ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ದೇವೇಗೌಡ ಕುಟುಂಬದ ಬಳಿ ಬಿಪಿಎಲ್ ಕಾರ್ಡ್ ಇದೆಯೇ?'

|
Google Oneindia Kannada News

ಬೆಂಗಳೂರು, ಜ. 23 : ಜೆಡಿಎಸ್ ಕಚೇರಿ ವಿಚಾರ ರಾಜಕೀಯ ಬಣ್ಣ ಪಡೆದುಕೊಂಡಿದೆ. 'ದೇವೇಗೌಡ ಕುಟುಂಬದವರು ಬಿಪಿಎಲ್ ಕಾರ್ಡ್ ಹೊಂದಿರುವವರಂತೆ ಆಡುತ್ತಿದ್ದಾರೆ, ಅವರಿಗೆ ಕಚೇರಿ ಕಟ್ಟಿಸಿಕೊಳ್ಳಲು ಆಗುವುದಿಲ್ಲವೇ?'ಎಂದು ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಟೀಕಿಸಿದ್ದಾರೆ.

ಶುಕ್ರವಾರ ಮೈಸೂರಿನಲ್ಲಿ ಮಾತನಾಡಿದ ಸಚಿವರು, ಜೆಡಿಎಸ್ ಕಛೇರಿ ನಿರ್ಮಾಣ ವಿವಾದದ ಕುರಿತು ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಹಾಗೂ ರೇವಣ್ಣ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅವರ ಕುಟುಂಬಕ್ಕೆ ಕಚೇರಿ ಕಟ್ಟಿಕೊಳ್ಳುವ ಶಕ್ತಿ ಇದೆ ಎಂದರು. [ಜೆಡಿಎಸ್ ಕಚೇರಿಗಾಗಿ ಶೆಡ್ ನಿರ್ಮಾಣ]

srinivas prasad

ಹಿಂದೆ ಬಿ.ಶ್ರೀರಾಮುಲು ಅಂತವರೇ ಹೊಸ ಪಕ್ಷ ಕಟ್ಟಿದಾಗ ಕಚೇರಿ ಮಾಡಿಕೊಂಡಿದ್ದರು. ದೇವೇಗೌಡರಿಗೆ ಆಗಲ್ವಾ? ಎಂದು ಪ್ರಶ್ನಿಸಿದ ಸಚಿವರು, ಜೆಡಿಎಸ್‌ಗೆ ಕಛೇರಿ ಕಟ್ಟಿಕೊಳ್ಳುವಷ್ಟು ಶಕ್ತಿತಿಯಿದೆ. ಆದರೂ ದೇವೇಗೌಡರು ಹಾಗೂ ಅವರ ಮಕ್ಕಳು ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿದರು. [ಜೆಡಿಎಸ್ ಕಾನೂನು ಹೋರಾಟ ಅಂತ್ಯ]

ದಾಖಲೆ ಇದ್ದರೆ ಕೋರ್ಟ್‌ಗೆ ಕೊಡಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಜೆಡಿಎಸ್ ಕಚೇರಿ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕಚೇರಿ ಕಾಂಗ್ರೆಸ್‌ಗೆ ಸೇರಿದ್ದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಜೆಡಿಎಸ್ ಸಲ್ಲಿಸಿದ್ದ ಮೇಲ್ಮನವಿ ವಜಾಗೊಂಡಿದೆ. ನ್ಯಾಯಾಲಯ ನೀಡಿದ್ದ ಗಡುವು ಮುಗಿದಿದೆ. ಹೀಗಾಗಿ ಜಾಗವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಬೇಕು ಎಂದು ಹೇಳಿದ್ದಾರೆ.

ಒಂದು ವೇಳೆ ಕಚೇರಿ ಜಾಗ ಜೆಡಿಎಸ್‌ಗೆ ಸೇರಿದ್ದು ಎಂಬುದಕ್ಕೆ ದಾಖಲೆಗಳಿದ್ದರೆ ನ್ಯಾಯಾಲಯಕ್ಕೆ ಸಲ್ಲಿಸಲಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಹೇಳಿದ್ದಾರೆ. ವಿವಾದಿತ ಜಮೀನಿನಲ್ಲಿ ಜೆಡಿಎಸ್‌ನವರು ತಾತ್ಕಾಲಿಕವಾಗಿ ಶೆಡ್ ಹಾಕಲು ಮುಂದಾಗಿರುವುದು ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.

English summary
Karnataka Congress leaders on Friday slammed Janata Dal Secular (JDS) Former Prime Minister HD Deve Gowda and Former CM HD Kumaraswamy over controversy of party office.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X