಷ ತನಿಖಾ ದಳ (SIT)ವನ್ನು ಸಹ ರಚನೆ ಮಾಡಿದೆ. ಆದರೆ, ಇದಕ್ಕೂ ಕೆಲವರಿಂದ ಪರ - ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕರ್ನಾಟಕ ಸರ್ಕಾರವು ಎಸ್‌ಐಟಿಯನ್ನು ರಚನೆ ಮಾಡಿದೆಯಾದರೂ ಪೂರ್ಣ ಪ್ರಮಾಣದ ಸ್ವಾತಂತ್ರ್ಯ ಕೊಟ್ಟಿಲ್ಲ ಎನ್ನುವ ಅಭಿಪ್ರಾಯವೂ ವ್ಯಕ್ತವಾಗಿದೆ. ಇದೀಗ ಈ ವಿಚಾರವಾಗಿ ಗೃಹ ಸಚಿವ ಜಿ. ಪರಮೇಶ್ವರ್ ಅವರು ಮಾತನಾಡಿದ್ದಾರೆ.

ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು, ಧರ್ಮಸ್ಥಳ ಪ್ರಕರಣ ತನಿಖೆ ವಿಚಾರವಾಗಿ ಮಾತನಾಡಿದ್ದಾರೆ. ಜನ ಸಮುದಾಯ, ಪ್ರಗತಿಪರ ಚಿಂತಕರು ಸೇರಿ ಹಲವರು ತನಿಖೆ ಮಾಡಬೇಕು ಅಂತ ಒತ್ತಾಯ ಮಾಡಿದ್ದರು. ಈ ಕಾರಣಕ್ಕಾಗಿ ಈ ಪ್ರಕರಣಗಳನ್ನು ಎಸ್‌ಐಟಿ ತನಿಖೆಗೆ ನೀಡಲಾಗಿದೆ. ಹಲವರು ಕಂಪ್ಲೇಟ್ ಕೂಡ ಕೊಟ್ಟಿದ್ದಾರೆ. ತನಿಖೆ ಮಾಡಿದ್ರೇನೆ ಆಗಿದೆಯೋ ಆಗಿಲ್ವೋ ಅಂತ ಗೊತ್ತಾಗಬೇಕಲ್ವಾ ಎಂದು ಜಿ. ಪರಮೇಶ್ವರ್ ಅವರು ಹೇಳಿದ್ದಾರೆ.

Dharmasthala case G Parameshwara shares explosive information after complaints from many

ತನಿಖೆಗೆ ಆದೇಶ ಮಾಡಿದ್ದೇವೆ. ಏನೂ ಆಗಿಲ್ಲ ಅಂದ್ರೆ ಯಡಿಯೂರಪ್ಪ ಅವರು ಹೇಳಿದ ರೀತಿಯೇ ವರದಿ ಬರಲಿದೆ. ಪ್ರಣವ್ ಮೊಹಂತಿ ನನಗೆ ಜವಾಬ್ದಾರಿ ಕೊಟ್ಟಿದ್ದೀರಾ ನಾನು ಜವಾಬ್ದಾರಿ ಹೊತ್ತು ತನಿಖೆ ಮಾಡ್ತೀನಿ ಅಂತ ಹೇಳಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿರುವ ಹಿರಿಯ ಅಧಿಕಾರಿಗಳು ತನಿಖೆ ಮಾಡಲಿದ್ದಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಅವರು ಹೇಳಿದ್ದಾರೆ.

ಎಸ್‌ಐಟಿ ಅಧಿಕಾರಿಗಳು ಜವಾಬ್ದಾರಿಯನ್ನು ನಿಭಾಯಿಸ್ತಾರೆ. ಯಾರೂ ಹಿಂದೆ ಸರಿಯುವ ಬಗ್ಗೆ ಏನೂ ಹೇಳಿಲ್ಲ. ನನಗಾಗಲಿ, ಸರ್ಕಾರಕ್ಕಾಗಲಿ ಆ ಬಗ್ಗೆ ಏನೂ ಹೇಳಿಲ್ಲ. ಧರ್ಮಸ್ಥಳ ಕುರಿತ ತನಿಖೆಗೆ ಎಸ್‌ಐಟಿ ರಚಿಸಿರುವ ಸರ್ಕಾರ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ.ಜಿ‌ ಪರಮೇಶ್ವರ್ ಅವರನ್ನು ಪ್ರಣವ್ ಮೊಹಂತಿ ಅವರು ಭೇಟಿ ಮಾಡಿದ್ದಾರೆ. ಪ್ರಣವ್ ಮೊಹಂತಿ ನೇತೃತ್ವದಲ್ಲಿ SIT ತಂಡ ರಚನೆಯಾಗಿದೆ.

ವರುಣ್ ಕೆ.ಎಸ್ ಎನ್ನುವವರು, ಧರ್ಮಸ್ಥಳ ಕೇಸ್ ವಿಚಾರವಾಗಿ ರಾಜ್ಯ ಸರ್ಕಾರ SIT ರಚನೆ ಮಾಡಿರುವುದು ಒಂದು ಮಟ್ಟಕ್ಕೆ ಸಮಾಧಾನವಾದರೂ, ಇವರ ನಾಟಕಗಳನ್ನು ನೋಡಿರೋ ನಾವು ನಂಬಿ ಸುಮ್ಮನೆ ಕೂರಬಾರದು. ಸರ್ಕಾರವು, ಖಡಾಖಂಡಿತವಾಗಿ ಸರಣಿ ಹತ್ಯೆಗಳ ಹಿಂದಿರುವ ವ್ಯಕ್ತಿ ಯಾರೇ ಇರಲಿ, ಅವರ ಹೆಡೆಮುರಿ ಕಟ್ಟಿ ಬಂಧಿಸಿ ಅಂತ ಹೇಳಿ ಈ SIT ಫಾರ್ಮ್ ಮಾಡಿಲ್ಲ. ತನಿಖೆ ಮಾಡಿ, ವರದಿ ನೀಡಿ ಅಂತ ಅಷ್ಟೇ ಹೇಳಿದ್ದಾರೆ.

ಈ ಸರಣಿ ಹತ್ಯೆಗಳ ಹಿಂದಿದ್ದಾರೆ ಎಂಬ ಆರೋಪಗಳನ್ನು ಹೊತ್ತಿರುವವರು ಯಾರೇ ಇರಲಿ ಅವರನ್ನು ಬಂಧಿಸಿ, ತನಿಖೆ ಶುರು ನಡೆಸಿದಾಗ ಮಾತ್ರ ಒಂದು ಹೋಪ್ ಬರಲು ಸಾಧ್ಯ. ಇವರು ಇದುವರೆಗೂ ದಾಖಲಾಗಿರುವ ಕೇಸ್‌ಗಳ ಬಗ್ಗೆ ಪೊಲೀಸ್ ಸ್ಟೇಷನ್ ಅಲ್ಲಿ ವರದಿ ಪಡೆದು, ತನಿಖೆ ನಡೆಸಿದವರಿಂದ ಅಭಿಪ್ರಾಯ ಪಡೆದು, ಕಂಪ್ಲೇಂಟ್ ಕೊಟ್ಟವರನ್ನು ಪದೇ ಪದೇ ಕರೆಸಿ ಹಿಂಸೆ ಕೊಟ್ಟು ಸರ್ಕಾರಕ್ಕೆ ವರದಿ ಕೊಟ್ಟು ಮುಗಿಸಿದ್ರೆ ಎಂಬ ಅನುಮಾನವೇ ಜಾಸ್ತಿ ಎಂದು ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+