ಬಾಗಲಕೋಟೆ ಡಿಸಿಸಿ ಬ್ಯಾಂಕಿನಲ್ಲಿ 5ದಿನದಲ್ಲಿ 162 ಕೋಟಿ ಜಮೆ, ತನಿಖೆ

Posted By:
Subscribe to Oneindia Kannada

ಬಾಗಲಕೋಟೆ, ಡಿಸೆಂಬರ್ 26: ಅಪನಗದೀಕರಣ ಹಿನ್ನೆಲೆ ಬಾಗಲಕೋಟೆಯ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಗೆ ಇಡಿ ಹಿರಿಯ ಅಧಿಕಾರಿಯೊಬ್ಬರು ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದ್ದು, ನೋಟು ಅಮಾನ್ಯ ನಡೆದ ಐದು ದಿನಗಳಲ್ಲಿ 162 ಕೋಟಿ ಬ್ಯಾಂಕಿನಲ್ಲಿ ಜಮೆ ಯಾಗಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.

ನವೆಂಬರ್ 8ರ ರಾತ್ರಿ 500-1000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದ ನಂತರ ನವೆಂಬರ್ 9-14 ವರೆಗೆ ಡಿಸಿಸಿ ಬ್ಯಾಂಕಿನಲ್ಲಿ ಐದು ದಿನಗಳಲ್ಲಿ 162 ಕೋಟಿ ಹಣ ಜಮೆಯಾಗಿದ್ದು, ಆ ವೇಳೆಯಲ್ಲಿ ವ್ಯವಹಾರಗಳಿಗೆ ಸರಿಯಾದ ನಿರ್ಬಂಧ ಹೇರದ ಪರಿಣಾಮ ಡಿಸಿಸಿ ಬ್ಯಾಂಕಿನಡಿ ಬರುವ ಸೌಹಾರ್ದ ಬ್ಯಾಂಕುಗಳು, ಪತ್ತಿನ ಸಹಕಾರಿ ಬ್ಯಾಂಕುಗಳು, ಕೃಷಿ ಪತ್ತಿನ ಸಹಕಾರಿ ಸಂಘ, ನೇಕಾರರ ಸಹಕಾರಿ ಸಂಘ ಮೂಲಕ ಒಟ್ಟು 162 ಕೋಟಿ ಹಣ ಜಮೆಯಾಗಿದೆ. ಅದರೆ ಡಿಡಿಸಿ ಬ್ಯಾಂಕಿನ ಇತರ ಶಾಖೆಗಳಿಂದ ಜಮಿಯಾಗಿಲ್ಲ.[ನೋಟು ರದ್ದು ದೊಡ್ಡ ಮಟ್ಟದಲ್ಲಿ ಯಶಸ್ಸು: ಅಟಾರ್ನಿ ಜನರಲ್]

DCC bank in Bagalkot alone had cash deposits of Rs 162 crore between Nov 9-14

ಡಿಸಿಸಿ ಬ್ಯಾಂಕಿನಲ್ಲಿ ನಿರ್ದೇಶಕರೆಲ್ಲರು ಬಹುತೇಕರು ಜನಪ್ರತಿನಿಧಿಗಳೇ ಇದ್ದಾರೆ. ಮಾಜಿ ಸಚಿವ ಅಜಯಕುಮಾರ ಸರನಾಯಕ ಅಧ್ಯಕ್ಷರಾಗಿದ್ದು, ಕಾಂಗ್ರೆಸ್‌ ಮುಖಂಡ ಶಿವಾನಂದ ಉದಪುಡಿ ಉಪಾಧ್ಯಕ್ಷರಾಗಿದ್ದಾರೆ. ಶಾಸಕರಾಗಿರುವ ಎಸ್‌.ಆರ್‌.ಪಾಟೀಲ, ಎಚ್‌.ವೈ. ಮೇಟಿ, ಹನುಮಂತ ನಿರಾಣಿ, ವಿಜಯಾನಂದ ಕಾಶಪ್ಪನವರ ಮುಂತಾದವರು ನಿರ್ದೇಶಕರಾಗಿದ್ದಾರೆ ಹೀಗಾಗಿ ಇಡಿ ಅಧಿಕಾರಿಗಳು ವಿಚಾರಣೆಯನ್ನು ಚುರುಕುಗೊಳಿಸಿದ್ದಾರೆ.[ಸಿಬಿಐ ಜಾಲಕ್ಕೆ ಬಿದ್ದ ಆರ್ ಬಿಐನ ಮೈಕಲ್ ಅಮಾನತು]

ಇನ್ನು ಈ ಸಂಬಂಧ ಜಾರಿ ನಿರ್ದಶನಾಲಯದ ಅಧಿಕಾರಿ ರಾಜೇಶ್ ಬೃಹತ್ ಮೊತ್ತವನ್ನು ಜಮೆ ಮಾಡಿಕೊಂಡಿರುವ ಹಲವು ಬ್ಯಾಂಕುಗಳನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಇವುಗಳಲ್ಲಿ ಬಾಗಲಕೋಟೆಯ ಜ್ಯೋತಿ ಪತ್ತಿನ ಸಹಕಾರಿ ಸಂಘಕ್ಕೆ ವ್ಯಕ್ತಿಯೊಬ್ಬರು 25ಲಕ್ಷ ಹಣ ಜಮೆ ಮಾಡಿದ್ದು, ಅವರನ್ನು ಕರೆ ವಿಚಾರಣೆ ನಡೆಸಿದ್ದಾರೆ. ಆ ವ್ಯಕ್ತಿ ಹೊಲ ತೋಟ ಮಾರಿದ ದಾಖಲೆ ತೋರಿಸಿದ್ದಯ ಯಾವುದೇ ಅನುಮಾನ ವ್ಯಕ್ತವಾಗಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The DCC bank in Bagalkot alone had cash deposits of Rs 162 crore, whose management involves several politicians.
Please Wait while comments are loading...