ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಭಾರತದಲ್ಲಿಯೇ ಕರ್ನಾಟಕದ ರಸ್ತೆ ಅಪಾಯಕಾರಿ!

|
Google Oneindia Kannada News

ಬೆಂಗಳೂರು, ಡಿಸೆಂಬರ್ 24 : ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕದ ರಸ್ತೆಗಳು ಅಪಾಯಕಾರಿ ಎಂದು ವರದಿಯೊಂದು ಹೇಳಿದೆ. 2017ರಲ್ಲಿ ಪ್ರತಿ 1 ಲಕ್ಷ ಮಂದಿಗೆ ಅಪಘಾತದಲ್ಲಿ ಮೃತಪಟ್ಟವರ ಪ್ರಮಾಣ ಕರ್ನಾಟಕದಲ್ಲಿ 16.9 ಇದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ದೇಶದ ರಸ್ತೆಗಳ ಕುರಿತು ವರದಿಯೊಂದನ್ನು ಬಿಡುಗಡೆ ಮಾಡಿದೆ. ಕಳೆದ 27 ವರ್ಷಗಳಲ್ಲಿ ಪ್ರತಿ ವರ್ಷ ಸಾವಿರಕ್ಕೂ ಹೆಚ್ಚು ಮಂದಿ ರಸ್ತೆ ಅಪಘಾತದಿಂದ ಸಾವನ್ನಪ್ಪುತ್ತಿದ್ದಾರೆ ಎಂದು ವರದಿ ಹೇಳಿದೆ.

ದಕ್ಷಿಣ ಭಾರತದ ಅಪಾಯಕಾರಿ ರಸ್ತೆಗಳನ್ನು ಹೊಂದಿರುವ ರಾಜ್ಯಗಳಲ್ಲಿ ತಮಿಳುನಾಡು ಮೊದಲ ಸ್ಥಾನದಲ್ಲಿದೆ. ಪ್ರತಿ ಲಕ್ಷ ಮಂದಿಗೆ ಅಪಘಾತದಲ್ಲಿ ಸಾವನ್ನಪ್ಪುವವರ ಪ್ರಮಾಣ 20ರಷ್ಟಿದೆ. 2ನೇ ಸ್ಥಾನದಲ್ಲಿ ಕರ್ನಾಟಕವಿದೆ.

Dangers Roads Karnataka Top Two In South India

ಆಂಧ್ರ ಪ್ರದೇಶದಲ್ಲಿ 15.8, ತೆಲಂಗಾಣ 14.4, ಕೇರಳ 14 ಮತ್ತು ಗೋವಾ 11.1ರಷ್ಟು ಪ್ರಮಾಣವನ್ನು ಹೊಂದಿದೆ. ದೇಶದಲ್ಲಿಯೇ ಅಪಾಯಕಾರಿ ರಸ್ತೆಯನ್ನು ಹೊಂದಿರುವ ರಾಜ್ಯ ಉತ್ತರಾಖಂಡ. 1 ಲಕ್ಷ ಮಂದಿಗೆ ಮೃತಪಡುವವರ ಪ್ರಮಾಣ 26.3 ರಷ್ಟಿದೆ.

ಕಳೆದ ಮೂರು ದಶಕಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದ ರಸ್ತೆಗಳ ಸ್ಥಿತಿ ಬದಲಾಗಿದೆ. ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕೇರಳಕ್ಕಿಂತ ಉತ್ತಮ ರಸ್ತೆಗಳನ್ನು ಕರ್ನಾಟಕ ಹೊಂದಿತ್ತು. ಆಗ ಗೋವಾ ಮಾತ್ರ ಕರ್ನಾಟಕಕ್ಕಿಂತ ಉತ್ತಮ ರಸ್ತೆ ಹೊಂದಿತ್ತು.

2019ರಲ್ಲಿ ಪ್ರಕಟಗೊಂಡ ವರದಿ ಪ್ರಕಾರ ಕಳೆದ 5 ವರ್ಷಗಳಲ್ಲಿ ಕರ್ನಾಟಕದಲ್ಲಿ 2.2 ಲಕ್ಷ ರಸ್ತೆ ಅಪಘಾತ ಪ್ರಕರಣಗಳು ದಾಖಲಾಗಿವೆ. ಸುಮಾರು 54,000 ಜನರು ಮೃತಪಟ್ಟಿದ್ದಾರೆ. 2018ರಲ್ಲಿ 41,707, 2017ರಲ್ಲಿ 42,542 ರಸ್ತೆ ಅಪಘಾತ ಪ್ರಕರಣಗಳು ಕರ್ನಾಟಕದಲ್ಲಿ ದಾಖಲಾಗಿದ್ದವು.

English summary
Karnataka in the top two in the list of dangers roads in south India. 16.9 percent people killed in road accidents in state in 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X