• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ವೈರಸ್‌ನಿಂದ ಉಸಿರಾಟದ ಸಮಸ್ಯೆ: ಆಕ್ಸಿಜನ್‌ಗೆ ಬೇಡಿಕೆ ನಾಲ್ಕುಪಟ್ಟು, ಬೆಲೆ ದುಪ್ಪಟ್ಟು

|

ಬೆಂಗಳೂರು, ಸೆಪ್ಟೆಂಬರ್ 15: ಕೊರೊನಾ ವೈರಸ್ ಸೋಂಕಿನ ಸಂಖ್ಯೆ ಹೆಚ್ಚಾದಂತೆ ದೇಶದಾದ್ಯಂತ ಆಮ್ಲಜನಕದ ಸಿಲಿಂಡರ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಬೇಡಿಕೆ ಹೆಚ್ಚಿದಂತೆ ಅದರ ದರವೂ ದುಪ್ಪಟ್ಟಾಗುತ್ತಿರುವುದು ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಆಕ್ಸಿಜನ್ ಸಿಲಿಂಡರ್‌ಗಳ ಕೊರತೆ ಉಂಟಾಗಿದೆ. ಬಹುತೇಕ ರಾಜ್ಯಗಳು ತಮ್ಮ ರಾಜ್ಯಗಳ ಹೊರಗಿನ ಆಕ್ಸಿಜನ್ ಪೂರೈಕೆ ಘಟಕಗಳನ್ನು ಅವಲಂಬಿಸಿವೆ. ಈಗ ಪ್ರತಿ ರಾಜ್ಯಗಳಲ್ಲಿಯೂ ಕೊರೊನಾ ಸೋಂಕು ಮತ್ತಷ್ಟು ಹೆಚ್ಚುವ ಕಳವಳ ಇರುವುದರಿಂದ ರಾಜ್ಯಗಳು ತಮ್ಮ ಭಾಗದಲ್ಲಿ ಉತ್ಪಾದನೆಯಾಗುತ್ತಿರುವ ಆಕ್ಸಿಜನ್ ಸಿಲಿಂಡರ್‌ಗಳನ್ನು ಗಡಿಯಾಚೆಗೆ ಕಳುಹಿಸುವುದನ್ನು ತಡೆಯಲು ಪ್ರಯತ್ನಿಸುತ್ತಿವೆ.

ನವೆಂಬರ್ ವೇಳೆಗೆ ಚೀನಾದ ಕೊರೊನಾ ಲಸಿಕೆ ಲಭ್ಯ

ಉಸಿರಾಟದ ಸಮಸ್ಯೆ ಉಳ್ಳವರ ಜೀವ ಉಳಿಸಲು ಅಧಿಕ ಪ್ರಮಾಣದ ಕೃತಕ ಆಕ್ಸಿಜನ್ ಅಗತ್ಯ ಬೀಳುತ್ತಿದೆ. ಇದರಿಂದ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ಆಕ್ಸಿಜನ್ ಸಿಲಿಂಡರ್‌ಗಳ ಸಾಗಾಟಕ್ಕೆ ಯಾವ ರಾಜ್ಯಗಳೂ ನಿರ್ಬಂಧ ಹೇರುವಂತಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪತ್ರ ಬರೆದಿದೆ. ಮುಂದೆ ಓದಿ.

ನಿರ್ಬಂಧಿಸಿದ ಮಹಾರಾಷ್ಟ್ರ

ನಿರ್ಬಂಧಿಸಿದ ಮಹಾರಾಷ್ಟ್ರ

ಆಕ್ಸಿಜನ್ ಅನ್ನು ರಾಜ್ಯದ ಹೊರಗೆ ಕಳುಹಿಸುವುದನ್ನು ವಿಪತ್ತು ನಿರ್ವಹಣಾ ಕಾನೂನಿನ ಅಡಿ ನಿರ್ಬಂಧಿಸಿ ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿತ್ತು. ಇದರಿಂದ ಸೆ. 7ರ ನಂತರ ಮಧ್ಯಪ್ರದೇಶ ಹಾಗೂ ಕರ್ನಾಟಕಗಳು ಆಕ್ಸಿಜನ್ ಕೊರತೆ ಎದುರಿಸುವಂತಾಗಿದೆ. ಮಹಾರಾಷ್ಟ್ರವು ತನ್ನಲ್ಲಿ ಉತ್ಪಾದನೆಯಾಗುವ ಆಕ್ಸಿಜನ್‌ನಲ್ಲಿ ಶೇ 50-80ರಷ್ಟನ್ನು ತನ್ನಲ್ಲಿಯೇ ಉಳಿಸಿಕೊಳ್ಳುತ್ತಿದೆ.

ಆಕ್ಸಿಜನ್‌ಗೆ ಬೇಡಿಕೆ

ಆಕ್ಸಿಜನ್‌ಗೆ ಬೇಡಿಕೆ

ಕರ್ನಾಟಕದಲ್ಲಿ ದಿನಕ್ಕೆ 7,000ಕ್ಕೂ ಅಧಿಕ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗುತ್ತಿದ್ದು, ತೀವ್ರ ಉಸಿರಾಟದ ಸಮಸ್ಯೆ ಉಳ್ಳವರಿಗೆ ಹೆಚ್ಚುವರಿ ಆಕ್ಸಿಜನ್ ಪೂರೈಕೆ ಮಾಡಬೇಕಿದೆ. ಇದರಿಂದ ದೈನಂದಿನ ಆಕ್ಸಿಜನ್ ಬೇಡಿಕೆ ನಾಲ್ಕು ಪಟ್ಟು ಹೆಚ್ಚಳವಾಗಿದೆ. ಕರ್ನಾಟಕಕ್ಕೆ ದಿನವೊಂದಕ್ಕೆ 400-500 ಮೆಟ್ರಿಕ್ ಟನ್ ದ್ರವ ಆಮ್ಲಜನಕದ ಅಗತ್ಯ ಬೀಳುತ್ತಿದೆ. ಮಾರ್ಚ್-ಏಪ್ರಿಲ್‌ನಲ್ಲಿ ಇದರ ಪ್ರಮಾಣ 100-150 ಮೆಟ್ರಿಕ್ ಟನ್‌ನಷ್ಟಿತ್ತು.

ಕರ್ನಾಟಕ; ಸೋಂಕಿತರಿಗಿಂತ ಗುಣಮುಖರಾದವರು ಅಧಿಕ

ಏರಿಕೆಯಾದ ಬೆಲೆ

ಏರಿಕೆಯಾದ ಬೆಲೆ

ರಾಷ್ಟ್ರೀಯ ಔಷಧೀಯ ದರ ಪ್ರಾಧಿಕಾರವು (ಎನ್‌ಪಿಪಿಎ) ಜನವರಿಯಲ್ಲಿ ಕ್ಯೂಬಿಕ್ ಮೀಟರ್‌ಗೆ ಗರಿಷ್ಠ 17.2 ರೂ ದರ ನಿಗದಿಪಡಿಸಿತ್ತು. ಈ ದರ ತೆಲಂಗಾಣದಲ್ಲಿ 10 ರೂ ಇದ್ದದ್ದು ಈಗ 50ರ ರೂ.ಗೆ ಮುಟ್ಟಿದೆ. ಕರ್ನಾಟಕದಲ್ಲಿ ಹಳೆಯ ಒಪ್ಪಂದದಡಿ ಆರಂಭದಲ್ಲಿ 13-18 ರೂ ಇದ್ದದ್ದು, ಹೊಸ ಒಪ್ಪಂದದಡಿ 24-25 ರೂ.ಗೆ ಏರಿದೆ. ಹಾಗೂ ಕೊರೊನಾ ವೈರಸ್ ತುರ್ತು ನಿರ್ವಹಣೆ ವೇಳೆ 40 ರೂ.ವರೆಗೂ ತಲುಪುತ್ತದೆ. ಗೋವಾದಲ್ಲಿ ಪ್ರತಿ ಕ್ಯೂಬಿಕ್ ಮೀಟರ್ ಆಕ್ಸಿಜನ್‌ಗೆ 3.5 ರೂ ದಿಂದ 5 ರೂ.ದಷ್ಟಿದೆ.

  Karnataka Covid ಪ್ರಕರಣ , ಸೋಂಕಿತರಿಗಿಂತ ಗುಣಮುಖರಾದವರೇ ಹೆಚ್ಚು | Oneindia Kannada
  ಆಕ್ಸಿಜನ್ ಕೊರತೆ ಇಲ್ಲ ಎಂದ ಸರ್ಕಾರ

  ಆಕ್ಸಿಜನ್ ಕೊರತೆ ಇಲ್ಲ ಎಂದ ಸರ್ಕಾರ

  ಬಳ್ಳಾರಿಯಲ್ಲಿರುವ ನಾಲ್ಕು ಕಂಪೆನಿಗಳು ಸೇರಿದಂತೆ ಏಳು ಕಂಪೆನಿಗಳು ಕರ್ನಾಟಕದ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಸುತ್ತಿವೆ. ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇಲ್ಲ ಎಂದಿರುವ ಸರ್ಕಾರ, ಉದ್ಯಮ ಕ್ಷೇತ್ರದಲ್ಲಿ ಬಳಕೆಯಾಗುತ್ತಿರುವ ಆಕ್ಸಿಜನ್‌ಅನ್ನು ಆಸ್ಪತ್ರೆಗಳಿಗೆ ಪೂರೈಸಲು ಸೂಚಿಸಿದೆ. ಸರ್ಕಾರ ಸೂಚಿಸುವ ಕೊರೊನಾ ವೈರಸ್ ರೋಗಗಳಿಗೆ ದಿನಕ್ಕೆ 7,000 ರೂ. ದರದಲ್ಲಿ ಆಕ್ಸಿಜನ್ ಸಹಿತ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳು ಒಪ್ಪಿಕೊಂಡಿವೆ.

  ಸರ್ಕಾರಿ ಆಸ್ಪತ್ರೆಗೆ ಬರುವ ಮೃತದೇಹಗಳಿಗೆ ಆಂಟಿಜೆನ್ ಪರೀಕ್ಷೆ

  English summary
  Sates are facing shortage of oxygen as the surge in coronavirus cases. In Karnataka demand for oxygen up four fold and prices doubled.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X