Ration Card: ಡೆಂಗ್ಯೂ ಭೀತಿ: ಬಿಪಿಎಲ್ ಕಾರ್ಡುದಾರರಿಗೆ ಗುಡ್ ನ್ಯೂಸ್
ಬೆಂಗಳೂರು, ಜುಲೈ, 13: ಬಿಪಿಎಲ್ ಕಾರ್ಡುದಾರರಿಗೆ ಸರ್ಕಾರ ಆಗಾಗಾ ಗುಡ್ ನ್ಯೂಸ್ ನೀಡುತ್ತಲೇ ಇರುತ್ತದೆ. ಇನ್ನೂ ಇದೀಗ ರಾಜ್ಯದಲ್ಲಿ ಡೆಂಗ್ಯೂ ಉಲ್ಬಣಿಸುತ್ತಿದ್ದು, ಈ ಹಿನ್ನೆಲೆ ಇದೀಗ ಮುಂಜಾಗ್ರತಾ ಕ್ರಮವಾಗಿ ಸರ್ಕಾರವು ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿ ಸೊಳ್ಳೆ ಪರದೆ ವಿತರಣೆ ಮಾಡಲು ಮುಂದಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರಾಜ್ಯದಲ್ಲಿ ಡೆಂಗ್ಯೂ ಜ್ವರ ಪರಿಸ್ಥಿತಿಯ ಸೂಕ್ಷ್ಮ ಮೇಲ್ವಿಚಾರಣೆಗೆ ವಾರ್ ರೂಮ್ ಪ್ರಾರಂಭಿಸಿ, ಡೆಂಘಿ ಪೀಡಿತರ ಮೇಲೆ 14 ದಿನಗಳು ನಿಗಾ ವಹಿಸಬೇಕು ಎಂದು ಆರೋಗ್ಯ ಇಲಾಖೆಯು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ. ಆರೋಗ್ಯ ಸೌಧದಲ್ಲಿರುವ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮ ವಿಭಾಗವು ರಾಜ್ಯಮಟ್ಟದ ವಾರ್ ರೂಮ್ ಉಸ್ತುವಾರಿ ಹೊಂದಿರಲಿದೆ.

ಬಿಬಿಎಂಪಿ ಹಾಗೂ ಜಿಲ್ಲಾಡಳಿತಗಳು ಅಧಿಕ ಪ್ರಕರಣಗಳು ವರದಿಯಾದ ಪ್ರದೇಶ ಗುರುತಿಸಿ, ವಿವರವನ್ನು ರಾಜ್ಯ ಮಟ್ಟದ ವಾರ್ ರೂಮ್‌ಗೆ ಸಲ್ಲಿಕೆ ಮಾಡಬೇಕು. ಹೆಚ್ಚು ಪ್ರಕರಣಗಳು ವರದಿಯಾದ ಪ್ರದೇಶಗಳಲ್ಲಿ ಲಾರ್ವಾ ನಾಶ ಚಟುವಟಿಕೆಗಳನ್ನು ತೀವ್ರಗೊಳಿಸಬೇಕು. ಜ್ವರ ಕ್ಲಿನಿಕ್‌ಗಳನ್ನು ತುರ್ತಾಗಿ ಪ್ರಾರಂಭ ಮಾಡಬೇಕು. ಬಿಪಿಎಲ್ ಕುಟುಂಬಗಳಿಗೆ ಸೊಳ್ಳೆ ಪರದೆ ವಿತರಣೆ ಮಾಡಬೇಕು ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಸುತ್ತೋಲೆ ಹೊರಡಿಸಿದ್ದಾರೆ ಎಂದು ತಿಳಿದುಬಂದಿದೆ.
ಕಾರ್ಮಿಕರ ಮಕ್ಕಳಿಗೆ ಶುಭಸುದ್ದಿ: ಕರ್ನಾಟಕ ಸರ್ಕಾರ ಕಾರ್ಮಿಕರಿಗೆ ಉತ್ತಮ ಯೋಜನೆಗಳನ್ನು ಜಾರಿ ಮಾಡುತ್ತಲೇ ಬರುತ್ತಿದೆ. ಇದೀಗ ಕರ್ಮಿಕರ ಮಕ್ಕಳಿಗೆ ಶುಭಸುದ್ದಿಯೊಂದನ್ನು ನೀಡಿದೆ. ಹಾಗಾದರೆ ಮಾಹಿತಿ ಇಲ್ಲಿದೆ ತಿಳಿಯಿಸಿ.
ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಗೆ ವಂತಿಕೆ ಪಾವತಿಸುವ ಸಂಘಟಿತ ಕಾರ್ಮಿಕರ ಮಕ್ಕಳಿಂದ ಪ್ರೌಢ ಶಾಲೆಯಿಂದ ಸ್ನಾತ್ತಕೋತ್ತರ ಪದವಿಯವರೆಗೆ ಹಾಗೂ ವೈದ್ಯಕೀಯ, ಇಂಜಿನಿಯರಿಂಗ್‌ನಲ್ಲಿ ವ್ಯಾಸಂಗ ಮಾಡುತ್ತಿರುವವರಿಗೆ 2024-25ನೇ ಸಾಲಿಗೆ ಶೈಕ್ಷಣಿಕ ಪ್ರೋತ್ಸಾಹಧನ ಸಹಾಯಕ್ಕೆ ಕರ್ನಾಟಕ ಕಾರ್ಮಿಕ ಮಂಡಳಿಯ ವೆಬ್‍ಸೈಟ್ WWW.klwbapps.karnataka.gov.in ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಶೈಕ್ಷಣಿಕ ಪ್ರೋತ್ಸಾಹಧನ ಸಹಾಯ ಬಯಸುವ ವಿದ್ಯಾಥಿಗಳು ಹಿಂದಿನ ವರ್ಷದಲ್ಲಿ ಸಾಮಾನ್ಯ ವರ್ಗ ಶೇಕಡ 50, ಪ.ಜಾ, ಪ.ಪಂ.ಶೇಕಡ 45ರಷ್ಟು ಅಂಕ ಪಡೆದು ತೇರ್ಗಡೆ ಆಗಿರಬೇಕು. ಹಾಗೂ ಕಾರ್ಮಿಕರ ಮಾಸಿಕ ವೇತನ 35,000 ರೂಪಾಯಿಗಿಂತ ಮೀರಿರಬಾರದು. ಅರ್ಜಿ ಸಲ್ಲಿಸಲು 2025ರ ಜನವರಿ 31 ಕೊನೆಯ ದಿನಾಂಸ ಆಗಿದೆ.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ, ಕಾರ್ಮಿಕ ಕಲ್ಯಾಣ ಭವನ, ನಂ.48, 1ನೇ & 2ನೇ ಮಹಡಿ, ಮತ್ತಿಕೆರೆ ಮುಖ್ಯರಸ್ತೆ, ಯಶವಂತಪುರ, ಬೆಂಗಳೂರು ಇಲ್ಲಿಗೆ ಭೇಟಿ ನೀಡಬಹುದಾಗಿದೆ. ಅಥವಾ ದೂರವಾಣಿ ಸಂಖ್ಯೆ 080-23475188, 8277291175, 8277120505, 9141585402, 9141602562ಗೆ ಕರೆ ಮಾಡಬಹುದು ಎಂದು ಕಾರ್ಮಿಕ ಅಧಿಕಾರಿ ತಿಳಿಸಿದ್ದಾರೆ.












Click it and Unblock the Notifications