ಮಲ್ಪೆ ಕಡಲ ತೀರದಲ್ಲಿ ಬೃಹದಾಕಾರದ ತಿಮಿಂಗಿಲ ಪತ್ತೆ

ಉಡುಪಿ, ಆಗಸ್ಟ್ 7 : ಮಲ್ಪೆ ಸಮುದ್ರ ತೀರದಲ್ಲಿ ಬೃಹದಾಕಾರದ ತಿಮಿಂಗಿಲ ಕೊಳೆತ ಸ್ಥಿತಿಯಲ್ಲಿ ಗುರುವಾರ ಪತ್ತೆಯಾಗಿತ್ತು. ಕೆಲವು ದಿನಗಳ ಹಿಂದೆ ತಣ್ಣೀರು ಬಾವಿ ಕಡಲ ತೀರದಲ್ಲಿ ಸತ್ತ ತಿಮಿಂಗಿಲ ಪತ್ತೆಯಾಗಿತ್ತು. ಕೆಲವೇ ತಿಂಗಳ ಅಂತರದಲ್ಲಿ ಪತ್ತೆಯಾದ ಮೂರನೇ ತಿಮಿಂಗಿಲವಿದಾಗಿದೆ.

ಸ್ಥಳೀಯರು ಗುರುವಾರ ಬೆಳಗ್ಗೆ ಕಡಲ ತೀರದಲ್ಲಿ ಸತ್ತು ಬಿದ್ದಿರುವ ತಿಮಿಂಗಿಲವನ್ನು ಪತ್ತೆ ಹಚ್ಚಿದರು. ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ತಿಮಿಂಗಿಲದ ಮೈಮೇಲೆ ಗಾಯದ ಗುರುತುಗಳಿದ್ದವು ಮತ್ತು ಬಾಲ ಕತ್ತರಿಸಿ ಹೋಗಿತ್ತು. ಹಡಗು ಡಿಕ್ಕಿ ಹೊಡೆದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. [ಹೊಸಬೆಟ್ಟು ಕಡಲ ತೀರಕ್ಕೆ ಡಾಲ್ಫಿನ್]

udupi

ಘಟನೆ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಉಡುಪಿ ನಗರ ಸಭೆಯ ಸಿಬ್ಬಂದಿಗಳು ಕಡಲ ತೀರದಲ್ಲಿಯೇ ತಿಮಿಂಗಿಲವನ್ನು ಹೂಳಿದರು. ತಿಮಿಂಗಿಲವನ್ನು ನೋಡಲು ನೂರಾರು ಜನರು ಕಡಲ ತೀರಕ್ಕೆ ಆಗಮಿಸಿದ್ದರು. [ತಣ್ಣೀರುಬಾವಿ ಕಡಲ ತೀರಕ್ಕೆ ಬಂದ ತಿಮಿಂಗಿಲ]

ಜುಲೈ 29ರಂದು ಮೃತಪಟ್ಟ ನೀಲಿ ತಿಮಿಂಗಿಲವೊಂದು ತಣ್ಣೀರುಬಾವಿ ಕಡಲ ತೀರಕ್ಕೆ ತೇಲಿಕೊಂಡು ಬಂದು ಬಿದ್ದಿತ್ತು. ತಿಮಿಂಗಿಲದ ಮೈಮೇಲೆ ಗಾಯಗಳಾಗಿದ್ದು, ಹಡಗು ಡಿಕ್ಕಿ ಹೊಡೆದು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು.

ಜೂನ್ 18ರಂದು ಸುರತ್ಕಲ್ ಸಮೀಪದ ಹೊಸಬೆಟ್ಟುವಿನ ಕಡಲ ತೀರನಲ್ಲಿ 4 ಅಡಿ ಉದ್ದದ ಡಾಲ್ಫಿನ್‌ ಒಂದು ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪ್ರಾಥಮಿಕ ಚಿಕಿತ್ಸೆ ನೀಡಿ ಅದನ್ನು ಪುನಃ ಸಮುದ್ರಕ್ಕೆ ಬಿಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+