Darshan Case: ಜೈಲಾಧಿಕಾರಿಗಳಿಂದ ನ್ಯಾಯಾಂಗ ನಿಂದನೆ: ಕೋರ್ಟ್ ಮೊರೆಹೋದ ದರ್ಶನ್ ಪರ ವಕೀಲ

Darshan Thoogudeepa Case: ಚಿತ್ರದುರ್ಗ ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ ಅವರ ಜೈಲಿನ ನರಕಯಾತನೆ ಮುಂದುವರಿದಿದೆ. ಕನಿಷ್ಠ ಸೌಲಭ್ಯಗಳಿಗಾಗಿ ಕೋರ್ಟ್ ಆದೇಶ ನೀಡಿತ್ತು. ಇದೀಗ ಕೋರ್ಟ್ ಆದೇಶ ಉಲ್ಲಂಘಿಸಿದ್ದಕ್ಕಾಗಿ ಜೈಲಾಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿಯನ್ನು ಆರೋಪಿ ದರ್ಶನ್ ಪರ ವಕೀಲರು ಸೋಮವಾರ ಸಲ್ಲಿಸಿದ್ದಾರೆ.

ಹೌದು, ಇತ್ತೀಚೆಗೆ ನಟ ದರ್ಶನ್ ಹೆಚ್ಚುವರಿ ಹಾಸಿಗೆ, ದಿಂಬು, ಬೆಡ್‌ ಶೀಟ್ ನೀಡುವಂತೆ ಹಾಗೂ ತಮ್ಮನ್ನು ಬೆಂಗಳೂರಿನಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡುವಂತೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇವುಗಳ ವಿಚಾರಣೆ ವೇಳೆ ನಟ ದರ್ಶನ್ ಹಾಗೂ ಇತರ ಆರೋಪಿಗಳು ವಿಡಿಯೋ ಕಾನ್ಫ್‌ರೆನ್ಸ್ ಮೂಲಕ ಹಾಜರಾಗಿದ್ದರು.

Darshan s Jail Ordeal Continues Lawyer Files Contempt Plea Against Prison Officials

ಈ ವೇಳೆ ನ್ಯಾಯಾಲಯದಿಂದ ತಮಗೆ ವಿಷ ನೀಡುವಂತೆ ಆದೇಶಿಸಬೇಕು. ನನಗೆ ಇಲ್ಲಿ ಬದುಕಲು ಆಗುತ್ತಿಲ್ಲ. ಬಿಸಿಲಿನ ದರ್ಶನವೇ ಆಗಿಲ್ಲ. ಕೈಗಳಿಗೆ ಫಂಗಸ್ ಉಂಟಾಗಿದೆ ಎಂದೆಲ್ಲ ನಟ ದರ್ಶನ್ ಮನವಿ ಮಾಡಿದ್ದರು. ಹಾಗೆ ಆದೇಶಿಸಲು ಬರುವುದಿಲ್ಲ. ಈ ರೀತಿ ಕೇಳುವುದು ತಪ್ಪು. ನಿಮಗೆ ಜೈಲಿನ ನಿಯಮಗಳ ಅಡಿಯಲ್ಲಿ ಕನಿಷ್ಠ ಸೌಲಭ್ಯ ಒದಗಿಸಲಾಗುವುದು. ನಂತರ ಜೈಲಿನ ಆವರಣದಲ್ಲಿ ಓಡಾಟಕ್ಕೆ ಅನುಮತಿ ನೀಡಿ ನ್ಯಾಯಾಧೀಶರು ಸೆಪ್ಟಂಬರ್ 09ರಂದು ಆದೇಶಿಸಿದ್ದರು. ಈ ವೇಳೆ ಬಳ್ಳಾರಿ ಜೈಲಿಗೆ ಸ್ಥಳಾಂತರಕ್ಕೆ ಯಾವುದೇ ಸಕಾರಣ ಇಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟು ದರ್ಶನ್ ಮನವಿಯನ್ನು ನಿರಾಕರಿಸಿತ್ತು.

ಮೋರ್ಟ್ ಆದೇಶ ಪಾಲಿಸಿದ ಜೈಲಾಧಿಕಾರಿಗಳು: ವಕೀಲ

ಇದಾದ ಬಳಿಕ ಜೈಲು ಅಧಿಕಾರಿಗಳಿಗೆ ಆದೇಶ ಪ್ರತಿ ಇ-ಮೇಲ್ ಕಳುಹಿಸಲಾಗಿದೆ. ಆದರೆ ಇದಕ್ಕೆ ಅವರಿಂದ ಸ್ಪಂದನೆ ಸಿಕ್ಕಿಲ್ಲ . ಅಲ್ಲದೇ ಜೈಲಲ್ಲಿರುವ ದರ್ಶನ್ ಅವರಿಗೆ ಕನಿಷ್ಠ ಸೌಲಭ್ಯ ನೀಡುವಂತೆ ಕೋರ್ಟ್ ಆದೇಶ ನೀಡಿದ್ದರು ಸಹಿತ ಸೌಲಭ್ಯಗಳನ್ನು ನೀಡಿಲ್ಲ. ಜೈಲಾಧಿಕಾರಿಗಳು ಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದು ಸ್ಪಷ್ಟವಾಗಿದೆ ಎಂದು ದರ್ಶನ್ ಪರ ವಕೀಲ ಸುನೀಲ್ ಅವರು ದೂರಿದ್ದಾರೆ.

ಅಲ್ಲದೇ ದರ್ಶನ್‌ಗೆ ದಿಂಬು ಹಾಸಿಗೆ ಸೇರಿ ಅಗತ್ಯ ಸೌಲಭ್ಯ ಸಿಗುತ್ತಿದೆಯೊ ಇಲ್ಲವೋ ಎಂದು ನಾನೇ ಜೈಲಿಗೆ ಹೋಗಿ ವಿಚಾರಿಸಿದ್ದೇನೆ. ಜೈಲಾಧಿಕಾರಿಗಳು ಕೋರ್ಟ್ ಆದೇಶ ಪಾಲಿಸಿಲ್ಲ. ಇದರಿಂದ ದರ್ಶನ್‌ ಅವರಿಗೆ ತೊಂದರೆ ಆಗುತ್ತಿದೆ. ನ್ಯಾಯಾಂಗ ನಿಂದನೆ ಆಗಿದೆ ಎಂದು ಉಲ್ಲೇಖಿಸಿ ಅರ್ಜಿ ಸಲ್ಲಿಸಿದ್ದಾರೆ. ಜೈಲಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಅವರು ಒತ್ತಾಯಿಸಿದ್ದಾರೆ. ಸದ್ಯ ಈ ಅರ್ಜಿ ವಿಚಾರಣೆ ನಡೆಯಬೇಕಿದೆ. ಜೈಲಾಧಿಕಾರಿಗಳು ಸೌಲಭ್ಯ ಒದಗಿಸುವವರೆಗೂ ದರ್ಶನ್ ಯಾತನೆ ಮುಂದುವರಿಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+