• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಯೋಮಿತಿ ಹೆಚ್ಚಿಸಿ, ಸರ್ಕಾರಿ ಉದ್ಯೋಗ ಕೊಡಿಸಿ

By Manjunatha
|

ಕರ್ನಾಟಕ, ಜನವರಿ 11: ಸರ್ಕಾರಿ ಉದ್ಯೋಗ ಪಡೆಯಲು ಪ್ರತಿಭೆಯೊಂದೇ ಸಾಲದು ಅದರೊಟ್ಟಿಗೆ ಸರ್ಕಾರ ಸೂಚಿಸಿದಷ್ಟೇ ವಯಸ್ಸೂ ಇರಬೇಕು. ಪ್ರತಿಭೆ ಇದ್ದು, ಸರ್ಕಾರ ಸೂಚಿಸಿದ ವಯೋಮಿತಿಗಿಂತ ತುಸುಹೆಚ್ಚಾಗಿದ್ದರೂ ಸರ್ಕಾರಿ ಉಸ್ಯೋಗ ಕೈಗೆಟುಕದ ನಕ್ಷತ್ರವಾಗಿಬಿಡುತ್ತದೆ.

ಹೀಗೆ ಪ್ರತಿಭೆ ಇದ್ದರೂ ವಯೋಮಿತಿಯಿಂದಾಗಿ ಸರ್ಕಾರಿ ಉದ್ಯೋಗದಿಂದ ವಂಚಿತರಾಗಿರುವ, ವಂಚಿತರಾಗುತ್ತಿರುವವರ ಸಂಖ್ಯೆ ಕರ್ನಾಟಕದಲ್ಲಿ ಹೆಚ್ಚಿದೆ, ಇದಕ್ಕೆ ಕಾರಣ ಕಾರಣ ಸರ್ಕಾರದ ವಿಳಂಬ ನೀತಿ.

SDA, FDA ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆ ವೇಳಾಪಟ್ಟಿ ಪ್ರಕಟ

ನೇಮಕಾತಿಯ ಅಧಿಸೂಚನೆ ಹೊರಡಿಸಿ ವರ್ಷಗಳಾದ ಮೇಲೆ ನೇಮಕಾತಿ ಪ್ರಕ್ರಿಯೆ ಆರಂಭಿಸುವುದು, ವರ್ಷಗಟ್ಟಲೆ ಅಧಿಸೂಚನೆ ಹೊರಡಸದೇ ಇರುವುದು, ಇವೇ ಮುಂತಾದ ಕಾರಣಗಳಿಂದಾಗಿ ಹಲವರು ಪ್ರತಿಭೆ ಇದ್ದರೂ ಸಹಿತ ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ.

ಸಂಕ್ರಾಂತಿ ವಿಶೇಷ ಪುಟ

ಆದರೆ ಈ ಸಮಸ್ಯೆಯ ಬಗ್ಗೆ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದಿದ್ದು, ಸರ್ಕಾರ ಈ ಬಗ್ಗೆ ಚಿಂತಿಸಿ ಸಕಾರಾತ್ಮಕ ನಿರ್ಣಯ ತಳೆಯುವುದಾಗಿ ಭರವಸೆ ನೀಡಿದೆ.

ಶೀಘ್ರ ನೇಮಕಕ್ಕೆ ಒತ್ತಾಯ

ಶೀಘ್ರ ನೇಮಕಕ್ಕೆ ಒತ್ತಾಯ

ಹೈ.ಕರ್ನಾಟಕಕ್ಕೆ ವಿಶೇಷ ಮೀಸಲಾತಿ (371 (ಜೆ)) ನೀಡಿದ ಮೇಲೆ 2013 ರಿಂದ 2017ರ ವರೆಗೆ ಎಲ್ಲಾ ಪ್ರಕಾರದ ಹುದ್ದೆಗಳಿಗೆ ನೇಮಕಾತಿ ಆಗಿಲ್ಲ. ಆ ಅವಧಿಯಲ್ಲಿ ಹಲವಾರು ಮಂದಿ ಉದ್ಯೋಗ ಆಕಾಂಕ್ಷಿಗಳ ವಯಸ್ಸು ಏರಿಕೆ ಆಗಿ ವಯೋಮಿತಿ ಆದಾರದಲ್ಲಿ ಉದ್ಯೋಗದಿಂದ ವಂಚಿತರಾಗಿದ್ದಾರೆ. ಈ ಬಗ್ಗೆ ಹಲವು ಹೈ.ಕರ್ನಾಟಕ ಶಾಸಕರು ಅಧಿವೇಶನದಲ್ಲಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಪರಿಶೀಲಿಸಿ ಉತ್ತರ

ಪರಿಶೀಲಿಸಿ ಉತ್ತರ

ಬಿ.ಆರ್.ಪಟೀಲ್ ಅವರ ಪ್ರಶ್ನೆಗೆ ಉತ್ತರಿಸಿರುವ ಸರ್ಕಾರ ಸ್ಥಳೀಯ ಉದ್ಯೋಗದಲ್ಲಿ ಸ್ಥಳೀಯ ವ್ಯಕ್ತಿಗಳಿಗಾಗಿ ವಯಸ್ಸಿನ ವಿನಾಯಿತಿ ವಿಷಯಗಳನ್ನು ಸಚಿವ ಸಂಪುಟ ಉಪ ಸಮಿತಿಯು ಪರಿಶೀಲಿಸುತ್ತಲಿದೆ, ಈ ಸಂಬಂಧ ಸೂಕ್ತ ಕ್ರಮವಹಿಸಲಾಗುವುದು ಎಂದಿದೆ. ಸರ್ಕಾರದ ಉತ್ತರದಿಂದ ವಯಸ್ಸಿನ ಕಾರಣಕ್ಕೆ ಉದ್ಯೋಗ ವಂಚಿತರಾಗಿರುವವರಲ್ಲಿ ಆಶಾ ಭಾವನೆ ಹುಟ್ಟು ಹಾಕಿದೆ.

ವಯೋಮಿತಿ ಹೆಚ್ಚಿಸಿದ ರಾಜ್ಯಗಳು

ವಯೋಮಿತಿ ಹೆಚ್ಚಿಸಿದ ರಾಜ್ಯಗಳು

ವಯೋಮಿತಿ ಸಡಿಲಿಕೆಯಲ್ಲಿ ಆಂಧ್ರ ಪ್ರದೇಶದ ಮಾದರಿ ಅನುಕರಣೀಯ. ಆಂಧ್ರದಲ್ಲಿ ವಯೋಮಿತಿಯಿಂದಾಗಿ ಅನ್ಯಾಯಕ್ಕೆ ಒಳಗಾದ ಉದ್ಯೋಗಾಂಕ್ಷಿಗಳಿಗೆ ನ್ಯಾಯ ಒದಗಿಸಲೆಂದೇ ಉದ್ಯೋಗ ವಯೋಮಿತಿಯನ್ನು ಸರ್ಕಾರ ಸಡಿಲಿಸಿತ್ತು. ಆಂಧ್ರದಲ್ಲಿ 40 ವರ್ಷ ವಯೋಮಿತಿ ಇದ್ದವರಿಗೆ 10 ವರ್ಷ ಮಿತಿ ಏರಿಸಿತ್ತು, 20 ವರ್ಷ ಮಿತಿ ಇದ್ದುದನ್ನು 30 ವರ್ಷಕ್ಕೆ ಏರಿಸಿ ಅವರಿಗೆ ಪ್ರತಿಭಾನ್ವಿತರಿಗೆ ಉದ್ಯೋಗ ದೊರಕುವಂತೆ ಮಾಡಿತ್ತು. ಆಂಧ್ರ ಪ್ರದೇಶ ಮಾತ್ರವಲ್ಲದೆ ಗೋವಾ, ತಮಿಳುನಾಡುಗಳು ಕೂಡ ಈ ರೀತಿಯ ಸಡಿಲೆಕಗಳನ್ನು ಮಾಡಿದ್ದವು.

ಹಲವಾರು ವರ್ಷಗಳಿಂದ ಅಧಿಸೂಚನೆ ಇಲ್ಲ

ಹಲವಾರು ವರ್ಷಗಳಿಂದ ಅಧಿಸೂಚನೆ ಇಲ್ಲ

ಕೆ.ಎ.ಎಸ್ 'ಸಿ' ಗ್ರೂಫ್ ಹುದ್ದೆಗಳಾದ ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಸಹಾಯಕರು ಹಾಗೂ ಕಂದಾಯ ಅಧಿಕಾರಿಗಳು, ಇನ್ನತರೆ ಸರ್ಕಾರಿ ಹುದ್ದೆಗಳ೯ಇಗೆ ಅಧಿಸೂಚನೆ ಹೊರಡಿಸಿರುವುದು ಬಹಳಾ ವಿರಳ. ಪ್ರತಿ ವರ್ಷವೂ ಉದ್ಯೋಗ ಅಧಿಸೂಚನೆ ಹೊರಡಿಸಬೇಕೆಂಬ ನಿಯಮವಿದ್ದರೂ ಅಧಿಸೂಚನೆ ಹೊರಡಿಸದಿರುವುದು ಉದ್ಯೋಗಾಕಾಂಕ್ಷಿಗಳು ಉದ್ಯೋಗದಿಂದ ವಂಚಿತರಾಗುವಂತೆ ಮಾಡಿದೆ.

2018ರ ಕೆಎಎಸ್ ಅಧಿಸೂಚನೆಗೆ ಇನ್ನೂ ಸಿಕ್ಕಿಲ್ಲ ಅನುಮೋಧನೆ

2018ರ ಕೆಎಎಸ್ ಅಧಿಸೂಚನೆಗೆ ಇನ್ನೂ ಸಿಕ್ಕಿಲ್ಲ ಅನುಮೋಧನೆ

ಇತ್ತೀಚೆಗೆ ಸರ್ಕಾರವೇ ರಚಿಸಿದ್ದ ಪಿ.ಸಿ.ಹೂಟಾ ಸಮಿತಿಯು ಪ್ರತಿ ವರ್ಷ ಅಧಿಸೂಚನೆ ಹೊರಡಿಸುವಂತೆ ಶಿಫಾರಸ್ಸು ಮಾಡಿದೆ. ಆದರೂ ಸಹಿತ 2018ರ ಜನವರಿಯಲ್ಲಿ ಹೊರಡಿಸಬೇಕಾಗಿದ್ದ ನೂತನ ಕೆ.ಎ.ಎಸ್ ಅಧಿಸೂಚನೆಗೆ ಸಚಿವ ಸಂಪುಟದ ಅನುಮೋದನೆಯನ್ನೇ ನೀಡಿಲ್ಲ.

ಉದ್ಯೋಗ ನಮ್ಮ ಹಕ್ಕು ಅದರಿಂದ ವಂಚಿತರನ್ನಾಗಿಸಬೇಡಿ

ಉದ್ಯೋಗ ನಮ್ಮ ಹಕ್ಕು ಅದರಿಂದ ವಂಚಿತರನ್ನಾಗಿಸಬೇಡಿ

ರಾಜ್ಯದ ಎಲ್ಲಾ ಉದ್ಯೋಗ ಅಧಿಸೂಚನೆಗಳಲ್ಲಿ ವಯೋಮಿತಿಯನ್ನು ಕನಿಷ್ಟ ಎರಡು ವರ್ಷ ಸಡಿಲಿಕೆ ಮಾಡಬೇಕು ಉದ್ಯೋಗಾಕಂಕ್ಷಿಗಳ ಪ್ರಮುಖ ಬೇಡಿಕೆ. ಅಷ್ಟೇ ಅಲ್ಲದೆ ಪಿ.ಸಿ.ಹೂಟಾ ಕಮಿಟಿ ಶಿಫಾರಸ್ಸಿನಂತೆ ಕಡ್ಡಾಯವಾಗಿ ಪ್ರತಿ ವರ್ಷವೂ ಪ್ರತಿ ಇಲಾಖೆಯೂ ಉದ್ಯೋಗ ಅಧಿಸೂಚನೆಗಳನ್ನು ಕಡ್ಡಾಯವಾಗಿ ಹೊರಡಿಸಬೇಕು. ಉದ್ಯೋಗ ವ್ಯಕ್ತಿಯ ಹಕ್ಕು ಸರ್ಕಾರದ ವಿಳಂಬ ನೀತಿಯಿಂದ ಹಕ್ಕಿನಿಂದ ವಂಚಿತರಾಗುವುದು ಬೇಡ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
So many youngsters deprived by government job due to Not giving appointment notification time to time. So job aspirants and some MLA's demanding government to rise age limit for government job.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more