New Railway Line: ಕರ್ನಾಟಕದ ಹೊಸ ರೈಲು ಮಾರ್ಗ ಯೋಜನೆ! 407 ಎಕರೆ ಭೂಮಿ ಸ್ವಾಧೀನ

ಬೆಂಗಳೂರು, ಏಪ್ರಿಲ್ 15: ಕರ್ನಾಟಕದಾದ್ಯಂತ ರೈಲ್ವೆ ಜಾಲದಲ್ಲಿ ಮಹತ್ವದ ಸಾಧನೆಗಳು ಆಗುತ್ತಿವೆ. ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಲಯ ಇತ್ತತೀಚೆಗೆ ಆದಾಯ ಗಳಿಕೆ, ಸರಕು ಸಾಗಾಣೆ, ಪ್ರಯಾಣಿಕರ ಸಾಗಾಟದಲ್ಲಿ ಮೈಲಿಗಲ್ಲು ಸಾಧಿಸಿದೆ. ಇದರ ಬೆನ್ನಲ್ಲೆ ರೈಲ್ವೆಗೆ ಸಂಬಂಧಿಸಿದ ಹೊಸ ಸುದ್ದಿಯೊಂದು ಹೊರ ಬಿದ್ದಿದೆ. ಬಹು ನಿರೀಕ್ಷೆಯ ಧಾರವಾಡ-ಕಿತ್ತೂರು ಹೊಸ ರೈಲು ಮಾರ್ಗದಲ್ಲಿ ಪ್ರಗತಿ ಸಾಧಿಸಲಾಗಿದೆ.

ಹೌದು ನೈಋತ್ಯ ರೈಲ್ವೆ ಹುಬ್ಬಳ್ಳಿ ವಲಯ ವ್ಯಾಪ್ತಿಗೆ ಬರುವ ಧಾರವಾಡ-ಕಿತ್ತೂರು ಹೊಸ ಮಾರ್ಗ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಇದಕ್ಕೆ ಅನುದಾನ ಘೋಷಣೆ ಆಗಿದೆ. ಈ ಹಿಂದೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೇ ಖುದ್ದು ಯೋಜನೆ ಬಗ್ಗೆ, ಅಂದಾಜು ವೆಚ್ಚದ ಬಗ್ಗೆ ಮಾತನಾಡಿದ್ದರು. 73 ಕಿಲೋ ಮೀಟರ್ ಉದ್ದದ ಧಾರವಾಡ-ಕಿತ್ತೂರು ಹೊಸ ರೈಲು ಮಾರ್ಗ ನಿರ್ಮಾಣಕ್ಕಾಗಿ ಅಗತ್ಯವಾಗಿದ್ದ ಭೂಮಿ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಕುರಿತು @IndexKarnataka ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ.

Dharawad-Kittur New Railway Line 407 acre Land Acquisition is Completed Know Project Cost

407 ಎಕರೆ ಭೂಮಿ ಸ್ವಾಧೀನ ಯಶಸ್ವಿ

ಸದರಿ ರೈಲ್ವೆ ಯೋಜನೆಗೆ 407 ಎಕರೆ ಭೂಮಿಯನ್ನು ವಶಕ್ಕೆ ಪಡೆಯಲಾಗಿದೆ. ಅಗತ್ಯ ಸ್ಥಳಗಳಲ್ಲಿ ಈಗಾಗಲೇ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ (KIADB) ರೈಲ್ವೆ ಅಧಿಕಾರಿಗಳು ಗುರುತಿಸಿದ್ದರು. ಅದರಂತೆ ಹಂತ ಹಂತ್ರವಾಗಿ ಅಗತ್ಯ ಭೂಮಿ ವಶಕ್ಕೆ ಪಡೆಯಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮರಿಗೇರಿ, ಶಿವನೂರು, ನಿಚ್ಚಣಕಿ, ಕಿತ್ತೂರು, ಬಸಾಪುರ, ಶೀಗಿಹಳ್ಳಿ ಕೆ.ಎ, ಹೊನ್ನಿದಿಬ್ಬ, ಉಗರಕೋಡ, ಹೂಲಿಕಟ್ಟಿ, ಹುಣಶಿಕಟ್ಟಿ, ಕಾದ್ರೋಳ್ಳಿ, ಎಂ.ಕೆ.ಹುಬ್ಬಳ್ಳಿ, ಮುತ್ನಾಳ ಹಾಗ ಬಾಗೇವಾಡಿ ಹೂಬಳಿಯ ಮೂರು ಕಡೆಗಳಲ್ಲಿ ಸೇರಿ ಒಟ್ಟು 407 ಎಕೆರೆ ಜಮೀನನ್ನು ವಶಕ್ಕೆ ಪಡೆದಿದ್ದೇವೆ ಎಂದು ಸರ್ಕಾರಿ ದಾಖಲೆಗಳು ತಿಳಿಸಿವೆ.

Take a Poll

ಯೋಜನೆಗೆ 50:50 ಅನುದಾನ

ಧಾರವಾಡ ಮತ್ತು ಬೆಳಗಾವಿ ಮಧ್ಯದ ರೈಲು ಮಾರ್ಗ ಯೋಜನೆಗೆ ಕರ್ನಾಟಕ ಸರ್ಕಾರ ಭೂಮಿ ಹಸ್ತಾಂತರಿಸಿಲ್ಲ ಎಂದು ಖುದ್ದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದರು. ಯೋಜನೆಗೆ ಅನುದಾನವು ರಾಜ್ಯ ಸರ್ಕಾರವು ಒದಗಿಸಲಿದೆ. 50:50 ಅನುದಾನ ಹಂಚಿಕೆ ಆಧಾರದ ಮೇಲೆ ಮಂಜೂರು ಮಾಡಲಾಗುತ್ತದೆ ಎಂದು ತಿಳಿಸಿದ್ದರು. ಅದಾದ ಬಳಿಕ ಭೂಮಿ ಸ್ವಾಧ್ವೀನ ಪ್ರಕ್ರಿಯೆ ನಡೆಸಲಾಗಿದ್ದು, ಕ್ರಮೇಣ ಅಗತ್ಯ ಭೂಮಿ ವಶಕ್ಕೆ ಪಡೆಯಲಾಗಿದೆ. ಶೀಘ್ರವೇ ಯೋಜನೆ ಕೆಲಸ ಆರಂಭವಾಗುವುದರಲ್ಲಿದೆ.

ಕರ್ನಾಟಕ ರೈಲ್ವೆ ಸಾಧನೆ, ಪ್ರಗತಿ

ರಾಜ್ಯಾದ್ಯಂತ ರೈಲ್ವೆ ಜಾಲವನ್ನು ಸುಧಾರಣೆ ಮಾಡಲಾಗುತ್ತಿದೆ. ಹೊಸ ಮಾರ್ಗದ ಜೊತೆಗೆ ವಿದ್ಯುದೀಕರಣ, ರೈಲ್ವೆ ಡಬಲಿಂಗ್ ವರ್ಕ್‌ಗಳು ನಡೆಯುತ್ತಿವೆ. ಕಳೆದ 2024-25ರಲ್ಲಿ 65.57 ಕಿಲೋ ಮೀಟರ್ ವಿದ್ಯುದೀಕರಣ ಪೂರ್ಣಗೊಂಡಿದೆ. 25 ಕಿಲೋ ಮೀಟರ್ ಹೊಸ ಮಾರ್ಗ, 39 ಕಿಲೋ ಮೀಟರ್ ಮಾರ್ಗವನ್ನು ದ್ವಿಪಥಗೊಳಿಸಲಾಗಿದೆ. ಪ್ರಸಕ್ತ ವರ್ಷ ಕರ್ನಾಟಕದ ರೈಲ್ವೆ ಯೋಜನೆಗಳಿಗಾಗಿ ಕೇಂದ್ರ ಸರ್ಕಾರ 7564 ಕೋಟಿ ರೂಪಾಯಿ ಒದಗಿಸಲಾಗಿದೆ..

ಇತ್ತೀಚೆಗೆ ಸಚಿವ ಎಂ.ಬಿ.ಪಾಟೀಲ್ ಅವರು ಕರ್ನಾಟಕ ರೈಲ್ವೆ ಯೋಜನೆಗಳ ಕಾಮಗಾರಿ ಪ್ರಗತಿ ಪರಿಶೀಲಿಸಿದರು. ಬೆಂಗಳೂರು-ವಿಜಯಪುರ ರೈಲು ಸಂಚಾರ ಸಮಯ ಕಡಿಮೆ ಮಾಡಲು ಹಾಗೂ ಸೂಕ್ತ ಮಾರ್ಗದಲ್ಲಿ ಸಂಚರಿಸುವಂತೆ ಮಾಡಲು ಕ್ರಮ ವಹಿಸಿ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳಿಗೆ ತಿಳಿಸಿದರು.

ಇದರೊಂದಿಗೆ ಧಾರವಾಡ-ಕಿತ್ತೂರು-ಬೆಳಗಾವಿ ಹೊಸ ರೈಲು ಮಾರ್ಗ ಯೋಜನೆಗೆ ಅಗತ್ಯ ಭೂಮಿ ಪ್ರಕ್ರಿಯೆ ಪೂರ್ಣ ಹಂತಕ್ಕೆ ಬಂದಿದೆ. ಗದಗ ಮಾರ್ಗದಲ್ಲಿ ಡಬಲಿಂಗ್ ಕಾರ್ಯ ನಡೆದಿದೆ ಎಂದ ಸಚಿವರು ಸಭೆಗೆ ಗೈರಾದ ಹಿರಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+