DK Shivakumar: ‌ಏಕಾಏಕಿ ಮಹಿಳೆಯರನ್ನು ತಳ್ಳಿದ ಡಿಕೆ ಶಿವಕುಮಾರ್: ಬಿಜೆಪಿ ಹಂಚಿಕೊಂಡ ವಿಡಿಯೋ ನೋಡಿ

ಬೆಂಗಳೂರು, ಡಿಸೆಂಬರ್‌ 27: ಮಹಾತ್ಮ ಗಾಂಧಿ ನೇತೃತ್ವದಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್​ ಅಧಿವೇಶನಕ್ಕೆ ನೂರು ವರ್ಷದ ತುಂಬಿದ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿ ಬೃಹತ್​ ಸಮಾವೇಶವನ್ನು ಕಾಂಗ್ರೆಸ್​ ಆಯೋಜನೆ ಮಾಡಿತ್ತು. ಈ ಅಧಿವೇಶನದ ಸಂದರ್ಭದಲ್ಲಿ ಡಿ ಕೆ ಶಿವಕುಮಾರ್‌ ಮಹಿಳೆಯರನ್ನ ತಳ್ಳಿದ್ದು, ಬಿಜೆಪಿ ವಿಡಿಯೋವನ್ನ ಹಂಚಿಕೊಂಡಿದೆ.

ಈ ಕುರಿತು ಟ್ವೀಟ್‌ ನಲ್ಲಿ ಕರ್ನಾಟಕ ಬಿಜೆಪಿ ವಿಡಿಯೋ ಹಂಚಿಕೊಂಡಿದ್ದು, ಕರ್ನಾಟಕ ಡಿಸಿಎಂ ಡಿಕೆ ಶಿವಕುಮಾರ್ ಗೂಂಡಾನಂತೆ ವರ್ತಿಸಿದ್ದಾರೆ ಮತ್ತು ತನ್ನ ಬಾಸ್ ಅನ್ನು ಸಮಾಧಾನಪಡಿಸಲು ಮಹಿಳಾ ಕಾಂಗ್ರೆಸ್ ಕಾರ್ಯಕರ್ತನನ್ನು ತಳ್ಳಿದ್ದಾರೆ. ಇದು ಕಾಂಗ್ರೆಸ್ ಆಡಳಿತದಲ್ಲಿ ಮಹಿಳೆಯರಿಗೆ ಆದ ಅಗೌರವ. ತಮ್ಮ ಕಾರ್ಯಕರ್ತರೇ ಇಂತಹ ಅವಮಾನವನ್ನು ಎದುರಿಸಿದರೆ, ಕಾಂಗ್ರೆಸ್ ಆಡಳಿತದಲ್ಲಿ ದೇಶಾದ್ಯಂತ ಮಹಿಳೆಯರು ಸುರಕ್ಷತೆಯನ್ನು ಹೇಗೆ ನಿರೀಕ್ಷಿಸುತ್ತಾರೆ? ಎಂದು ಬಿಜೆಪಿ ಪ್ರಶ್ನಿಸಿದೆ. ಈ ಕುರಿತು ಬಿಜೆಪಿಯೂ ವಿಡಿಯೋವನ್ನ ಹಂಚಿಕೊಂಡಿದೆ.

DCM DK Shivakumar Behaved Like A Goon BJP says

ದಲಿತರು ಎಂದರೆ ಕಾಂಗ್ರೆಸ್‌ ಹಾಗೂ ಕರ್ನಾಟಕ ಕಾಂಗ್ರೆಸ್‌ ಕಸಕ್ಕಿಂತಲೂ ಕೀಳಾಗಿ ನೋಡುತ್ತಲೇ ಇದೆ. ವೋಟ್ ಬ್ಯಾಂಕ್ ಗಾಗಿ ದಲಿತರನ್ನು ದುರುಪಯೋಗ ಪಡಿಸಿಕೊಂಡು ಅವರನ್ನು ಸದಾಕಾಲವೂ ತುಳಿಯುತ್ತಿದೆ. ಅಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಂದ ಹಿಡಿದು ಇಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್‌ ಖರ್ಗೆ ಅವರವರೆಗೂ ಅವಮಾನ ಮಾಡುತ್ತಲೇ ಇದೆ. ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದಲಿತ ವಿರೋಧಿ ನಡೆಯನ್ನು ಆ ದಿನಗಳ ಡಿ ಕೆ ಶಿವಕುಮಾರ್‌ ಅವರು ಅನುಸರಿಸುತ್ತಿದ್ದಾರೆ ಎಂದು ಬಿಜೆಪಿ ಇನ್ನೊಂದು ವಿಡಿಯೋವನ್ನ ಹಂಚಿಕೊಂಡು ವಾಗ್ದಾಳಿ ನಡೆಸಿದೆ.

ಹಾಲಿನ ದರ ಏರಿಕೆ: ಬಿಜೆಪಿ ಕಿಡಿ

ಇನ್ನೊಂದು ಪೋಸ್ಟ್‌ ಮೂಲಕ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ರಾಜ್ಯ ಬಿಜೆಪಿ, ರೈತರ ಪರ ಧ್ವನಿ ಎತ್ತಿದೆ. ರೈತರ ಹೆಸರಲ್ಲಿ ಲೂಟಿಕೋರ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಂದ ಹಗಲು ದರೋಡೆ ಮಾಡುತ್ತಿದೆ. ಹಾಲು ಉತ್ಪಾದನೆ ಹೆಚ್ಚಳ ಆಗಿದೆ ಎಂದು ಊಸರವಳ್ಳಿ ನಾಟಕ ಮಾಡಿ ದರ ಹೆಚ್ಚಿಸಿದ್ದ ಭ್ರಷ್ಟ ಸಿದ್ದರಾಮಯ್ಯ ಸರ್ಕಾರ, ಇದೀಗ 50ml ಹಾಲನ್ನು ಕಡಿತಗೊಳಿಸಿ ₹5 ದರ ಏರಿಕೆ ಮಾಡಿದೆ. ಹೊಸ ವರ್ಷಕ್ಕೆ ಜನರಿಗೆ ಸಿಹಿ ಸುದ್ಧಿ ನೀಡಬೇಕಾದ ಸರ್ಕಾರ, ಸಂಕ್ರಾಂತಿಗೆ ಕಹಿ ಕೊಟ್ಟು ತಾನು ಮಾತ್ರ ಬೆಲ್ಲ ತಿನ್ನುತ್ತಿದೆ ಕಾಂಗ್ರೆಸ್ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಕಾಂಗ್ರೆಸ್ ಭ್ರಷ್ಟಚಾರಕ್ಕೆ ಮತ್ತೊಬ್ಬ ಗುತ್ತಿಗೆದಾರ ಬಲಿ !

ಕಾಂಗ್ರೆಸ್‌ ಸಚಿವ ಪ್ರಿಯಾಂಕ್‌ ಖರ್ಗೆ ಆಪ್ತರು ಕಮಿಷನ್‌ ಹಣಕ್ಕಾಗಿ ಬೇಡಿಕೆ ಇಟ್ಟ ಕಾರಣ ಬೀದರ್‌ನಲ್ಲಿ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಳವಳಕಾರಿಯಾಗಿದೆ ಎಂದು ಬಿಜೆಪಿ ಹೇಳಿದೆ. ಲಂಚಬಾಕ ಸರ್ಕಾರದಿಂದಾಗಿ ಗುತ್ತಿಗೆದಾರರು, ಪೊಲೀಸ್‌ ಅಧಿಕಾರಿಗಳು, ಸರ್ಕಾರಿ ನೌಕರರು ಜೀವ ಕಳೆದುಕೊಳ್ಳುತ್ತಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ ಪ್ರಿಯಾಂಕ್ ಖರ್ಗೆಯ ಆಪ್ತ, ಕಲಬುರಗಿಯ ಮಾಜಿ ಕಾರ್ಪೊರೇಟರ್ ರಾಜು ಕಪನೂರು ಸೇರಿದಂತೆ 8 ಜನರ ಮೇಲೆ ಗಂಭೀರ ಆರೋಪ ಹೊರಿಸಿ ಡೆತ್‌ ನೋಟ್‌ ಬರೆದಿಟ್ಟಿದ್ದಾರೆ. ಸಚಿವರ ಆಪ್ತರೊಬ್ಬರು ಕೋಟಿ ಕೋಟಿ ಹಣಕ್ಕೆ ಬೇಡಿಕೆ ಇಡುತ್ತಾರೆ ಎಂದಾದರೆ ಖಂಡಿತವಾಗಿಯೂ ಇಲ್ಲಿ ಸಚಿವರ ಕೈವಾಡ ಇದ್ದೇ ಇರುತ್ತದೆ. ಸಚಿವ ಪ್ರಿಯಾಂಕ್‌ ಖರ್ಗೆ ಅವರು ಈ ಕೂಡಲೇ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು ಎಂದು ಬಿಜೆಪಿ ಕಿಡಿಕಾರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+