ಅತೃಪ್ತರ ಮಣಿಸಲು ದೇವೇಗೌಡ ತಯಾರಿ: ಬೆಂಗಳೂರು ಜೆಡಿಎಸ್ ಮುಖಂಡರ ಸಭೆ

Recommended Video

      ಅತೃಪ್ತರ ಮಣಿಸಲು ದೇವೇಗೌಡ ತಯಾರಿ | Oneindia Kannada

      ಬೆಂಗಳೂರು, ಜುಲೈ 27: ಸರ್ಕಾರಕ್ಕೆ ಕೈಕೊಟ್ಟು ಅತೃಪ್ತ ಶಾಸಕರನ್ನು ಮಣಿಸಲು ದೇವೇಗೌಡ ಅವರು ಈಗಿನಿಂದಲೇ ತಯಾರಿ ಆರಂಭಿಸಿದ್ದಾರೆ.

      ಶಾಸಕ ಮುನಿರತ್ನ ಅವರ ಆರ್‌.ಆರ್.ನಗರ, ಭೈರತಿ ಬಸವರಾಜು ಅವರ ಕೆ.ಆರ್.ಪುರಂ ಕ್ಷೇತ್ರದ ಜೆಡಿಎಸ್ ಮುಖಂಡರ ಸಭೆಯನ್ನು ದೇವೇಗೌಡ ಅವರು ಕರೆದಿದ್ದು, ಉಪಚುನಾವಣೆ ಕುರಿತು ಚರ್ಚೆ ಮತ್ತು ಸೂಚನೆಗಳನ್ನು ನೀಡಲಿದ್ದಾರೆ.

      ನಾಳೆ ಯಶವಂತಪುರ ಮತ್ತು ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಜೆಡಿಎಸ್ ಮುಖಂಡರ ಜೊತೆ ಸಭೆ ನಾಳೆ ನಡೆಯಲಿದ್ದು, ಈ ಎರಡೂ ಕ್ಷೇತ್ರಗಳ ಶಾಸಕರೂ ಸಹ ರಾಜೀನಾಮೆ ನೀಡಿ ಸರ್ಕಾರಕ್ಕೆ ಕೈಕೊಟ್ಟು ಮುಂಬೈನಲ್ಲಿ ನೆಲೆಸಿದ್ದಾರೆ. ಯಶವಂತಪುರ ಕ್ಷೇತ್ರದಿಂದ ಎಸ್‌.ಟಿ.ಸೋಮಶೇಖರ್ ಗೆದ್ದಿದ್ದರೆ, ಮಹಾಲಕ್ಷ್ಮಿ ಲೇಔಟ್‌ನಿಂದ ಜೆಡಿಎಸ್‌ನ ಗೋಪಾಲಯ್ಯ ಗೆದ್ದಿದ್ದರು. ಆದರೆ ಅವರೀಗ ರಾಜೀನಾಮೆ ಸಲ್ಲಿಸಿದ್ದಾರೆ.

      Deve Gowda concentrating on by election, call for Bengaluru JDS leaders meeting

      ಜೆಡಿಎಸ್‌ನ ಮೂರು ಶಾಸಕರು ಮೈತ್ರಿ ಸರ್ಕಾರಕ್ಕೆ ಕೈ ಕೊಟ್ಟು ರಾಜೀನಾಮೆ ಸಲ್ಲಿಸಿದ್ದು, ಆ ಮೂರೂ ಶಾಸಕರ ಜೊತೆಗೆ ಕಾಂಗ್ರೆಸ್‌ನಿಂದ ಪರಾರಿಯಾದ ಕ್ಷೇತ್ರಗಳ ಕಡೆಗೂ ದೇವೇಗೌಡ ಅವರು ಗಮನ ಹರಿಸಿದ್ದಾರೆ. ಒಟ್ಟಿನಲ್ಲಿ ಮೈತ್ರಿ ಸರ್ಕಾರಕ್ಕೆ ಕೈಕೊಟ್ಟ ಶಾಸಕರ ರಾಜಕೀಯ ಜೀವನ ನಿರ್ನಾಮ ಮಾಡಲು ದೇವೇಗೌಡ ಅವರು ಪಣತೊಟ್ಟಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+