ಸ್ವರಾಜ್ ಇಂಡಿಯಾದ ದರ್ಶನ್ ಪುಟ್ಟಣ್ಣಯ್ಯ ಪರ 5 ರೂಪಾಯಿ ಡಾಕ್ಟರ್ ಪ್ರಚಾರ
ಇತ್ತೀಚೆಗೆ ವಿಧಿವಶರಾದ ರೈತ ನಾಯಕ ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್ ಪುಟ್ಟಣ್ಣಯ್ಯ ಅವರು ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿಯಾಗಿದ್ದು, ಹೊಸ ಅಲೆಯ ರಾಜಕೀಯದ ಭರವಸೆ ಮೂಡಿಸಿರುವ ಅವರು ಈಗಾಗಲೇ ಮೇಲುಕೋಟೆಯಲ್ಲಿ ಪ್ರಚಾರ ಪ್ರಾರಂಭಿಸಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ
ಜನಸಮಾನ್ಯರನ್ನು, ರೈತರನ್ನು ವಿಧಾನಸಭೆಯಲ್ಲಿ ಪ್ರತಿನಿಧಿಸಲು ಅವಕಾಶ ನೀಡುವಂತೆ ಮನವಿ ಮಾಡುತ್ತಿರುವ ಅವರಿಗೆ ಮಂಡ್ಯದಲ್ಲಿ ರಾಜಕೀಯ ಪ್ರಭಾವಿಗಳು, ಸಿನಿ ತಾರೆಗಳಷ್ಟೆ ಜನಪ್ರಿಯತೆ, ಜನಾನುರಾಗ ಹೊಂದಿರುವ '5 ರೂಪಾಯಿ ಡಾಕ್ಟರ್' ಎಂದೇ ಖ್ಯಾತರಾಗಿರುವ ಡಾ.ಶಂಕರೇಗೌಡ ಅವರ ಬೆಂಬಲ ಕೂಡಾ ದೊರಕಿದೆ.
ನಿನ್ನೆಯಷ್ಟೆ (ಏಪ್ರಿಲ್ 05) ಡಾ.ಶಂಕರೇಗೌಡ ಅವರನ್ನು ಭೇಟಿ ಆಗಿದ್ದ ದರ್ಶನ್ ಪುಟ್ಟಣ್ಣಯ್ಯ ಅವರು ತಮ್ಮ ಪರ ಪ್ರಚಾರದಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ.

ಈ ಬಗ್ಗೆ ತಮ್ಮ ಫೇಸ್‌ಬುಕ್‌ನಲ್ಲಿ ಚಿತ್ರ ಸಹಿತ ಮಾಹಿತಿ ಹಂಚಿಕೊಂಡಿರುವ ದರ್ಶನ್ ಪುಟ್ಟಣ್ಣಯ್ಯ ಅವರು, 'ಡಾ.ಶಂಕರೇಗೌಡ ಅವರು ನನ್ನ ಪರ ಪ್ರಚಾರಕ್ಕೆ ಆಗಮಿಸುವುದಕ್ಕೆ ಒಪ್ಪಿಕೊಂಡಿರುವುದು ಅತೀವ ಸಂತಸ ತಂದಿದೆ. ರೈತಪರ ಕಾಳಜಿಯುಳ್ಳ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಗೆ ಸಂಪೂರ್ಣ ಬೆಂಬಲ ನೀಡುತ್ತೆನೆ ಎಂದು ತಿಳಿಸಿದ್ದಾರೆ' ಎಂದು ಅವರು ಬರೆದುಕೊಂಡಿದ್ದಾರೆ.

ರಾಜ್ಯದಲ್ಲಿ ಮುಂಚೂಣಿಯಲ್ಲಿರುವ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಆಹ್ವಾನ ಇದ್ದರೂ ಕೂಡ ಸ್ವರಾಜ್ ಪಕ್ಷದಂತಹಾ ಸಿದ್ದಾಂತ ಉಳ್ಳ ಪಕ್ಷದ ಕಡೆ ವಾಲಿ ತಮ್ಮ ಆದ್ಯತೆ ಏನೆಂಬುದನ್ನು ಸ್ಪಷ್ಟಪಡಿಸಿದ್ದ ದರ್ಶನ್ ಪುಟ್ಟಣ್ಣಯ್ಯ ಅವರು, ಸಮಾಜ ಸೇವೆಯೇ ಉಸಿರು ಎಂದು ಬದುಕುತ್ತಿರುವ ಡಾ.ಶಂಕರೇಗೌಡ ಅವರ ಬೆಂಬಲ ಸಂಪಾದಿಸಿರುವುದು ದರ್ಶನ್ ಜಯದ ಬಗ್ಗೆ ಭರವಸೆ ಹೆಚ್ಚಿಸಿದೆ.












Click it and Unblock the Notifications