Darshan:‌ ರೇಣುಕಾಸ್ವಾಮಿ ಶವದ ಮುಂದೆ ನಟ ದರ್ಶನ್; ಎಫ್‌ಎಸ್‌ಎಲ್ ರಿಪೋರ್ಟ್ ಸುಪ್ರೀಂಗೆ: ಪರಮೇಶ್ವರ್!

Renukaswamy murder case: ರೇಣುಕಾಸ್ವಾಮಿ ಕೊಲೆ ಕೇಸ್‌ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್ ಅವರು ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್‌ನ ಆರೋಪಿ ಹಾಗೂ ನಟ ದರ್ಶನ್ ತೂಗುದೀಪ್ ಅವರ ಬಗ್ಗೆ ಮಾಹಿತಿಯೊಂದನ್ನು ಹೇಳಿದ್ದಾರೆ. ನಟ ದರ್ಶನ್ ಇದೀಗ ಮಧ್ಯಂತರ ಜಾಮೀನಿನ ಮೇಲೆ ಆರು ವಾರಗಳ ಕಾಲ ಚಿಕಿತ್ಸೆ ಪಡೆಯುವುದಕ್ಕೆಂದು ಹೊರಗೆ ಬಂದಿದ್ದಾರೆ. ಆದರೆ, ಅವರು ಮುಖ್ಯವಾಗಿ ಮಧ್ಯಂತರ ಬೇಲ್ ಮೇಲೆ ಬಂದಿದ್ದೇ ಆಪರೇಷನ್‌ ಮಾಡಿಸಿಕೊಳ್ಳಬೇಕು ಅಂತ. ಆದರೆ, ಇಲ್ಲಿಯ ವರೆಗೂ ದರ್ಶನ್ ಅವರ ಆಪರೇಷನ್‌ ಆಗಿಲ್ಲ ಎನ್ನಲಾಗಿದೆ. ಇದೀಗ ಗೃಹ ಸಚಿವ ಜಿ. ಪರಮೇಶ್ವರ್ ಅವರು ಮಾತನಾಡಿದ್ದಾರೆ.

ನಟ ದರ್ಶನ್‌ಗೆ ಆರು ವಾರಗಳ ಕಾಲ ಮಧ್ಯಂತರ ಜಾಮೀನು ಸಿಕ್ಕಿತ್ತು. ಈಗಾಗಲೇ ಮಧ್ಯಂತರ ಜಾಮೀನಿನ ಅರ್ಧ ಅವಧಿ ಮುಕ್ತಾಯವಾಗಿದೆ. ಈ ಅವಧಿಯಲ್ಲಿ ಅವರು ಆಪರೇಷನ್‌ ಮಾಡಿಸಿಕೊಳ್ಳಬೇಕಾಗಿತ್ತು. ಆದರೆ, ಇಲ್ಲಿಯ ವರೆಗೆ ಆಪರೇಷನ್‌ ಬಗ್ಗೆ ಮಹತ್ವದ ಅಪ್ಡೇಟ್ಸ್‌ಗಳೇನು ಬಂದಿಲ್ಲ. ಅಲ್ಲದೇ ದರ್ಶನ್‌ಗೆ ಆಪರೇಷನ್‌ ಯಾವಾಗ ಹಾಗೂ ಯಾವ ರೀತಿಯ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವ ಬಗ್ಗೆಯೂ ಮಾಹಿತಿ ಹಂಚಿಕೊಂಡಿಲ್ಲ ಅಂತ ಪ್ರಾಸಿಕ್ಯೂಷನ್ ಸಹ ಈಚೆಗೆ ಆಕ್ಷೇಪಣೆ ವ್ಯಕ್ತಪಡಿಸಿತ್ತು. ಇದೀಗ ಜಿ. ಪರಮೇಶ್ವರ್‌ ಅವರೇ ಈ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಜಿ. ಪರಮೇಶ್ವರ್‌ ಅವರು ಹೇಳಿರುವ ಮಾತುಗಳು ಭಾರೀ ಸಂಚಲನಕ್ಕೆ ಕಾರಣವಾಗಿದೆ.

Darshan photo in front of Renukaswamy corpse Report to the Supreme Court Parameshwar

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿನ ವಿಷಯವೊಂದನ್ನು ಜಿ. ಪರಮೇಶ್ವರ್ ಅವರು ಬಹಿರಂಗಪಡಿಸಿದ್ದು, ಈ ವಿಷಯ ಮುಂದಿನ ದಿನಗಳಲ್ಲಿ ನಟ ದರ್ಶನ್‌ಗೆ ಸಂಕಷ್ಟ ತಂದೊಡ್ಡುವ ಸಾಧ್ಯತೆ ಹೆಚ್ಚು ಅಂತಲೇ ಹೇಳಲಾಗ್ತಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಅವರ ವಿರುದ್ಧ ಪ್ರಬಲ ಸಾಕ್ಷ್ಯಗಳಿವೆ ಎಂದು ಎನ್ನುವ ಮಾತು ಈ ಹಿಂದಿನಿಂದಲೂ ಕೇಳಿ ಬಂದಿತ್ತು. ಅಲ್ಲದೇ ದರ್ಶನ್ ಅವರು 100 ದಿನಗಳಿಗೂ ಹೆಚ್ಚು ಜೈಲಿನಲ್ಲಿದ್ದರು. ಈ ಕೇಸ್‌ ಅನ್ನು ರಾಜ್ಯ ಪೊಲೀಸ್‌ ಇಲಾಖೆಯು ಅತ್ಯಂತ ಸೂಕ್ಷ್ಮವಾಗಿ ನಿಭಾಯಿಸುತ್ತಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ಅಗತ್ಯ ಹಾಗೂ ಪ್ರಮುಖ ದಾ ಖಲೆಗಳನ್ನು ಪೊಲೀಸ್‌ ಇಲಾಖೆ ಸಂಗ್ರಹಿಸಿದೆ ಎಂದು ಹೇಳಲಾಗಿತ್ತು.

ಎಫ್ಎಸ್‌ಎಲ್ ರಿಪೋರ್ಟ್

ರೇಣುಕಾಸ್ವಾಮಿ ಕೊಲೆ ಕೇಸ್‌ ಹಾಗೂ ಕೊಲೆ ನಡೆದ ಜಾಗದಲ್ಲಿ ನಟ ದರ್ಶನ್ ಅವರ ಪೋಟೋ ಸಿಕ್ಕಿರುವ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್ ಅವರು ಮಾತನಾಡಿದ್ದಾರೆ. ಕೊಲೆಯಾದ ಜಾಗದಲ್ಲಿ ನಟ ದರ್ಶನ್ ಇರುವ ಪೋಟೋ ಪೊಲೀಸರಿಗೆ ಸಿಕ್ಕಿದೆ ಎನ್ನುವ ಬಗ್ಗೆ ಹೇಳಿದ್ದಾರೆ. ಆ ಪೋಟೋ ಬಗ್ಗೆ ನಾವು ಎಫ್ಎಸ್‌ಎಲ್ ರಿಪೋರ್ಟ್ (ವಿಧಿ ವಿಜ್ಞಾನ ಪ್ರಯೋಗಾಲಯ ವರದಿ - FSL)ಗೆ ಪಡೆಯುವುದಕ್ಕಾಗಿ ನಾವು ಅದನ್ನು ಹೈದರಾಬಾದ್‌ಗೆ ಕಳುಹಿಸಿದ್ದೆವು. ಆ ತಂತ್ರಜ್ಞಾನ ನಮ್ಮ ಬಳಿ ಇಲ್ಲ. ಈ ಪೋಟೋದಲ್ಲಿ ದರ್ಶನ್‌ ಅಲ್ಲಿರುವುದು ದೃಢಪಟ್ಟಿದೆ. ಯಾರೋ ಜೊತೆಯಲ್ಲಿದ್ದವರು ವಿಡಿಯೋ ಮಾಡ್ಕೊಂಡಿದ್ದ ಎಂದಿದ್ದಾರೆ.

ಎಫ್ಎಸ್‌ಎಲ್ ರಿಪೋರ್ಟ್ ಅನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಬ್ಮಿಟ್‌ ಮಾಡಿ ಬೇಲ್‌ ಕ್ಯಾನ್ಸಲ್‌ ಮಾಡುವುದಕ್ಕೆ ಮನವಿ ಸಲ್ಲಿಸಲಾಗುವುದು. ಎಫ್ಎಸ್‌ಎಲ್ ರಿಪೋರ್ಟ್‌ಗಾಗಿ ಕಾಯುತ್ತಿದ್ದೆವು. ಅದನ್ನು ಪ್ರೋಡ್ಯೂಸ್ ಮಾಡಲಾಗುವುದು. ಮುಂದಿನ ಕ್ರಮ ಆಗಬೇಕು ಎಂದು ತನಿಖೆ ನಡೆದಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ದರ್ಶನ್‌ ಆಪರೇಷನ್‌ ವಿಚಾರದ ಬಗ್ಗೆಯೂ ಅವರು ಮಾತನಾಡಿದ್ದಾರೆ.

ಇದರಿಂದಲೇ ಅವರಿಗೆ ಆಪರೇಷನ್‌ನ ಅಗತ್ಯ ಇಲ್ಲ ಎನ್ನುವುದು ಗೊತ್ತಾಗ್ತಿದೆ. ಈ ಹಿಂದೆ ನಾಳೆ ನಾಡಿದ್ದರಲ್ಲಿ ಆಪರೇಷನ್ ಮಾಡಿಲ್ಲ ಅಂತಾದ್ರೆ ಬೆನ್ನುಮೂಳೆ ಮುರಿದೇ ಹೋಗುತ್ತದೆ ಅಂತ ಹೇಳಿದ್ದರು. ಇದೀಗ ಮಧ್ಯಂತರ ಜಾಮೀನು ಸಿಕ್ಕು ಇಷ್ಟು ದಿನವಾದರೂ ಡಾಕ್ಟರ್‌ಗಳು ಆಪರೇಷನ್‌ಗೆ ಕೈ ಹಾಕಿಲ್ಲ ಎಂದಿದ್ದಾರೆ. ಅಲ್ಲದೇ ಈ ಬಗ್ಗೆ ಕೋರ್ಟ್ ವ್ಯವಸ್ಥೆಯಲ್ಲಿ ತೀರ್ಮಾನವಾಗಬೇಕಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+