ಸಿದ್ದರಾಮಯ್ಯ ಸುಮ್ಮನಿದ್ದರಷ್ಟೆ ಸರ್ಕಾರ ಉಳಿಯುತ್ತದೆ: ದೇವೇಗೌಡ
Recommended Video
ಬೆಂಗಳೂರು, ಜೂನ್ 22: ಸಿದ್ದರಾಮಯ್ಯ ಅವರು ಒಡಕಿನ ಮಾತುಗಳನ್ನು ಆಡುವುದು ಬಿಟ್ಟರೆ ಸರ್ಕಾರ ನಾಲ್ಕು ವರ್ಷ ಸುಭದ್ರವಾಗಿ ಇರುತ್ತದೆ ಎಂದು ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ ಅವರು ಹೇಳಿದ್ದಾರೆ.
ಇಂದು ಅರಮನೆ ಮೈದಾನದಲ್ಲಿ ನಡೆದ ಸೋತ ಜೆಡಿಎಸ್ ಅಭ್ಯರ್ಥಿಗಳ ಸಮಾವೇಶದಲ್ಲಿ ದೇವೇಗೌಡ ಅವರು ಈ ಮಾತು ಹೇಳಿದ್ದಾರೆ.
ಈಗಾಲಗೇ ಮೈತ್ರಿ ಮಧ್ಯೆ ಮುನಿಸುಂಟಾಗಿದೆ, ಸಿದ್ದರಾಮಯ್ಯ ಅವರು ಹೈಕಮಾಂಡ್‌ಗೆ ಜೆಡಿಎಸ್ ವಿರುದ್ಧ ದೂರು ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ಸಮಯದಲ್ಲಿ ದೇವೇಗೌಡ ಅವರು ನೀಡಿರುವ ಈ ಹೇಳಿಕೆ ಸಿದ್ದರಾಮಯ್ಯ ಅವರು ದೂರು ನೀಡಿರಬಹುದೆಂಬ ಊಹೆಗಳನ್ನು ಸತ್ಯ ಮಾಡುವಂತಿದೆ.
'ಕಾಂಗ್ರೆಸ್‌ಗೆ ಸರ್ಕಾರ ನಡೆಸುವ ಮನಸ್ಸು ಇದೆಯೋ ಇಲ್ಲವೋ ಗೊತ್ತಿಲ್ಲ, ಸರ್ಕಾರ ಎಷ್ಟು ದಿನ ನಡೆಯುತ್ತದೆಯೋ ಗೊತ್ತಿಲ್ಲ, ಮಧ್ಯಂತರ ಚುನಾವಣೆಗೆ ತಯಾರಾಗಿ' ಕೆಲವು ದಿನಗಳ ಮುನ್ನಾ ದೇವೇಗೌಡ ಅವರು ಹೇಳಿದ್ದರು, ಇದು ಭಾರಿ ರಾಜಕೀಯ ಅಲ್ಲೋಲಕಲ್ಲೋಲ ಸೃಷ್ಟಿಸಿತ್ತು.

ಸಿದ್ದರಾಮಯ್ಯ ಅವರಿಂದಲೇ ಸರ್ಕಾರಕ್ಕೆ ಸಂಕಷ್ಟ!
ಈಗ ಸಿದ್ದರಾಮಯ್ಯ ಅವರ ಮಾತುಗಳಿಂದಲೇ ಸರ್ಕಾರಕ್ಕೆ ಸಂಕಷ್ಟ ಎದುರಾಗುತ್ತಿದೆ ಎಂದು ದೇವೇಗೌಡ ಅವರು ಹೇಳುತ್ತಿದ್ದು, ಸರ್ಕಾರದ ಅಸ್ಥಿರತೆಗೆ ಸಿದ್ದರಾಮಯ್ಯ ಅವರ ಹೇಳಿಕೆಗಳೇ ಕಾರಣ ಎಂಬರ್ಥದಲ್ಲಿ ಮಾತನಾಡಿದ್ದಾರೆ.

ಮಧ್ಯಂತರ ಚುನಾವಣೆ ಹೇಳಿಕೆ ಕೋಲಾಹಲ ಎಬ್ಬಿಸಿತ್ತು
ದೇವೇಗೌಡ ಅವರು ನೀಡಿದ್ದ ಮಧ್ಯಂತರ ಚುನಾವಣೆ ಸಂಭವ ಹೇಳಿಕೆಯಂತೂ ಭಾರಿ ವಿವಾದವನ್ನೇ ಎಬ್ಬಿಸಿತ್ತು. ದೇವೇಗೌಡ ಅವರು ಹೇಳಿಕೆಗೆ ಜೆಡಿಎಸ್ ಮುಖಂಡ ವಿಶ್ವನಾಥ್ ಅವರು ಬೆಂಬಲ ವ್ಯಕ್ತಪಡಿಸಿದ್ದರು. ದೇವೇಗೌಡ ಅವರು ಹೇಳುವುದು ಸತ್ಯ ಎಂಬರ್ಥದ ಮಾತುಗಳನ್ನಾಡಿದ್ದರು.

ದೇವೇಗೌಡ ಹೇಳಿಕೆ ತಳ್ಳಿ ಹಾಕಿದ ಕುಮಾರಸ್ವಾಮಿ
ಆದರೆ ಕುಮಾರಸ್ವಾಮಿ ಅವರು ದೇವೇಗೌಡ ಅವರ ಮಾತನ್ನು ತಳ್ಳಿ ಹಾಕಿ, ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ನಡೆಯುವುದಿಲ್ಲ, ಈ ಸರ್ಕಾರ ಉಳಿದ ನಾಲ್ಕು ವರ್ಷವನ್ನು ಪೂರೈಸುತ್ತದೆ, ನಾಲ್ಕು ವರ್ಷವೂ ನಾನೇ ಸಿಎಂ ಆಗಿರುತ್ತೇನೆ ಎಂದು ಹೇಳಿದ್ದರು.

ಸಿದ್ದರಾಮಯ್ಯ ದೆಹಲಿ ಪ್ರವಾಸದ ಬಳಿಕ ಅಸಮಾಧಾಣ ಉಲ್ಬಣ
ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಿ ಜೆಡಿಎಸ್ ವಿರುದ್ಧ ದೂರು ನೀಡಿದ್ದಾರೆ. ಮೈತ್ರಿಯಿಂದ ಕಾಂಗ್ರೆಸ್‌ಗೆ ನಷ್ಟವಾಗುತ್ತಿದೆ ಮೈತ್ರಿ ಮುರಿದುಕೊಳ್ಳುವ ಬಗ್ಗೆ ಸಲಹೆ ನೀಡಿದ್ದಾರೆ ಎನ್ನಲಾಗಿದ್ದು, ದೋಸ್ತಿ ಪಕ್ಷಗಳ ನಡುವೆ ಇದು ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೆ ಸಿದ್ದರಾಮಯ್ಯ ಅವರು, ತಾವು ರಾಹುಲ್ ಬಳಿ ಯಾರ ಬಗ್ಗೆಯೂ ದೂರು ನೀಡಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications