ಡಿವೈಎಸ್‌ಪಿ ಎಂ.ಕೆ.ಗಣಪತಿ ಸಂಕ್ಷಿಪ್ತ ಪರಿಚಯ

Posted By:
Subscribe to Oneindia Kannada

ಬೆಂಗಳೂರು, ಜುಲೈ 08 : ಮಂಗಳೂರು ಐಜಿ (ಪಶ್ಚಿಮ ವಲಯ)ಕಚೇರಿಯ ಡಿವೈಎಸ್‌ಪಿ ಆಗಿದ್ದ ಎಂ.ಕೆ.ಗಣಪತಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರವಾರ ಕಾರಣ ತಿಳಿದುಬಂದಿಲ್ಲ. ಗುರುವಾರ ತಡರಾತ್ರಿ ಸರ್ಕಾರ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ಆದೇಶ ಹೊರಡಿಸಿದೆ.

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ರಂಗಸಮುದ್ರದ ಎಂ.ಕೆ.ಗಣಪತಿ (51) ಅವರ ಹುಟ್ಟೂರು. ಬೆಂಗಳೂರಿನ ಅಪರಾಧ ದಾಖಲಾತಿ ಘಟಕದಲ್ಲಿ (ಸಿಸಿಆರ್‌ಬಿ)ಯಲ್ಲಿ ಕೆಲಸ ಮಾಡುತ್ತಿದ್ದ ಅವರು, ಇತ್ತೀಚೆಗೆ ಮಂಗಳೂರು ಐಜಿ ಕಚೇರಿಗೆ ವರ್ಗಾವಣೆಗೊಂಡಿದ್ದರು. [ವಿಡಿಯೋ : ಗಣಪತಿ ಅವರು ಕೊನೆಯಲ್ಲಿ ಹೇಳಿದ್ದೇನು?]

mk ganapathi

'ರಾಜ್ಯದಲ್ಲಿ ಹಲವಾರು ಡಿವೈಎಸ್‌ಪಿ ಹುದ್ದೆಗಳು ಖಾಲಿ ಇದ್ದರೂ, ಐಜಿ ಕಚೇರಿಗೆ ನನ್ನನ್ನು ವರ್ಗಾವಣೆ ಮಾಡಲಾಗಿದೆ. ಗುಮಾಸ್ತನಿಗಿಂತ ನನ್ನ ಕೆಲಸ ಕಡೆಯಾಗಿದೆ' ಎಂದು ಗಣಪತಿ ಅವರು ಆಪ್ತರ ಬಳಿ ಹೇಳಿಕೊಂಡಿದ್ದರು ಎಂದು ತಿಳಿದುಬಂದಿದೆ. [ಸಮವಸ್ತ್ರದಲ್ಲೇ ನೇಣಿಗೆ ಶರಣಾದ ಡಿವೈಎಸ್ಪಿ ಗಣಪತಿ]

2008ರಲ್ಲಿ ಮಂಗಳೂರಿನಲ್ಲಿ ಚರ್ಚ್‌ಗಳ ಮೇಲೆ ದಾಳಿ ನಡೆದಾಗ ಗಣಪತಿ ಅವರು ಕದ್ರಿ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್‌ ಆಗಿದ್ದರು. ಬೆಂಗಳೂರಿನಲ್ಲಿನ ಕೆಲಸ ಮಾಡುವಾಗ ಯಶವಂತಪುರದಲ್ಲಿ ನಡೆದ ರೌಡಿ ಎನ್‌ಕೌಂಟರ್ ಪ್ರಕರಣದಲ್ಲಿಯೂ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಪ್ರಯತ್ನ ನಡೆಸಲಾಗಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ. ಗಣಪತಿ ಅವರ ಪರಿಚಯ...

* 2001 ರಿಂದ 2003ರಲ್ಲಿ ಉಳ್ಳಾಲ ಠಾಣೆ ಸಬ್ ಇನ್ಸ್‌ಪೆಕ್ಟರ್‌ ಆಗಿ ಸೇವೆ
* 2005 ರಲ್ಲಿ ಆರು ತಿಂಗಳು ಉಳ್ಳಾಲ ಇನ್ಸ್ ಪೆಕ್ಟರ್
* 2006ರಲ್ಲಿ ಕದ್ರಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್
* 2016ರಿಂದ ಡಿವೈಎಸ್‌ಪಿ ಯಾಗಿ ಕೆಲಸ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mangaluru Deputy Superintendent of Police (DySP) M.K. Ganapathi committed suicide in Madikeri on July 7, 2016. Here are the brief profile.
Please Wait while comments are loading...