ಎಚ್ಡಿಕೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ: ದೇವೇಗೌಡ ಸುಳಿವು

Recommended Video

      Karnataka Elections 2018 : ಎಚ್ ಡಿ ಕುಮಾರಸ್ವಾಮಿ ಬಗ್ಗೆ ಸುಳಿವು ಕೊಟ್ಟ ಎಚ್ ಡಿ ದೇವೇಗೌಡ | Oneindia Kannada

      ನವದೆಹಲಿ, ಮಾರ್ಚ್ 21: ಎಚ್.ಡಿ. ಕುಮಾರಸ್ವಾಮಿ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ನನ್ನ ಅಭ್ಯಂತರವಿಲ್ಲ ಎಂದು ಎಚ್.ಡಿ. ದೇವೇಗೌಡ ಅವರು ಸುಳಿವು ನೀಡಿದರು.

      ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಸ್ಪರ್ಧಿಸಲು ಸೂಕ್ತ ಅಭ್ಯರ್ಥಿಗಳಿಲ್ಲ. ಅನಿತಾ ಕುಮಾರಸ್ವಾಮಿಯವರು ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ, ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಸ್ಪರ್ಧಿಸಲು ಪಕ್ಷದಿಂದ ಯಾವುದೇ ತಡೆ ಇಲ್ಲ. ಈ ಹಿಂದೆ ನಾನೂ ಕೂಡ ಸಾತನೂರು ಮತ್ತು ಹೊಳೆನರಸೀಪುರದಿಂದ ಸ್ಪರ್ಧಿಸಿದ್ದೆ ಎಂದು ಅವರು ಹೇಳಿದರು.

      ಕಾವೇರಿ ಕುರಿತ ಗುರುವಾರ ನಡೆಯುವ ಸಭೆಗೆ ಹೋಗುತ್ತೇನೆ, ಕೇಂದ್ರ ಸಚಿವರು‌ ಈ ಸಭೆಯಲ್ಲಿ‌ ಇದ್ದರೆ ಒಳ್ಳೆಯದು, ಏಕೆಂದರೆ ಈಗ ಕಾವೇರಿ ವಿಷಯ ಕೇಂದ್ರ ಸರ್ಕಾರದ ಅಂಗಳದಲ್ಲಿದೆ, ಸಂಸತ್ ಅಧಿವೇಶನ ಇರುವುದರಿಂದ ಬಿಜೆಪಿ ಸಂಸದರು ಬರುತ್ತಾರೋ ಇಲ್ಲವೋ ಗೊತ್ತಿಲ್ಲ ,ಈಗಾಗಲೇ ನಾನು ಒಂದು‌ ಸ್ಕೀಂ ಮಾಡಿಕೊಟ್ಟಿದ್ದೇನೆ, ತಮಿಳುನಾಡಿನ ಎಲ್ಲಾ ಪಕ್ಷದ ಸಂಸದರು ಒಗ್ಗಟ್ಟಾಗಿದ್ದಾರೆ, ರಾಜ್ಯದ ಸಂಸದರು ಒಗ್ಗಟ್ಟಾಗಬೇಕಿದೆ ಎಂದು ಕರೆ ನೀಡಿದರು.

      Devegowda hinted HDK may contest in two constituencies

      ಜೆಡಿಎಸ್ ನ‌ 7 ಜನ ಶಾಸಕರ ಅನರ್ಹತೆ ವಿಚಾರ ಕುರಿತು ಮಾತನಾಡಿದ ಅವರು, ಸ್ಪೀಕರ್ ಹೇಳಬೇಕಿರುವ ಮಾತನ್ನು ನಾನು ಹೇಗೆ ಹೇಳಲು ಸಾಧ್ಯ, ಆದರೆ ಈ ರೀತಿ ತಡಮಾಡಬಾರದು, ಸ್ಪೀಕರ್ ಕೋರ್ಟ್ ನಲ್ಲಿ ಏನಾಗುತ್ತದೆ ಎಂದು ನೋಡಬೇಕು. ನಾವು ಮಾತುಕತೆಗೆ ಸಿದ್ಧ ಎಂದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+