ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಾವಳಿ; ಅಗ್ನಿ ಅನಾಹುತಗಳನ್ನು ತಪ್ಪಿಸಲು ಮಾರ್ಗಸೂಚಿಗಳು

|
Google Oneindia Kannada News

ಬೆಂಗಳೂರು, ಅಕ್ಟೋಬರ್ 18; ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಜನರು ಸಿದ್ಧರಾಗುತ್ತಿದ್ದಾರೆ. ಹಬ್ಬದ ಸಮಯದಲ್ಲಿ ಸಂಭವಿಸಬಹುದಾದ ಅಗ್ನಿ ಅಪಘಾತ ಹಾಗೂ ಇತರೆ ಅನಾಹುತಗಳನ್ನು ತಡೆಗಟ್ಟಲು ಹಾಗೂ ನಿಭಾಯಿಸಲು ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ಪೊಲೀಸ್ ಮಹಾ ನಿರ್ದೇಶಕರು ಹಾಗೂ ಮಹಾ ನಿರ್ದೇಶಕರ ಕಚೇರಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಈ ಕುರಿತು ಸುತ್ತೋಲೆ ಹೊರಡಿಸಿದೆ. ಯಾವ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ಮಾಹಿತಿ ನೀಡಿದೆ. 24/10/2022 ರಿಂದ 26/10/2022ರ ತನಕ ನಡೆಯಲಿರುವ ದೀಪಾವಳಿ ಹಬ್ಬದ ಸಮಯದಲ್ಲಿ ಸಂಭವಿಸಬಹುದಾದದ ಅಗ್ನಿ ಅಪಘಾತ ಹಾಗೂ ಇತರೆ ಅನಾಹುತಗಳನ್ನು ತಡೆಗಟ್ಟಲು ಹಾಗೂ ನಿಭಾಯಿಸಲು ಸೂಚನೆಗಳನ್ನು ನೀಡಲಾಗಿದೆ.

ದೀಪಾವಳಿ ವಿಶೇಷ ಅಭಿಯಾನ: ಸಣ್ಣ ವ್ಯಾಪಾರಿಗಳಿಗಾಗಿ ವೋಕಲ್ ಫಾರ್ ಲೋಕಲ್ ದೀಪಾವಳಿ ವಿಶೇಷ ಅಭಿಯಾನ: ಸಣ್ಣ ವ್ಯಾಪಾರಿಗಳಿಗಾಗಿ ವೋಕಲ್ ಫಾರ್ ಲೋಕಲ್

ಸರ್ಕಾರಿ ಆದೇಶ ಸಂಖ್ಯೆ ಹೆಚ್‌ಡಿ 1069 ಪಿಸಿಸಿ 79 ದಿನಾಂಕ 11-04-1980ರಲ್ಲಿ ನೀಡಿದ ಸೂಚನೆಯಂತೆ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕಿರಿದಾದ, ಜನನಿಬಿಡ ಮತ್ತು ವಾಣಿಜ್ಯ ಸಂಕೀರ್ಣಗಳ ಸ್ಥಳಗಳಲ್ಲಿ ಯಾವುದೇ ಖಾಯಂ ಅಂಗಡಿ ಅಥವಾ ಕಟ್ಟಡಗಳಲ್ಲಿ ಚಿಲ್ಲರೆ ಪಟಾಕಿ ಮಾರಾಟ ಮಳಿಗೆಗಳನ್ನು ತೆರೆಯಲು, ಪಟಾಕಿಗಳ ದಾಸ್ತಾನು ಹಾಗೂ ಮಾರಾಟಕ್ಕೆ ಅನುಮತಿ ನೀಡಬಾರದು.

ದೀಪಾವಳಿ ಹಬ್ಬ: ಪರಿಸರ ಸ್ನೇಹಿ ಪಟಾಕಿ ಹೊಡೆಯಲು ಮಾತ್ರ ಅವಕಾಶ: ಮಾಲಿನ್ಯ ಮಂಡಳಿಯಿಂದ ಶಾಕ್ದೀಪಾವಳಿ ಹಬ್ಬ: ಪರಿಸರ ಸ್ನೇಹಿ ಪಟಾಕಿ ಹೊಡೆಯಲು ಮಾತ್ರ ಅವಕಾಶ: ಮಾಲಿನ್ಯ ಮಂಡಳಿಯಿಂದ ಶಾಕ್

ಪಟಾಕಿಗಳನ್ನು ಸರ್ಕಾರದ ಅಧಿಕಾರಿಗಳು ನಿಗದಿಪಡಿಸಿದ ತೆರೆದ ಪ್ರದೇಶಗಳಲ್ಲಿ, ಸ್ಥಳೀಯ ಆಡಳಿತ ಅನುಮತಿ ನೀಡಿರುವ ತಾತ್ಕಾಲಿಕ ಮಳಿಗೆಗಳಲ್ಲಿ ಮಾತ್ರ ದಾಸ್ತಾನು ಮಾಡಲು ಹಾಗೂ ಮಾರಾಟ ಮಾಡಲು ಅನುಮತಿ ನೀಡಬಹುದು. ಈ ಸುತ್ತೋಲೆಯಲ್ಲಿನ ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು. ಸೂಚನೆಗಳನ್ನು ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ದೀಪಾವಳಿ 2022: ಅ.23 ರಂದು ಅಯೋಧ್ಯೆಯ ದೀಪೋತ್ಸವದಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ಮೋದಿದೀಪಾವಳಿ 2022: ಅ.23 ರಂದು ಅಯೋಧ್ಯೆಯ ದೀಪೋತ್ಸವದಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ಮೋದಿ

ಪಟಾಕಿ ಅಂಗಡಿಗಳಿಗೆ ಶುಲ್ಕ ಎಷ್ಟು?

ಪಟಾಕಿ ಅಂಗಡಿಗಳಿಗೆ ಶುಲ್ಕ ಎಷ್ಟು?

ಜಿಲ್ಲಾ ದಂಡಾಧಿಕಾರಿ ಅಥವಾ ಪೊಲೀಸ್ ಆಯುಕ್ತರು ಸೂಚಿಸುವ ತೆರದ ಪ್ರದೇಶಗಳನ್ನು ಪರೀಕ್ಷಿಸಿ ಸೂಕ್ತ ಸುರಕ್ಷತಾ ಕ್ರಮಗಳ ಬಗ್ಗೆ ವಿವರ ನೀಡಲು ಕೋರಿಕೆ ಬಂದಲ್ಲಿ ಇಲಾಖಾ ನಿಯಮದಂತೆ ಹಾಗೂ ಈ ಮೊದಲು ನೀಡಿದ ಸುತ್ತೋಲೆಗಳಂತೆ ನಿಮ್ಮ ಅಭಿಪ್ರಾಯವನ್ನು ಸದರಿ ಅಧಿಕಾರಿಗಳಿಗೆ ಮಾತ್ರ ತಿಳಿಸತಕ್ಕದ್ದು ಹಾಗೂ ಅಂತಹ ಸಂದರ್ಭದಲ್ಲಿ ಯಾವುದೇ ಶುಲ್ಕವನ್ನು ನೇರವಾಗಿ ವಸೂಲಿ ಮಾಡುವ ಅವಶ್ಯಕತೆ ಇಲ್ಲ.

ಜಿಲ್ಲಾ ದಂಡಾಧಿಕಾರಿ ಅಥವಾ ಪೊಲೀಸ್ ಆಯುಕ್ತರವರಿಗೆ ಪ್ರತಿಯೊಬ್ಬ ಅರ್ಜಿದಾರರಿಂದ ಪರವಾನಿಗೆ ನೀಡುವಾಗ ಸರ್ಕಾರಿ ಆದೇಶ ಸಂಖ್ಯೆಯ ಪ್ರಕಾರ ನಿಗದಿತ ಶುಲ್ಕ ರೂ. 5,000ಗಳನ್ನು ಸರ್ಕಾರದ ಬೊಕ್ಕಸಕ್ಕೆ ಜಮಾ ಮಾಡುವಂತೆ ಕೋರತಕ್ಕದ್ದು. ಒಂದು ವೇಳೆ ಸದರಿ ಪ್ರಾಧಿಕಾರವು ಅಗ್ನಿಶಾಮಕ ಸೇವಾ ಇಲಾಖೆಯಿಂದ ಪ್ರತ್ಯೇಕ ಆಕ್ಷೇಪಣಾ ರಹಿತ ಪ್ರಮಾಣ ಪತ್ರ ಕೋರಿದ್ದಲ್ಲಿ ಅಂತಹ ಸಂದರ್ಭಗಳಲ್ಲಿ ನಿಗದಿತ ಶುಲ್ಕ ರೂ. 5,000 ಅರ್ಜಿದಾರರಿಂದ ವಸೂಲಿ ಮಾಡಿ ಖಜಾನೆಗೆ ಜಮಾ ಮಾಡತಕ್ಕದ್ದು ಹಾಗೂ ಈ ಎರಡು ಸಂದರ್ಭಗಳಲ್ಲಿ ವಿವರಗಳನ್ನು ಈ ಕಚೇರಿಗೆ ಸಲ್ಲಿಸತಕ್ಕದ್ದು.

ಮಳಿಗೆ ಹೇಗೆ ನಿರ್ಮಾಣ ಮಾಡಬೇಕು?

ಮಳಿಗೆ ಹೇಗೆ ನಿರ್ಮಾಣ ಮಾಡಬೇಕು?

ತಾತ್ಕಾಲಿಕ ಪಟಾಕಿ ಸಂಗ್ರಹಣೆ ಮಾಡಿ ಮಾರಾಟ ಮಾಡಲು ನಿರ್ಮಿಸಬೇಕಾದ ಮಳಿಗೆಗಳಿಗೂ ಮಾರ್ಗಸೂಚಿಯಲ್ಲಿ ವಿವರಗಳನ್ನು ನೀಡಲಾಗಿದೆ. ಮಳಿಗೆಗಳಲ್ಲಿ ಎರಡು ಕಡೆಯಿಂದ ಸರಾಗವಾಗಿ ಗಾಳಿಯಾಡುವಂತಿರಬೇಕು. ಮಳಿಗೆಗಳನ್ನು ನಿರ್ಮಿಸಲು ಉಪಯೋಗಿಸುವ ಸಾಮಗ್ರಿಗಳು ಸುಲಭವಾಗಿ ಬೆಂಕಿ ಹತ್ತಿಕೊಳ್ಳುವ ರೀತಿಯದ್ದಾಗಿರಬಾರದು. ಸಾಧ್ಯವಾದಷ್ಟೂ ಬೆಂಕಿಯನ್ನು ತಡೆಗಟ್ಟುವ ಸಾಮಗ್ರಿಗಳನ್ನು ನಿರ್ಮಾಣಕ್ಕೆ ಉಪಯೋಗಿಸಬೇಕು.

ಪ್ರತಿಯೊಂದು ಮಳಿಗೆಗೆ ಮುಂದಿನಿಂದ ಹಾಗೂ ಹಿಂದಿನಿಂದ ಪ್ರವೇಶಿಸುವ ವ್ಯವಸ್ಥೆ ಇರಬೇಕು. ಇದರಿಂದ ಅಪಘಾತ ಸಂದರ್ಭದಲ್ಲಿ ಮಳಿಗೆಗಳನ್ನು ಪರಿಸ್ಥಿತಿಗನುಗುಣವಾಗಿ ಪ್ರವೇಶಿಸಿ ಒಳಗಿದ್ದವರನ್ನು ರಕ್ಷಿಸಬಹುದು ಹಾಗೂ ಅವಶ್ಯಕತೆ ಬಿದ್ದರೆ ಮಳಿಗೆಗಳನ್ನು ಒಡೆದು ಒಳ ಪ್ರವೇಶಿಸಬಹುದು. ಪ್ರತಿಯೊಂದು ಮಳಿಗೆಗಳ ಗಾತ್ರ 10x10 ಚದರ ಅಡಿಗೆ ಸೀಮಿತಗೊಳಿಸಿರಬೇಕು ಮತ್ತು ಒಳಗೆ ಯಾವುದೇ ಹೆಚ್ಚಿನ ದಾಸ್ತಾನಿನ ವ್ಯವಸ್ಥೆ ಇರಬಾರದು.

ಅಗ್ನಿ ಶಾಮಕ ವ್ಯವಸ್ಥೆ ಇರಬೇಕು

ಅಗ್ನಿ ಶಾಮಕ ವ್ಯವಸ್ಥೆ ಇರಬೇಕು

ಪ್ರತಿಯೊಂದು ಮಳಿಗೆಯಲ್ಲಿ ಒಂದು 9 ಲೀಟರ್ ಸಾಮರ್ಥ್ಯದ ವಾಟರ್‌ ಪ್ರಜರ್‌ ಮಾದರಿ ಅಗ್ನಿನಂದಕ ಹಾಗೂ ಎರಡು ಬಕೆಟ್‌ಗಳಲ್ಲಿ ನೀರನ್ನು ಇಟ್ಟಿರಬೇಕು. ಪ್ರತಿಯೊಂದು ಮಳಿಗೆ ಪಕ್ಕದಲ್ಲಿ ಎರಡು ಡ್ರಮ್‌ನಲ್ಲಿ ಕನಿಷ್ಟ 400 ಲೀಟರ್ ನೀರನ್ನು ಶೇಖರಿಸಿಟ್ಟಿರಬೇಕು. ಮಳಿಗೆಯಲ್ಲಿ ಅಡುಗೆ ಅಥವಾ ಧೂಮಪಾನಕ್ಕೆ ಅವಕಾಶ ನೀಡಬಾರದು ಎಂಬಂತೆ ಸಂಬಂಧಿತ ಸೂಚನಾ ಫಲಕವನ್ನು ಹಾಕಿರಬೇಕು.

ಪಟಾಕಿಗಳನ್ನು ಹಗಲಿನ ವೇಳೆಯಲ್ಲಿ ಮಾತ್ರ ಮಾರಾಟ ಮಾಡುವಂತೆ ತಿಳಿಸಬೇಕು. ರಾತ್ರಿ ವೇಳೆ ಮಳಿಗೆಯಲ್ಲಿ ಯಾರೂ ಮಲಗಬಾರದೆಂದು ಸೂಚಿಸಬೇಕು. ಅಗ್ನಿಶಾಮಕ ಠಾಣೆಯಲ್ಲಿ ಎಲ್ಲಾ ವಾಹನಗಳನ್ನು ಸುಸ್ಥಿತಿಯಲ್ಲಿಟ್ಟಿರಬೇಕು ಹಾಗೂ ಯಾವುದೇ ಕರೆ ಬಂದರೆ ಕೂಡಲೇ ಕಾರ್ಯ ಪ್ರವೃತ್ತರಾಗಬೇಕು.

ದೀಪಾವಳಿ ಸಮಯದಲ್ಲಿ ಅಧಿಕಾರಿ/ ಸಿಬ್ಬಂದಿಗಳಿಗೆ ತುರ್ತು ಸಂದರ್ಭ ಹೊರತು ಪಡಿಸಿ ಯಾವುದೇ ರಜೆ, ವಾರದ ರಜೆಯನ್ನು ನೀಡಬಾರದು ಹಾಗೂ ಕರ್ತವ್ಯದಲ್ಲಿನ ಸಿಬ್ಬಂದಿಗಳು ಸದಾ ಜಾಗರೂಕರಾಗಿರಬೇಕು.

ಪಟಾಕಿಗಳ ಅನಧಿಕೃತ ಮಾರಾಟ

ಪಟಾಕಿಗಳ ಅನಧಿಕೃತ ಮಾರಾಟ

ಅಧಿಕಾರಿಗಳು ಠಾಣೆಯನ್ನು ಬಿಟ್ಟು ನಿರೀಕ್ಷಣೆ ಹಾಗೂ ಇತರೆ ಕೆಲಸಗಳಿಗೆ ಹೊರ ಹೋಗಬಾರದು ಹಾಗೂ ಸದಾ 24 ಗಂಟೆಗಳಲ್ಲೂ ಕರೆಗೆ ತ್ವರಿತವಾಗಿ ಹಾಜರಾಗಲು ಲಭ್ಯವಿರಬೇಕು. ಅನಧಿಕೃತ ಪಟಾಕಿ ಮಾರಾಟದ ವ್ಯವಹಾರವು ಗಮನಕ್ಕೆ ಬಂದರೆ ಕೂಡಲೇ ಸಂಬಂಧಪಟ್ಟ ಪರವಾನಿಗೆ ನೀಡುವ ಅಧಿಕಾರಿಗಳ ಗಮನಕ್ಕೆ ತರತಕ್ಕದ್ದು.

ದೇಶಾದ್ಯಾಂತ್ಯ ಹರಡಿರುವ ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಕಡ್ಡಾಯವಾಗಿ ಮುಖಗವಸ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಆಗಾಗ ಸಾಬೂನು ಸ್ಯಾನಿಟೈಜರ್‌ನಿಂದ ಕೈ ಸ್ವಚ್ಛಗೊಳಿಸುವುದು ಹಾಗೂ ಕೋವಿಡ್-19 ಸಾಂಕ್ರಮಿಕ ರೋಗದ ಬಗ್ಗೆ ಸರ್ಕಾರವು ಹೊರಡಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

English summary
Fire engine department guidelines for Deepavali festival. Guidelines also directed how to set up fire crackers shops.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X