ದಸರಾ ಅಂಗವಾಗಿ ಮಂಗಳೂರು, ಬೆಂಗಳೂರು ವಿಶೇಷ ರೈಲು
Recommended Video
ಬೆಂಗಳೂರು, ಸೆಪ್ಟೆಂಬರ್ 26 : ದಸರಾ ಅಂಗವಾಗಿ ನೈಋತ್ಯ ರೈಲ್ವೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲಿನ ವ್ಯವಸ್ಥೆ ಮಾಡಿದೆ. ಅಕ್ಟೋಬರ್ 4 ಮತ್ತು 8ರಂದು ವಿಶೇಷ ರೈಲು ಉಭಯ ನಗರಗಳ ನಡುವೆ ಸಂಚಾರ ನಡೆಸಲಿದೆ.
ದಸರಾ ಸಂದರ್ಭದಲ್ಲಿ ಸಾಕಷ್ಟು ಜನರು ಉಭಯ ನಗರಗಳ ನಡುವೆ ಸಂಚಾರ ನಡೆಸಲಿದ್ದಾರೆ. ಆದ್ದರಿಂದ ಪ್ರಯಾಣಿಕರ ಹಿತದೃಷ್ಟಿಯಿಂದ ವಿಶೇಷ ರೈಲಿನ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸುವಿಧಾ ಸ್ಪೆಷಲ್ ಎಂಬ ಹೆಸರಿನಲ್ಲಿ ರೈಲು ಸಂಖ್ಯೆ 82655, ರೈಲು ಸಂಖ್ಯೆ 82656 ಬೆಂಗಳೂರು-ಮಂಗಳೂರು ನಡುವೆ ಸಂಚಾರ ನಡೆಸಲಿವೆ. ರೈಲು ಸಂಚಾರದ ವೇಳಾಪಟ್ಟಿಯನ್ನು ನೈಋತ್ಯ ರೈಲ್ವೆ ಬಿಡುಗಡೆ ಮಾಡಿದೆ.

ರೈಲಿನ ವೇಳಾಪಟ್ಟಿ : ಅಕ್ಟೋಬರ್ 4ರಂದು ರಾತ್ರಿ 10.20ಕ್ಕೆ ಯಶವಂತಪುರ ಜಂಕ್ಷನ್‌ನಿಂದ ಹೊರಡುವ ರೈಲು ಅಕ್ಟೋಬರ್ 5ರಂದು ಬೆಳಗ್ಗೆ 8.30ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.
ಅಕ್ಟೋಬರ್ 8ರಂದು ರಾತ್ರಿ 10.15ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಡುವ ಸುವಿಧಾ ವಿಶೇಷ ರೈಲು ಅಕ್ಟೋಬರ್ 9ರಂದು ಬೆಳಗ್ಗೆ 8 ಗಂಟೆಗೆ ಯಲಹಂಕ ರೈಲ್ವೆ ನಿಲ್ದಾಣಕ್ಕೆ ಆಗಮಿಸಲಿದೆ.












Click it and Unblock the Notifications