Darshan Thoogudeepa: ಇಂದು ಸಂಜೆಯೇ ಬಳ್ಳಾರಿ ಜೈಲಿನಿಂದ ದರ್ಶನ್ ರಿಲೀಸ್!
ಬೆಂಗಳೂರು, ಅಕ್ಟೋಬರ್ 30: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ ಗೆ ಬಿಗ್ ರಿಲೀಫ್ ಸಿಕ್ಕಿದ್ದು, 131 ದಿನಗಳ ಬಳಿಕ ದರ್ಶನ್ ಗೆ ಬಿಡುಗಡೆಯ ಭಾಗ್ಯ ಸಿಕ್ಕಿದೆ. ನಟ ದರ್ಶನ್ ಗೆ ಹೈಕೋರ್ಟ್ 6 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿ ಕೋರ್ಟ್ ಆದೇಶ ಹೊರಡಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿಯ ಜೈಲಿನಲ್ಲಿರು ನಟ ದರ್ಶನ್ ಅವರು ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದಂತ ಹೈಕೋರ್ಟ್, ಇಂದು ಕಾಯ್ದಿರಿಸಿದ್ದಂತ ತೀರ್ಪು ಪ್ರಕಟಿಸಿದ್ದು, ಇಂದು ದರ್ಶನ್ ಗೆ ಮಧ್ಯಂತರ ಜಾಮೀನು ನೀಡಿ ಆದೇಶ ಹೊರಡಿಸಿದ್ದು, ನಟ ದರ್ಶನ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ.

ನಟ ದರ್ಶನ್ ಅವರ ಅಭಿಮಾನಿಗಳಿಗೆ ಇಂದೇ ದೀಪಾವಳಿ ಹಬ್ಬವಾಗಿದ್ದು, ನಟ ದರ್ಶನ್ ಅವರು ಇಂದು ಸಂಜೆಯೇ ಬಳ್ಳಾರಿ ಜೈಲಿನಿಂದ ದರ್ಶನ್ ಅವರು ಬಿಡುಗಡೆಯಾಗಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ನಟ ದರ್ಶನ್ ಗೆಕೆಲವು ಷರತ್ತುಗಳನ್ನು ಸಹ ಕೋರ್ಟ್ ವಿಧಿಸಲಾಗಿದ್ದು, ಜಾಮೀನು ಅವಧಿ ಆರು ವಾರಗಳ ಕಾಲ ಮಾತ್ರವೇ ಇರಲಿದೆ. ಸಾಮಾನ್ಯ ವ್ಯಕ್ತಿಗಳ ಪ್ರಕರಣದಲ್ಲಿ ಜಾಮೀನು ಸಿಕ್ಕ ಬಳಿಕ ಜೈಲಿನಿಂದ ಬಿಡುಗಡೆ ಆಗಲು ಕೆಲ ದಿನಗಳ ಸಮಯ ಬೇಕಾಗುತ್ತದೆ. ಜಾಮೀನು ಆದೇಶದ ಪ್ರತಿಯನ್ನು ನ್ಯಾಯಾಲಯವು ಸಂಬಂಧಪಟ್ಟ ಜೈಲಿಗೆ ಕಳಿಸಬೇಕಾಗುತ್ತದೆ. ಅದಕ್ಕೆ ಮುನ್ನ ಜಾಮೀನುದಾರರು ಷರತ್ತುಗಳನ್ನು ಪೂರೈಸಬೇಕಿರುತ್ತದೆ.
ನ್ಯಾಯಾಲಯದ ಆದೇಶ ಪ್ರತಿಯನ್ನು ಬೈ ಹ್ಯಾಂಡ್ ಬಳ್ಳಾರಿ ಜೈಲಿಗೆ ತಲುಪಿಸಲಾಗುತ್ತದೆ. ಆದೇಶ ಹೊರಬಿದ್ದ ಬಳಿಕ ಆದೇಶ ಪ್ರತಿಯನ್ನು ಪ್ರಿಂಟ್ ಹಾಕಿಸಿಕೊಂಡು ದರ್ಶನ್ ಪರವಾದವರು ಆದೇಶ ಪ್ರತಿಯನ್ನು ಬಳ್ಳಾರಿ ಜೈಲಿಗೆ ಹೋಗಿ ತಲುಪಿಸುತ್ತಾರೆ. ಆದೇಶ ಪ್ರತಿ ತೆಗೆದುಕೊಳ್ಳುವ ಜೈಲು ಸಿಬ್ಬಂದಿ ಅದನ್ನು ಪರಿಶೀಲಿಸಿ ದರ್ಶನ್ ಅನ್ನು ಬಿಡುಗಡೆಗೊಳಿಸಲಿದ್ದಾರೆ. ಹೀಗಾಗಿ ದರ್ಶನ್ ಬಹುತೇಕ ಇಂದೇ ಅಂದರೆ ಅಕ್ಟೋಬರ್ 30ರಂದೇ ಜೈಲಿನಿಂದ ಹೊರಗೆ ಬರುವ ಸಾಧ್ಯತೆ ಇದೆ.
ನಟ ದರ್ಶನ್‌ಗೆ ಮಧ್ಯಂತರ ಜಾಮೀನು ಕುರಿತಿ ವಕೀಲರಾದ ಸುನೀಲ್ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿ, ದರ್ಶನ್ ಅವರಿಗೆ ಬೆನ್ನು ಹುರಿಯಲ್ಲಿ ಸಮಸ್ಯೆ ಇದೆ. ಅವರ ಎಲ್5 ಮತ್ತು ಎಸ್1 ಅಲ್ಲಿ ಸಮಸ್ಯೆಯಿದ್ದು ಸೂಕ್ತ ಚಿಕಿತ್ಸೆ ತುರ್ತು ಅಗತ್ಯವಿದೆ. ದರ್ಶನ್‌ಗೆ ಈ ಸಮಸ್ಯೆ ಈಗ ಬಂದಿದ್ದಲ್ಲ, ಅಥವಾ ರೇಣುಕಾ ಸ್ವಾಮಿ ಕೊಲೆ ಪ್ರಕರಣ ಆದ ಬಳಿಕ ಬಂದಿದ್ದಲ್ಲ, ಅವರಿಗೆ ಈ ಸಮಸ್ಯೆ 2022-23 ರಿಂದಲೂ ಇದೆ. ಅದಕ್ಕೆ ಅವರು ಚಿಕಿತ್ಸೆ ಪಡೆದಿದ್ದರು ಆದರೆ ಅದು ಸರಿ ಹೋಗಿರಲಿಲ್ಲ. ಅದರ ವರದಿಗಳನ್ನು ನಾವು ನ್ಯಾಯಾಲಯಕ್ಕೆ ಸಲ್ಲಿಸಿದ್ದೆವು ಎಂದು ಹೇಳಿದ್ದಾರೆ.
ಇನ್ನು ದರ್ಶನ್ ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಎಂಬುದನ್ನು ಅವರು ಮತ್ತು ಅವರ ಕುಟುಂಬದವರು ನಿರ್ಧಾರ ಮಾಡುತ್ತಾರೆ. ಅವರು ನಿರ್ಧಾರ ಮಾಡಿದ ಬಳಿಕ ಅದರ ವಿವರವನ್ನು ನಾವು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಿದ್ದೇವೆ. ಈಗ ದರ್ಶನ್ರನ್ನು ತಪಾಸಣೆ ಮಾಡಿರುವ ವೈದ್ಯರು ಸಹ ಮುಚ್ಚಿದ ಲಕೋಟೆಯನ್ನು ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅದನ್ನೆಲ್ಲ ಪರಿಗಣಿಸಿ ಈಗ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.












Click it and Unblock the Notifications