Get Updates
Get notified of breaking news, exclusive insights, and must-see stories!

ರೋಹಿಂಗ್ಯಾಗಳ ಗಡಿಪಾರು ಸದ್ಯಕ್ಕಿಲ್ಲ: ಸುಪ್ರೀಂಗೆ ಕರ್ನಾಟಕ ಸರ್ಕಾರ ಸ್ಪಷ್ಟನೆ

ಬೆಂಗಳೂರು ಅಕ್ಟೋಬರ್ 25: ರಾಜ್ಯದಲ್ಲಿ ನೆಲೆಗೊಂಡಿರುವ ಅಕ್ರಮ ವಲಸಿಗರು ಮತ್ತು ಒಳನುಸುಳುಕೋರರನ್ನು ಗುರುತಿಸಿ ಬಂಧಿಸಿ ಗಡಿಪಾರು ಮಾಡುವ ಮನವಿಗೆ ರಾಜ್ಯ ಸರ್ಕಾರ ಪ್ರತಿಕ್ರಿಯೆ ನೀಡಿದೆ. ಬಾಂಗ್ಲಾದೇಶಿಯರು, ರೋಹಿಂಗ್ಯಾಗಳು ಸೇರಿದಂತೆ 72 ರೋಹಿಂಗ್ಯಾಗಳನ್ನು ಗಡಿಪಾರು ಸದ್ಯಕ್ಕಿಲ್ಲ ಎಂದು ರಾಜ್ಯ ಸರ್ಕಾರ ಸುಪ್ರೀಂಕೊರ್ಟ್‌ಗೆ ತಿಳಿಸಿದೆ. ಅಕ್ರಮ ರೋಹಿಂಗ್ಯಾ ವಲಸಿಗರನ್ನು ಗಡಿಪಾರು ಮಾಡಲು ನಿರ್ದೇಶನ ನೀಡುವಂತೆ ಬಿಜೆಪಿ ಮುಖಂಡ ಮತ್ತು ಅಡ್ವೋಕೇಟ್ ಅಶ್ವನಿ ಕುಮಾರ್ ಉಪಾಧ್ಯ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸಲ್ಲಿಸಿದ್ದರು. ಅದಕ್ಕೆ ರಾಜ್ಯ ಸರ್ಕಾರವು ಲಿಖಿತ ರೂಪದಲ್ಲಿ ಪ್ರತಿಕ್ರಿಯೆ ಸಲ್ಲಿಸಿದೆ.

ನಗರ ಪೋಲಿಸ್ ತನ್ನ ವ್ಯಾಪ್ತಿಯಲ್ಲಿ ಯಾವುದೇ ಶಿಬಿರ ಅಥವಾ ಬಂಧನ ಕೇಂದ್ರದಲ್ಲಿ ರೋಹಿಂಗ್ಯಾಗಳನ್ನು ಇರಿಸಿಕೊಂಡಿಲ್ಲ. ಜೊತೆಗೆ ಬೆಂಗಳೂರು ನಗರದಲ್ಲಿ ಗುರುತಿಸಲಾಗಿರುವ 72 ರೋಹಿಂಗ್ಯಾಗಳು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು ನಗರ ಪೊಲೀಸರು ಅವರ ವಿರುದ್ಧ ಯಾವುದೇ ಒತ್ತಾಯಪೂರ್ವಕ ಕ್ರಮ ಕೈಗೊಂಡಿಲ್ಲ. ಅವರನ್ನು ಗಡಿಪಾರು ಮಾಡುವ ಯಾವುದೇ ಆಲೋಚನೆ ಸದ್ಯಕ್ಕಿಲ್ಲ ಎಂದು ಅರ್ಜಿ ಹೇಳಿದೆ.

ನಗರದ ಈಶಾನ್ಯ ಭಾಗದಲ್ಲಿ ವಾಸಿಸುತ್ತಿರುವ ರೋಹಿಂಗ್ಯಾ ವಲಸಿಗರ ಹೆಸರುಗಳನ್ನು ಸರ್ಕಾರ ನೀಡಿದೆ. 12 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಹೊರತು ಪಡಿಸಿ ರೋಹಿಂಗ್ಯಾ ಸಮುದಾಯದ ಉಳಿದ ಎಲ್ಲರಿಗೂ ವಿಶ್ವಸಂಸ್ಥೆಯ ಅಂಗ ಸಂಸ್ಥೆಯಾದ ನಿರಾಶ್ರಿತರ ಹೈ ಕಮಿಷನರ್ ಕಚೇರಿಯು(ಯುಎನ್ಎಚ್‌ಸಿಆರ್) ಪ್ರತ್ಯೇಕ ಸಂಖ್ಯೆಗಳನ್ನು ನೀಡಿದೆ.

Deportation of 72 Rohingyas is not present: State government is clear to the Supreme

ವಕೀಲರಾದ ಅಶ್ವನಿ ಕುಮಾರ್ ದುಬೆ ಮತ್ತು ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿರುವ ಅರ್ಜಿಯಲ್ಲಿ ನುಸುಳುಕೋರರ ಪ್ರವೇಶದಿಂದಾಗಿ ದೇಶದ ಏಕತೆ, ಸಮಗ್ರತೆ ಮತ್ತು ಭದ್ರತೆಗೆ ಗಂಭೀರ ಬೆದರಿಕೆ ಇದೆ. ಒಟ್ಟು 5 ಕೋಟಿ ನುಸುಳುಕೋರರು ತಮ್ಮ ಜನಾಂಗೀಯ ಸಾಮ್ಯತೆ ಮತ್ತು ಭಾರತದ ಜನರೊಂದಿಗೆ ಇರುವ ಸಂಪರ್ಕದ ಲಾಭ ಪಡೆದು ಅಕ್ರಮವಾಗಿ ಭಾರತದಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಜೊತೆಗೆ "ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ನುಸುಳುಕೋರರಿಗೆ ಪಾನ್, ಆಧಾರ್, ಪಾಸ್‌ಪೋರ್ಟ್, ಪಡಿತರ ಚೀಟಿ, ಮತದಾರರ ಚೀಟಿ, ಚಾಲನಾ ಪರವಾನಗಿ ಒದಗಿಸುವ ಸರ್ಕಾರಿ ನೌಕರರು, ಟ್ರಾವೆಲ್ ಏಜೆಂಟ್‌ಗಳು ಮುಂತಾದವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಅವರ ಎಲ್ಲಾ ಅಸಮಾನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು" ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಒಂದು ವರ್ಷದೊಳಗೆ ಬಾಂಗ್ಲಾದೇಶಿ ಮತ್ತು ರೊಹಿಂಗ್ಯಾ ಅಕ್ರಮ ವಲಸಿಗರು, ನುಸುಳುಕೋರರನ್ನು ಗುರುತಿಸಬೇಕು, ಬಂಧಿಸಬೇಕು ಹಾಗೂ ಅವರನ್ನು ಗಡಿಪಾರು ಮಾಡಬೇಡು. ಈ ಬಗ್ಗೆ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸೂಚಿಸಬೇಕು. ಅಕ್ರಮ ವಲಸೆ ಮತ್ತು ನುಸುಳುಕೋರತನದ ವಿರುದ್ಧ ಜಾಮೀನು ರಹಿತ ಹಾಗೂ ಗಂಭೀರ ಪ್ರಕರಣವಾಗಿ ಪರಿಗಣಿಸಲು ಕಾನೂನು ತಿದ್ದುಪಡಿ ಮಾಡಲು ನಿರ್ದೇಶನ ನೀಡಬೇಕು ಎಂದು ಉಪಾಧ್ಯಾಯ ಅವರು ಕೋರ್ಟ್ ಗೆ ಮನವಿ ಮಾಡಿದ್ದಾರೆ.

ವಕೀಲ ವಿ.ಎನ್.ರಘುಪತಿ ಅವರ ಮೂಲಕ ಸರ್ಕಾರವು ಆಕ್ಷೇಪಣೆ ಸಲ್ಲಿಸಿದ್ದು, ಗಡಿಪಾರು ಮಾಡುವಂತೆ ನಿರ್ದೇಶಿಸಲು ಸಲ್ಲಿಕೆಯಾಗಿರುವ ಮನವಿಯನ್ನು ವಜಾಗೊಳಿಸುವಂತೆ ಕೋರಿದೆ. 'ನಗರ ಪೊಲೀಸರು ಗುರುತಿಸಲಾಗಿರುವ ರೋಹಿಂಗ್ಯಾ ಸಮುದಾಯದವರನ್ನು ಯಾವುದೇ ಶಿಬಿರ ಅಥವಾ ಬಂಧನ ಕೇಂದ್ರಗಳಲ್ಲಿ ಇರಿಸಿಲ್ಲ. ನಗರದಲ್ಲಿ ಗುರುತಿಸಲಸಾಗಿರುವ 72 ಜನ ರೊಹಿಂಗ್ಯಾ ಸಮುದಾಯದವರು ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಪೊಲೀಸರು ಯಾವುದೇ ಒತ್ತಾಯದ ಕ್ರಮಗಳನ್ನು ಅವರ ವಿರುದ್ಧ ತೆಗೆದಿಕೊಂಡಿಲ್ಲ ಹಾಗೂ ಅವರನ್ನು ಕೂಡಲೇ ಗಡಿಪಾರು ಮಾಡುವ ಯೋಜನೆ ಇಲ್ಲ' ಎಂದು ಹೇಳಿದೆ.

Recommended Video

      ಶಮಿ‌ ಪರ ನಿಂತ ಟೀಂ ಇಂಡಿಯಾ ಕ್ರಿಕೆಟಿಗರು:ಯಾಕೆ ಗೊತ್ತಾ? | Oneindia Kannada

      ಮನವಿಯನ್ನು ಕಾನೂನು ಅಥವಾ ಪ್ರಕರಣದ ವಾಸ್ತವಾಂಶಗಳ ಆಧಾರದಲ್ಲಿ ನಿರ್ವಹಿಸಲಾಗದು. ಅರ್ಜಿಗೆ ಅರ್ಹತೆ ಇಲ್ಲ. ಆದ್ದರಿಂದ ಅದನ್ನು ವಿಚಾರಣೆಗೂ ಮುನ್ನವೇ ವಜಾಗೊಳಿಸಬೇಕು ಎಂದು ಸರ್ಕಾರ ಪ್ರತಿಪಾದಿಸಿದೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+