ಬೀದರ್‌ನಲ್ಲಿ ಹಕ್ಕಿ ಜ್ವರ, 1 ಲಕ್ಷ ಕೋಳಿ ಕೊಲ್ಲಲು ಆದೇಶ

Posted By:
Subscribe to Oneindia Kannada

ಬೀದರ್, ಮೇ 09 : ಬೀದರ್ ಜಿಲ್ಲೆಯ ಹುಮನಾಬಾದ್‌ ತಾಲೂಕಿನ ಮೇಳಕೇರಾ ಗ್ರಾಮದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು 1.5 ಲಕ್ಷ ಕೋಳಿಗಳನ್ನು ಕೊಲ್ಲಲು ಆದೇಶ ನೀಡಲಾಗಿದೆ. ಜ್ವರದಿಂದಾಗಿ 20 ದಿನಗಳಲ್ಲಿ 35 ಸಾವಿರ ಕೋಳಿಗಳು ಸಾವಿನ್ನಪ್ಪಿವೆ.

ಮೆಳಕೇರಾ ಗ್ರಾಮದಲ್ಲಿನ ರಮೇಶ್‌ ಗುಪ್ತಾ ಅವರ ಕೋಳಿ ಫಾರಂನಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಬೆಂಗಳೂರು ಮತ್ತು ಭೋಪಾಲ್ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದಾಗಲೂ ಇದು ಹಕ್ಕಿ ಜ್ವರ (ಎಚ್‌5 ಎನ್‌1) ಎಂಬುದು ಸಾಬೀತಾಗಿದೆ. ಆದ್ದರಿಂದ, ಪಶುಸಂಗೋಪನಾ ಇಲಾಖೆ ಕೋಳಿಗಳನ್ನು ಕೊಲ್ಲಲು ಆದೇಶ ನೀಡಿದೆ. [ಮಂಗಟ್ಟೆ ಹಕ್ಕಿಯನ್ನು 'ಮಣ್ಣು' ಮಾಡಿದ ಭಟ್ಟರು]

bird

ರಮೇಶ್‌ ಗುಪ್ತಾ ಅವರ ಕೋಳಿ ಫಾರಂನಲ್ಲಿನ 1.5 ಲಕ್ಷ ಕೋಳಿಗಳನ್ನು ಕೊಲ್ಲಲಾಗುತ್ತದೆ ಮತ್ತು 80 ಸಾವಿರ ಮೊಟ್ಟೆಗಳನ್ನು ನಾಶಪಡಿಸಲಾಗುತ್ತದೆ. ಫಾರಂನ ಸುತ್ತಮುತ್ತಲಿನ 1 ಕಿ.ಮೀ ವ್ಯಾಪ್ತಿಯಲ್ಲಿರುವ ಎಲ್ಲ ಕೋಳಿಗಳನ್ನು ಕೊಲ್ಲಲು ಸೂಚನೆ ನೀಡಲಾಗಿದೆ. ಫಾರಂ ಕೋಳಿಗಳು ಮಾತ್ರವಲ್ಲದೇ ಮನೆಗಳಲ್ಲಿ ಸಾಕಿದ ಕೋಳಿಗಳನ್ನೂ ನಾಶಪಡಿಸಬೇಕು ಎಂದು ನಿರ್ದೇಶನ ನೀಡಲಾಗಿದೆ. [ಹೊಸ ವರ್ಷದ ಸಂಭ್ರಮದಲ್ಲಿ ಪುರ್ರನೇ ಬಂದ ಅನಿರೀಕ್ಷಿತ ಅತಿಥಿ!]

ಸಚಿವರಿಂದ ತುರ್ತು ಸಭೆ : ಬೀದರ್‌ನಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಪಶುಸಂಗೋಪನಾ ಸಚಿವ ಎ.ಮಂಜು ಅವರು ಭಾನುವಾರ ತುರ್ತು ಸಭೆ ನಡೆಸಿದರು. ಸಭೆಯ ಬಳಿಕ ಮಾತನಾಡಿದ ಅವರು, 'ಹಕ್ಕಿಜ್ವರ ರಾಜ್ಯಾದ್ಯಂತ ಹರಡದಂತೆ ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ. ನವದೆಹಲಿಯಿಂದ ವಿಶೇಷ ತಂಡ ಆಗಮಿಸಲಿದ್ದು, ಕೋಳಿಗಳನ್ನು ನಾಶಪಡಿಸಲು ಇಲ್ಲಿನ ಸಿಬ್ಬಂದಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡಲಿದೆ' ಎಂದು ಹೇಳಿದರು.

ರಾಜ್ಯದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. 2006ರಲ್ಲಿ ಹೆಸರಘಟ್ಟದಲ್ಲಿ ಜ್ವರ ಕಾಣಿಸಿಕೊಂಡಿತ್ತು. 2012ರಲ್ಲಿ ಹೆಸರಘಟ್ಟದ ರಾಷ್ಟ್ರೀಯ ಕುಕ್ಕುಟ ಅಭಿವೃದ್ಧಿ ಸಂಸ್ಥೆಯಲ್ಲಿ ಸಾವಿರಾರು ಕೋಳಿಗಳು ಜ್ವರಕ್ಕೆ ಬಲಿಯಾಗಿದ್ದವು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Bird flu alert Bidar district of Karnataka. Flu found in poultry farm at Melkera village of Humnabad taluk. 1.5 lakh heads of chicken of the private farm will now be culled. Poultry farm owners have been instructed to take precautionary measures to prevent infection of chicken with H5N1 virus.
Please Wait while comments are loading...